ಬೆಂಗಳೂರು: ಬಳ್ಳಾರಿ ವಿಜಯನಗರ ವೈದ್ಯಕೀಯ ಕಾಲೇಜಿನಲ್ಲಿ ರೋಗಿಗಳು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಗ್ಯ ಸಚಿವ ಸುಧಾಕರ್ ಪ್ರತಿಕ್ರಿಯೆ ನೀಡಿದ್ದಾರೆ. ವಿಮ್ಸ್ ಆಸ್ಪತ್ರೆ ದುರಂತ ಕುರಿತು ಸಮಿತಿ ರಚನೆ ಮಾಡಲಾಗಿದೆ. ಈಗಾಗಲೇ ಡಾ. ಸ್ಮಿತಾ ನೇತೃತ್ವದಲ್ಲಿ ತನಿಖಾ ಸಮಿತಿ ರಚನೆ ಮಾಡಲಾಗಿದೆ. ನಾಳೆ ನಾನು ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ಭೇಟಿ ನೀಡುತ್ತೇನೆ ಎಂದರು.
ನೆರೆ ಸಂತ್ರಸ್ತ ‘ರೈತ’ರಿಗೆ ಗುಡ್ ನ್ಯೂಸ್: ರಾಜ್ಯ ಸರ್ಕಾರದಿಂದ ‘ಬೆಳೆ ಪರಿಹಾರ’ಕ್ಕೆ 300 ಕೋಟಿ ರೂ ಬಿಡುಗಡೆ
ನಗರದಲ್ಲಿ ಮಾತನಾಡಿದ ಅವರು, ಸಮಿತಿ ವರದಿ ಬಂದ ಕೂಡಲೇ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಘಟನೆಯಿಂದ ಸಾವಾಗಿದ್ದು ನಮಗೂ ನೋವು ಆಗಿದೆ. ಮೃತರ ಕುಟುಂಬಕ್ಕೆ5 ಲಕ್ಷ ಪರಿಹಾರ ಘೋಷಿಸಲಾಗಿದೆ. ನಾಳೆ ನಾನು ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ಭೇಟಿ ನೀಡುತ್ತೇನೆ. ಅಲ್ಲಿ ಇಲಾಖೆ ಕಾರ್ಯದರ್ಶಿ ಹಾಗೂ ನಿರ್ದೇಶಕರ ಜತೆ ಸಭೆ ನಡೆಸಲಾಗುವುದು. ಕುಟುಂಬಸ್ಥರು ಮತ್ತು ಅಧಿಕಾರಿಗಳ ಜೊತೆ ಸಮಾಲೋಚನೆ ಮಾಡಲಾಗಿದೆ ಎಂದರು.
ನೆರೆ ಸಂತ್ರಸ್ತ ‘ರೈತ’ರಿಗೆ ಗುಡ್ ನ್ಯೂಸ್: ರಾಜ್ಯ ಸರ್ಕಾರದಿಂದ ‘ಬೆಳೆ ಪರಿಹಾರ’ಕ್ಕೆ 300 ಕೋಟಿ ರೂ ಬಿಡುಗಡೆ
ಇನ್ನು ಸರ್ಕಾರ ಯಾವ ವಿಷಯನ್ನೂ ಮುಚ್ಚಿಡಲ್ಲ. ಗಂಗಾಧರ್ ರನ್ನು ನಿರ್ದೇಶಕರಾಗಿ ನೇಮಿಸಲು ಶಿಫಾರಸು ಬೇಕಿಲ್ಲ. ಶಾಸಕ ಸೋಮಶೇಖರ್ ರೆಡ್ಡಿ ಯ ಶಿಫಾರಸು ಬೇಕಿಲ್ಲ. ಆದರೆ ಶಾಸಕರು ಹೇಳಿದ ತಕ್ಷಣ ನೇಮಕ ಮಾಡಲು ಆಗುವುದಿಲ್ಲ. ಮೆಡಿಕಲ್ ನಿರ್ದೇಶಕರು ಹೇಗೆ ನೇಮಕ ಆಗ್ತಾರೆ ಎಂದು ಪಾಪ ಶಾಕಸರಿಗೆ ಗೊತ್ತಿಲ್ಲ. ಹೀಗಾಗಿ ಇದನ್ನ ಶಾಸಕರು ಸರಿಯಾಗಿ ತಿಳಿದುಕೊಳ್ಳಬೇಕು ಎಂದು ವ್ಯಂಗ್ಯವಾಡಿದ್ದಾರೆ.