ಪುದುಚೇರಿ: ಕೊರೊನಾ ಬೆನ್ನಲ್ಲೇ ಇದೀಗ ಶಾಲಾ ಮಕ್ಕಳಲ್ಲಿ ಜ್ವರ ಕಾಣಿಸಿಕೊಂಡಿದ್ದು, ಇಂದಿನಿಂದ ಸೆಪ್ಟೆಂಬರ್25 ರವರೆಗೆ ಒಂದರಿಂದ 8ನೇ ತರಗತಿಯವರೆಗೆ ವಿದ್ಯಾರ್ಥಿಗಳಿಗೆ ಪುದುಚೇರಿ ಸರ್ಕಾರ ರಜೆ ಘೋಷಿಸಿದೆ.
BIGG NEWS : `PSI’ ನೇಮಕಾತಿ ಹಗರಣ : ಮಧ್ಯವರ್ತಿಯಾಗಿದ್ದ ಆರೋಪಿ ಸಿದ್ದರಾಜು ಬಂಧನ
ಆರೋಗ್ಯ ಇಲಾಖೆಯ ಶಿಫಾರಸಿನ ಮೇರೆಗೆ ಶಾಲೆಗಳನ್ನು ಮುಚ್ಚಲು ಶಾಲಾ ಶಿಕ್ಷಣ ಇಲಾಖೆ ನಿರ್ಧರಿಸಿದೆ. ಕಳೆದ 10 ದಿನಗಳಲ್ಲಿ, ಮಕ್ಕಳಲ್ಲಿ ಜ್ವರ ಸಮಸ್ಯೆ ಕಾಡುತ್ತಿದೆ. ಸಣ್ಣ ಮಕ್ಕಳಲ್ಲಿ ಜ್ವರ ಪ್ರಕರಣ ಏರಿಕೆಯಾಗುತ್ತಿದ್ದು, ಆಸ್ಪತ್ರೆಗಳಲ್ಲಿ ದಾಖಲಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ ಎಂದು ಆರೋಗ್ಯ ಇಲಾಖೆಯಿಂದ ವರದಿಯಾಗಿದೆ
BIGG NEWS : `PSI’ ನೇಮಕಾತಿ ಹಗರಣ : ಮಧ್ಯವರ್ತಿಯಾಗಿದ್ದ ಆರೋಪಿ ಸಿದ್ದರಾಜು ಬಂಧನ
ಈ ಹಿನ್ನೆಲೆ ಪುದುಚೇರಿ ಮತ್ತು ಕಾರೈಕಲ್ ಪ್ರದೇಶ ಸರ್ಕಾರಿ ಮತ್ತು ಖಾಸಗಿ ಶಾಲೆಗಳಿಗೆ ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ವಿ.ಜಿ ಶಿವಗಾಮಿ ಸೆಪ್ಟೆಂಬರ್ 17 ರಿಂದ 25ರ ವರಗೆ ರಜೆ ಘೋಷಿಸಿ ಸುತ್ತೋಲೆ ಹೊರಡಿಸಿದ್ದಾರೆ.
BIGG NEWS : `PSI’ ನೇಮಕಾತಿ ಹಗರಣ : ಮಧ್ಯವರ್ತಿಯಾಗಿದ್ದ ಆರೋಪಿ ಸಿದ್ದರಾಜು ಬಂಧನ
ಸರ್ಕಾರಿ ಸ್ವಾಮ್ಯದ ರಾಜೀವ್ ಗಾಂಧಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಜ್ವರ, ಕೆಮ್ಮು ಮತ್ತು ಶೀತ ಬಾಧೆಯಿಂದ ಈಗಾಗಲೇ ಸಾಕಷ್ಟು ಮಕ್ಕಳು ಚಿಕಿತ್ಸೆ ಪಡೆಯುತ್ತಿದ್ದಾರೆ. ದಿನದಿಂದ ದಿನಕ್ಕೆ ಮಕ್ಕಳ ಆರೋಗ್ಯ ಸಮಸ್ಯೆ ಹೆಚ್ಚಾಗುತ್ತಿರುವುದರಿಂದ ಸರ್ಕಾರ ಈ ಬಗ್ಗೆ ಗಂಭೀರವಾಗಿ ಚಿಂತಿಸಿ ಶಾಲೆಗಳಿಗೆ ರಜೆ ನೀಡಲು ಪುದುಚೇರಿ ಸರ್ಕಾರ ಮುಂದಾಗಿದೆ
Schools shut down following spike in fever cases in Puducherry pic.twitter.com/hcbBZzg8Rg
— Debjani Dutta (@Debjani_TNIE) September 16, 2022