ನವದೆಹಲಿ : ದೆಹಲಿ ವಕ್ಫ್ ಬೋರ್ಡ್ ನೇಮಕಾತಿಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ ಎಎಪಿ ಶಾಸಕ ಅಮಾನತುಲ್ಲಾ ಖಾನ್ ಅವರನ್ನು ನಾಲ್ಕು ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ.
VIDEO: “Welcome to 40% CM” : ತೆಲಗಾಂಣದಲ್ಲಿ ಬೊಮ್ಮಾಯಿ ಕಾಲೆಳೆದು ಸ್ವಾಗತ ಕೋರಿದ ತೆಲಂಗಾಣದ ಟಿಆರ್ಎಸ್
ದೆಹಲಿಯ ಭ್ರಷ್ಟಾಚಾರ ನಿಗ್ರಹ ದ ಶುಕ್ರವಾರದಂದು ಅಮಾನತುಲ್ಲಾ ಖಾನ್ ಅವರ ಸಹಾಯಕರ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿದ ಬಳಿಕ ಖಾನ್ ಅವರನ್ನು ಬಂಧಿಸಿದೆ.
ದೆಹಲಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಶುಕ್ರವಾರ ಖಾನ್ ಮತ್ತು ಅವರ ವ್ಯಾಪಾರ ಪಾಲುದಾರ ಹಮೀದ್ ಅಲಿ ಖಾನ್ ಮಸೂದ್ ಉಸ್ಮಾನ್ ಅವರ ಹಲವು ಸ್ಥಳಗಳ ಮೇಲೆ ದಾಳಿ ನಡೆಸಿತ್ತು. ದಾಳಿಯ ವೇಳೆ ಅಧಿಕಾರಿಗಳು ಒಂದು ಬೆರೆಟ್ಟಾ ಆಯುಧ ಮತ್ತು ಕೆಲವು ಕಾಟ್ರಿಡ್ಜ್ಗಳು ಮತ್ತು 12 ಲಕ್ಷ ರೂ. ನಗದು ವಶಪಡಿಸಿಕೊಂಡಿದ್ದಾರೆ.
ಎಎಪಿ ಕಾರ್ಯಕರ್ತ ಮತ್ತು ಅಮಾನತುಲ್ಲಾ ಖಾನ್ ಅವರ ನಿಕಟವರ್ತಿಯಾಗಿರುವ ಕೌಸರ್ ಇಮಾಮ್ ಸಿದ್ದಿಕಿಯಿಂದ 12 ಲಕ್ಷ ರೂ. ನಗದು ಹಾಗೂ ಶಸ್ತ್ರಾಸ್ತ್ರ ಮತ್ತು ಜೀವಂತ ಕಾಟ್ರಿಡ್ಜ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.