ಕೆಎನ್ಎನ್ ಡಿಜಿಟಲ್ ಡೆಸ್ಕ್ : ರೈಲು ಪ್ರಯಾಣಿಕರಿಗೆ ಟೀ ಮಾರುತ್ತಲೇ ಹಿಂದಿ ಕಲಿತ ಗುಜರಾತ್ ಮೂಲದ ಬಾಲಕ ಈಗ ದೇಶದ ಹೆಮ್ಮೆಯ ಪುತ್ರನಾಗಿದ್ದಾರೆ. ಬಾಲ್ಯದಲ್ಲೇ ಸೇನೆಗೆ ಸೇರುವ ಹಂಬಲ. ಆದ್ರೆ, ಇತ್ತ ಮನೆಯ ಕಳಪೆ ಆರ್ಥಿಕ ಸ್ಥಿತಿಯಿಂದಾಗಿ, ಅವರ ಆಸೆಗಳ ಹುಂಡಿ ಯಾವಾಗಲೂ ಖಾಲಿಯಾಗಿತ್ತು. ಈ ಕಠಿಣ ಪರಿಶ್ರಮವೇ ಈಗ ವಿಶ್ವದ ಅಗ್ರಗಣ್ಯರ ಸ್ಥಾನದಲ್ಲಿ ಒಬ್ಬರನ್ನಾಗಿಸಿದೆ. ಅವರೇ ನಮ್ಮ ದೇಶದ ಪ್ರಾಧಾನ ಮಂತ್ರಿ ʻನರೇಂದ್ರ ಮೋದಿʼ.
ಸೆ. 17. 1950 ರಲ್ಲಿ ನರೇಂದ್ರ ಮೋದಿ ಅವರು ಗುಜರಾತ್ ರಾಜ್ಯದ ಮೆಹಸಾನಾ ಜಿಲ್ಲೆಯ ವಡನಗರದ ನಿವಾಸಿಗಳಾದ ದಾಮೋದರ ದಾಸ್ ಮುಲಚಂದ್ ಮೋದಿ ಮತ್ತು ಹೀರಾ ಬೆನ್ ಅವರ 4 ಮಕ್ಕಳ ಪೈಕಿ ಮೂರನೆಯವರಾಗಿ ಜನಿಸಿದರು. ವಾದ್ ನಗರ ರೈಲ್ವೆ ನಿಲ್ದಾಣದಲ್ಲಿ ಒಂದು ಚಹಾದ ಅಂಗಡಿಯನ್ನು ನಡೆಸುತ್ತಿದ್ದ ಸಮಯದಲ್ಲಿ ಮೋದಿಯವರು, ತಂದೆಗೆ ಸಹಾಯ ಮಾಡುತ್ತಿದ್ದರು. 60 ರ ದಶಕದ ಮಧ್ಯದಲ್ಲಿ ಇಂಡೋ-ಪಾಕ್ ಯುದ್ಧ ನಡೆದಾಗ ಬಾಲಕ ಮೋದಿ, ರೈಲು ನಿಲ್ದಾಣಗಳಲ್ಲಿ ಸೈನಿಕರಿಗೆ ಸ್ವಯಂಪ್ರೇರಣೆಯಿಂದ ಸೇವೆ ಮಾಡಿದ್ದರು.
ಹೀಗೆ ದಿನ ಕಳೆದಂತೆ ಮೋದಿ ಗುಜರಾತಿನಲ್ಲಿ ಅನೇಕ ಸಾಮಾಜಿಕ-ರಾಜಕೀಯ ಚಳವಳಿಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ)ನ ನಾಯಕರಾಗಿ ಆಯ್ಕೆಯಾಗಿದ್ದರು. ಅಷ್ಟೇ ಅಲ್ಲದೇ ರಾಷ್ಟ್ರಿಯ ಸ್ವಯಂ ಸೇವಕ ಸಂಘದಲ್ಲಿ ಸೇರಿ ಬಹಳ ಸಕ್ರಿಯವಾಗಿ ಕೆಲಸ ಮಾಡಿದರು.
ಶಿಕ್ಷಣ
ಮೋದಿ ಅವರ ಶಿಕ್ಷಣದ ಹಾದಿ ಕಠಿಣವಾಗಿತ್ತು. ಅವರು ರಾಜಕೀಯ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದರು.
