ನವದೆಹಲಿ: ಉಜ್ಬೇಕಿಸ್ತಾನದ ಸಮರ್ಕಂಡ್ನಲ್ಲಿ ನಡೆದ ಶಾಂಘೈ ಸಹಕಾರ ಸಂಘಟನೆಯ (ಎಸ್ಸಿಒ) 22 ನೇ ಶೃಂಗಸಭೆಯಲ್ಲಿ ವಾರಣಾಸಿಯನ್ನು 2022-2023 ನೇ ಸಾಲಿನ ಮೊದಲ ಎಸ್ಸಿಒ ಪ್ರವಾಸೋದ್ಯಮ ಮತ್ತು ಸಾಂಸ್ಕೃತಿಕ ರಾಜಧಾನಿಯಾಗಿ ನಾಮನಿರ್ದೇಶನ ಮಾಡಲಾಯಿತು. ವಿದೇಶಾಂಗ ಕಾರ್ಯದರ್ಶಿ ವಿನಯ್ ಕ್ವಾತ್ರಾ ಅವರು ಪತ್ರಿಕಾಗೋಷ್ಠಿಯಲ್ಲಿ ದೃಢಪಡಿಸಿದರು.
ಜೀವನದಲ್ಲಿ ಸಂಪತ್ತು ಸಮೃದ್ಧಿಗಾಗಿ ಆಂಜನೇಯನ ಈ ಒಂದು ಮಂತ್ರ ಹೇಳಿದರೆ ಸಾಕು
“ವಾರಣಾಸಿಯನ್ನು ಮೊಟ್ಟಮೊದಲ ಎಸ್ಸಿಒ ಪ್ರವಾಸೋದ್ಯಮ ಮತ್ತು ಸಾಂಸ್ಕೃತಿಕ ರಾಜಧಾನಿಯಾಗಿ ನಾಮನಿರ್ದೇಶನ ಮಾಡುವುದರಿಂದ ಭಾರತ ಮತ್ತು ಎಸ್ಸಿಒ ಸದಸ್ಯ ರಾಷ್ಟ್ರಗಳ ನಡುವೆ ಪ್ರವಾಸೋದ್ಯಮ, ಸಾಂಸ್ಕೃತಿಕ ಮತ್ತು ಮಾನವೀಯ ವಿನಿಮಯವನ್ನು ಉತ್ತೇಜಿಸಲಾಗುವುದು. ಎಸ್ಸಿಒ ಸದಸ್ಯ ರಾಷ್ಟ್ರಗಳೊಂದಿಗೆ, ವಿಶೇಷವಾಗಿ ಮಧ್ಯ ಏಷ್ಯಾದ ಗಣರಾಜ್ಯಗಳೊಂದಿಗೆ ಭಾರತದ ಪ್ರಾಚೀನ ನಾಗರಿಕ ಸಂಬಂಧಗಳಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
Kashi: The first-ever SCO Tourism and Cultural Capital https://t.co/gZ1VNVtdhs pic.twitter.com/OiGhgeWxgn
— Arindam Bagchi (@MEAIndia) September 16, 2022
ಈ ಸಾಂಸ್ಕೃತಿಕ ಕಾರ್ಯಕ್ರಮ ಅಡಿಯಲ್ಲಿ ವಾರಣಾಸಿಯಲ್ಲಿ ಹಲವಾರು ಕಾರ್ಯಕ್ರಮಗಳು ನಡೆಯಲಿವೆ. ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಎಸ್ಸಿಒ ಸದಸ್ಯ ರಾಷ್ಟ್ರಗಳಿಂದ ಅತಿಥಿಗಳನ್ನು ಆಹ್ವಾನಿಸಲಾಗುವುದು.
“ಈ ಕಾರ್ಯಕ್ರಮಗಳು ಭಾರತಶಾಸ್ತ್ರಜ್ಞರು, ವಿದ್ವಾಂಸರು, ಲೇಖಕರು, ಸಂಗೀತಗಾರರು ಮತ್ತು ಕಲಾವಿದರು, ಫೋಟೋ ಜರ್ನಲಿಸ್ಟ್ಗಳು, ಟ್ರಾವೆಲ್ ಬ್ಲಾಗರ್ಗಳು ಮತ್ತು ಇತರ ಆಹ್ವಾನಿತ ಅತಿಥಿಗಳನ್ನು ಆಕರ್ಷಿಸುವ ನಿರೀಕ್ಷೆಯಿದೆ” ಎಂದು ಎಂಇಎ ಹೇಳಿದೆ. ಈ ಕ್ರಮವು ಭಾರತದ ಪವಿತ್ರ ನಗರದಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುತ್ತದೆ.
