ಬೆಂಗಳೂರು : 545 ಪಿಎಸ್ ಐ ನೇಮಕಾತಿ ಅಕ್ರಮ ಪ್ರಕರಣ ಸಂಬಂಧ ಪ್ರಕರಣದ 36 ನೇ ಆರೋಪಿ ಸಿದ್ದರಾಮು ಎಂಬಾತನನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ.
ಪಿಎಸ್ ಐ ನೇಮಕಾತಿ ಹಗರಣದಲ್ಲಿ ಬಂಧಿತ ಆರೋಪಿ ಸಿದ್ದರಾಮು ಮಧ್ಯವರ್ತಿಯಾಗಿದ್ದ. ಪಿಎಸ್ ಐ ಹುದ್ದೆಗೆ ಆಯ್ಕೆಯಾಗಿದ್ದ ಮನೋಜ್ ಹಾಗೂ ಗಜೇಂದ್ರಗೆ ಮಧ್ಯವರ್ತಿಯಾಗಿದ್ದ. ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತೊಡಗಿಕೊಂಡಿದ್ದ ಸಿದ್ದರಾಜು ವಿರುದ್ಧ ಪ್ರಕರಣ ದಾಖಲಿಸಿದ್ದ ಸಿಐಡಿ ಪೊಲೀಸರು ಬಂಧನಕ್ಕಾಗಿ 5 ತಿಂಗಳಿಂದ ಶೋಧ ನಡೆಸಿದ್ದರು.
ಆರೋಪಿ ಸಿದ್ದರಾಜು ಮನೆ ಬಳಿ ತಮಣೆ ಬಾರಿಸಿ ನೋಟಿಸಿ ಅಂಟಿಸಲಾಗಿತ್ತು. ಕೋರ್ಟ್ ನಿಂದ ಜಾಮೀನು ರಹಿತ ವಾರೆಂಟ್ ಜಾರಿಯಾಗಿತ್ತು. ನಿನ್ನೆ ಕೋರ್ಟ್ ಗೆ ಬಂದು ಆರೋಪಿ ಶರಣಾಗಿದ್ದಾನೆ. ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.