ರಾಜಕೀಯ ಜೀವನ
ಗುಜರಾತ್ ನಲ್ಲಿ ತುರ್ತು ಪರಿಸ್ಥಿತಿ ಎದುರಿಸುತ್ತಿರುವ ಸಂಧರ್ಭದಲ್ಲಿ ಆರ್.ಎಸ್.ಎಸ್ ಸಮಿತಿಯಾದ “ಗುಜರಾತ್ ಲೋಕ ಸಂಘರ್ಷ ಸಮಿತಿಯ” ಪ್ರಧಾನ ಕಾರ್ಯದರ್ಶಿಯಾಗಿ ಮೋದಿ ನೇಮಕಗೊಂಡರು.
ಅಕ್ಟೋಬರ್ 2001 ರಿಂದ ಮೇ 2014 ರವರೆಗೆ ಗುಜರಾತಿನ ಸುದೀರ್ಘ ಸೇವೆ ಸಲ್ಲಿಸಿದ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆ ಮೋದಿ ಅವರು ಪಾತ್ರರಾಗಿದ್ದಾರೆ.
24 ಮೇ 2014 ರಂದು ಭಾರತದ ಪ್ರಧಾನಿಯಾಗಿ ಮೋದಿಯವರು ಪ್ರಮಾಣವಚನವನ್ನು ಸ್ವೀಕರಿಸಿದರು. ಮೋದಿಯವರು ಸ್ವತಂತ್ರ ಭಾರತದಲ್ಲಿ ಜನಿಸಿದ ಮೊದಲ ಪ್ರಧಾನಿಯಾಗಿದ್ದಾರೆ. ಅವರು ಮತ್ತೆ 2019 ರ ಮೇ 30 ರಂದು ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದರು.
ಮೋದಿ ಅವರು ತಮ್ಮ ಅಧಿಕಾರಾವಧಿಯಲ್ಲಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಡಿಸೆಂಬರ್ 2014 ರಲ್ಲಿ ಮೋದಿಯವರು ಯೋಜನಾ ಆಯೋಗವನ್ನು ರದ್ದುಪಡಿಸಿ, ಅದರ ಬದಲಿಗೆ ನೀತಿ ಆಯೋಗವನ್ನು (National Institution for Transforming India) ಸ್ಥಾಪಿಸಿದರು. ಅವರ ಈ ನಡೆಯು ಯೋಜನಾ ಆಯೋಗದ ಅಧಿಕಾರವನ್ನು ಕೇಂದ್ರೀಕರಿಸುವ ಕ್ರಮವನ್ನು ಹೊಂದಿತ್ತು.
“ಮನ್ ಕಿ ಬಾತ್” ಹೆಸರಿನ ಮಾಸಿಕ ರೇಡಿಯೋ ಕಾರ್ಯಕ್ರಮವನ್ನು 3 ಅಕ್ಟೋಬರ್ 2014ರಂದು ಪ್ರಾರಂಭಿಸಿದರು. ಇಷ್ಟೇ ಅಲ್ಲದೆ ಮೋದಿಯವರು ಡಿಜಿಟಲ್ ಇಂಡಿಯಾ ಯೋಜನೆಯನ್ನು ಪ್ರಾರಂಭಿಸಿದರು. ಗ್ರಾಮೀಣ ಮನೆಗಳಿಗೆ ಉಚಿತ ಎಲ್ಪಿಜಿ ಸಂಪರ್ಕವನ್ನು ಒದಗಿಸಲು ಮೋದಿಯವರು ಉಜ್ವಲಾ ಯೋಜನೆಯನ್ನು ಪ್ರಾರಂಭಿಸಿತು. ಇನ್ನೂ, ಹಲವು ಯೋಜನೆಗಳನ್ನು ಜಾರಿಗೆ ತರುವ ಮೂಲಕ ಮೋದಿ ಅವರು ದೇಶದ ಜನತೆಯ ನೆಚ್ಚಿನ ನಾಯಕನಾಗಿದ್ದಾರೆ.
PM Modi Birthday: 72 ನೇ ವಸಂತಕ್ಕೆ ಕಾಲಿಟ್ಟ ಪ್ರಧಾನಿ ʻನರೇಂದ್ರ ಮೋದಿʼಗೆ ಅನೇಕ ಗಣ್ಯರಿಂದ ಶುಭಾಶಯಗಳ ಮಹಾಪೂರ
ʻಬಾಯಿಯ ಕ್ಯಾನ್ಸರ್ ʼಸಮಸ್ಯೆ ಕಾಡುತ್ತಾ? ದಿಢೀರ್ ಧೂಮಪಾನ & ಮದ್ಯಪಾನ ತ್ಯಜಿಸಿ : ತಜ್ಞರಿಂದ ಎಚ್ಚರಿಕೆ