ಬೆಳಗಾವಿ: ಜಿಲ್ಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸತೀಶ್ ಜಾರಕಿಹೊಳಿ ಅವರ ಹೆಸರಿನಲ್ಲಿ ವಿವಾದಾತ್ಮಕ ಪೋಸ್ಟ್ ಹಾಕಿದ್ದವರ ವಿರುದ್ಧ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
BIGG NEWS : ವಾಹನ ಸವಾರರೇ ಎಚ್ಚರ : ಇನ್ಮುಂದೆ ವಾಹನಗಳಲ್ಲಿ `LED’ ದೀಪ ಬಳಸಿದರೆ 500 ರೂ. ದಂಡ!
ಸತೀಶ್ ಜಾರಕಿಹೊಳಿ ಅವರ ಹೆಸರಿನಲ್ಲಿ ರಾಮ ಮಂದಿರ ಹೋರಾಟದಲ್ಲಿ ಸತ್ತ ಹೆಚ್ಚಿನವರು ಓಬಿಸಿಗಳು, ಒಬ್ಬನೇ ಒಬ್ಬ ಬ್ರಾಹ್ಮಣ ಸಾಯಲಿಲ್ಲ. ಆದರೆ, ಈಗ ಮಂದಿರದ ಟ್ರಸ್ಟ್ನ ಪದಾಧಿಕಾರಿಗಳೆಲ್ಲ ಬ್ರಾಹ್ಮಣರು, ಒಬ್ಬನು ಓಬಿಸಿ ಇಲ್ಲ” ಎಂದು ಕೀಡಿಗೇಡಿಗಳು ಪೋಸ್ಟ್ ಮಾಡಿದ್ದಾರೆ. ಇದು ಸತೀಶ್ ಜಾರಕಿಹೊಳಿ ಅವರ ಹೆಸರನ್ನು ಕೆಡಿಸಲು ಹುನ್ನಾರ ಮಾಡಲಾಗಿದೆ. ಈ ಪೋಸ್ಟ್ ಮಾಡಿದವರ ಕುರಿತು ಸೂಕ್ತ ತನಿಖೆ ನಡೆಸಬೇಕು ಅಂತಾ ಕರ್ನಾಟಕ ವಾಲ್ಮೀಕಿ ಯುವ ವೇದಿಕೆ ರಾಜ್ಯಾಧ್ಯಕ್ಷ ವಿಜಯ ಬಸಪ್ಪ ತಳವಾರ ಬೆಳಗಾವಿ ಸಿಇಎನ್ ಅಪರಾಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.