ಬೆಂಗಳೂರು: ಇಡಿ ನೋಟಿಸ್ ವಿಚಾರವಾಗಿ ಡಿ.ಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಇಡಿ ವಿಚಾರಣೆಗೆ ಸಿದ್ಧನಿದ್ದೇನೆ. ಇದೇ ವಿಚಾರವಾಗಿ ನಾನು ದೆಹಲಿಗೆ ಹೋಗುತ್ತಿದ್ದೇನೆ ಎಂದು ಹೇಳಿದ್ದಾರೆ.
BIGG NEWS: ಮಹಾರಾಷ್ಟ್ರದ ವೀರ್ ಜಲಾಶಯದಿಂದ ನೀರು ಬಿಡುಗಡೆ; ಭೀಮಾ ನದಿಗೆ ಹೋಗದಂತೆ ಗ್ರಾಮಸ್ಥರಿಗೆ ಎಚ್ಚರಿಕೆ
ನಗರದಲ್ಲಿ ಮಾತನಾಡಿದ ಅವರು, ಸೋಮವಾರ ಇಡಿ ವಿಚಾರಣೆರಣೆ ಹಾಜರುತ್ತೇನೆ. ಆದರೆ ಅಧಿವೇಶನ ಇರುವುದರಿಂದ ಎಕ್ಸ್ ಕ್ಯೂಸ್ ಕೇಳಬಹುದಿತ್ತು. ಒಂದು ವೇಳೆ ಹಾಗೆ ಮಾಡಿದ್ರೆ ನಾನು ಓಡಿ ಹೋದ ಹಾಗಾಗುತ್ತೆ. ಆದ್ದರಿಂದ ನಾನು ಸೋಮವಾರದಂದು ನಡೆಯುವ ವಿಚಾರಣೆಗೆ ಹಾಜರಾಗಲು ತೀರ್ಮಾನಿಸಿದ್ದೇನೆ ಎಂದು ಹೇಳಿದ್ದಾರೆ.
ಇನ್ನು ಡಿ.ಕೆ ಶಿವಕುಮಾರ್ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ವಿಚಾರಣೆ ನಡೆಸುತ್ತಿದೆ.