ವಿಶೇಷವೆಂದರೆ, ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಎಸ್ಸಿಒ ಸದಸ್ಯ ರಾಷ್ಟ್ರಗಳ ನಡುವೆ ಸಹಕಾರವನ್ನು ಉತ್ತೇಜಿಸುವ ಉದ್ದೇಶದಿಂದ 2021 ರಲ್ಲಿ ನಡೆದ ದುಶಾಂಬೆ ಎಸ್ಸಿಒ ಶೃಂಗಸಭೆಯಲ್ಲಿ ಎಸ್ಸಿಒ ಪ್ರವಾಸೋದ್ಯಮ ಮತ್ತು ಸಾಂಸ್ಕೃತಿಕ ರಾಜಧಾನಿಯ ನಾಮನಿರ್ದೇಶನದ ನಿಯಮಗಳನ್ನು ಅಳವಡಿಸಿಕೊಳ್ಳಲಾಯಿತು.
ಸೆಪ್ಟೆಂಬರ್ 15 ಮತ್ತು 16 ರಂದು ಉಜ್ಬೇಕಿಸ್ತಾನದ ಸಮರ್ಕಂಡ್ ನಲ್ಲಿ ಎಸ್ಸಿಒ ಶೃಂಗಸಭೆ 2002 ನಡೆಯಿತು. ಕಿರ್ಗಿಸ್ತಾನದಲ್ಲಿ 2019ರಲ್ಲಿ ನಡೆದ ಬಿಷ್ಕೆಕ್ ಶೃಂಗಸಭೆಯ ನಂತರ ನಡೆದ ಮೊದಲ ವೈಯಕ್ತಿಕ ಶೃಂಗಸಭೆ ಇದಾಗಿದೆ.
ಜೀವನದಲ್ಲಿ ಸಂಪತ್ತು ಸಮೃದ್ಧಿಗಾಗಿ ಆಂಜನೇಯನ ಈ ಒಂದು ಮಂತ್ರ ಹೇಳಿದರೆ ಸಾಕು
ಈ ಶೃಂಗಸಭೆಯಲ್ಲಿ ಭಾರತ, ಚೀನಾ, ಕಜಕಿಸ್ತಾನ್, ಕಿರ್ಗಿಸ್ತಾನ್, ಪಾಕಿಸ್ತಾನ, ರಷ್ಯಾ, ತಜಕಿಸ್ತಾನ ಮತ್ತು ಉಜ್ಬೇಕಿಸ್ತಾನ ಸೇರಿದಂತೆ ಎಸ್ಸಿಒ ಸದಸ್ಯ ರಾಷ್ಟ್ರಗಳ ಮುಖ್ಯಸ್ಥರು ಭಾಗವಹಿಸಿದ್ದರು. ಬೆಲಾರಸ್ ಮತ್ತು ಇರಾನ್ ಗೆ ಒಕ್ಕೂಟದ ಖಾಯಂ ಸದಸ್ಯತ್ವವನ್ನು ನೀಡಲು ಶೃಂಗಸಭೆ ನಿರ್ಧರಿಸಿತು.
ಶೃಂಗಸಭೆಯ ನೇಪಥ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿದರು. “ಅಧ್ಯಕ್ಷ ಪುಟಿನ್ ಅವರೊಂದಿಗೆ ಅದ್ಭುತ ಸಭೆ ನಡೆಸಿದ್ದೇನೆ.
ವ್ಯಾಪಾರ, ಇಂಧನ, ರಕ್ಷಣೆ ಮತ್ತು ಹೆಚ್ಚಿನ ಕ್ಷೇತ್ರಗಳಲ್ಲಿ ಭಾರತ-ರಷ್ಯಾ ಸಹಕಾರವನ್ನು ಮುಂದುವರಿಸುವ ಬಗ್ಗೆ ಚರ್ಚಿಸಲು ನಮಗೆ ಅವಕಾಶ ಸಿಕ್ಕಿತು. ನಾವು ಇತರ ದ್ವಿಪಕ್ಷೀಯ ಮತ್ತು ಜಾಗತಿಕ ವಿಷಯಗಳ ಬಗ್ಗೆಯೂ ಚರ್ಚಿಸಿದ್ದೇವೆ” ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ಪ್ರಧಾನಮಂತ್ರಿಯವರು ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಮತ್ತು ಉಜ್ಬೇಕಿಸ್ತಾನದ ಅಧ್ಯಕ್ಷ ಶೌಕತ್ ಮಿರ್ಜಿಯೋಯೆವ್ ಅವರನ್ನು ಭೇಟಿಯಾದರು. ಶಾಂಘೈನಲ್ಲಿ ರಷ್ಯಾ, ಚೀನಾ, ಕಿರ್ಗಿಸ್ತಾನ್ ರಿಪಬ್ಲಿಕ್, ಕಜಕಿಸ್ತಾನ್, ತಜಿಕಿಸ್ತಾನ್ ಮತ್ತು ಉಜ್ಬೇಕಿಸ್ತಾನ್ 2001 ರಲ್ಲಿ ಎಸ್ಸಿಒ ಅನ್ನು ಸ್ಥಾಪಿಸಲಾಯಿತು.
ಜೀವನದಲ್ಲಿ ಸಂಪತ್ತು ಸಮೃದ್ಧಿಗಾಗಿ ಆಂಜನೇಯನ ಈ ಒಂದು ಮಂತ್ರ ಹೇಳಿದರೆ ಸಾಕು