ಸೌದಿ : ಜೀವನದಲ್ಲಿ ಶಾಂತಿ ಮತ್ತು ಸ್ಥಿರತೆಗಾಗಿ 63 ವರ್ಷದ ಸೌದಿ ವ್ಯಕ್ತಿಯೊಬ್ಬ 43 ವರ್ಷಗಳಲ್ಲಿ 53 ಮಹಿಳೆಯರನ್ನು ವಿವಾಹವಾಗಿದ್ದಾನೆ.
ಹೌದು, 63 ವರ್ಷದ ಅಬು ಅಬ್ದುಲ್ಲಾ ಅವರು ವೈಯಕ್ತಿಕ ಸಂತೋಷಕ್ಕಾಗಿ ಅಲ್ಲ, ಜೀವನದಲ್ಲಿ ಶಾಂತಿಯನ್ನು ಪಡೆಯಲು ಹಲವು ಬಾರಿ ವಿವಾಹವಾಗಿರುವುದಾಗಿ ಹೇಳಿಕೊಂಡಿದ್ದಾರೆ.
ಸೌದಿಯ ಮಾಧ್ಯಮದೊಂದಿಗೆ ಮಾತನಾಡಿದ ಅಬ್ದುಲ್ಲಾ, ʻನಾನು ನನ್ನ 20 ನೇ ವಯಸ್ಸಿನಲ್ಲಿ ಮೊದಲು ವಿವಾಹವಾದೆ. ಆಗ ನನ್ನ ಪತ್ನಿ ನನಗಿಂತ ಆರು ವರ್ಷ ದೊಡ್ಡವರಾಗಿದ್ದರು. ನಾನು ಮೊದಲ ಬಾರಿಗೆ ಮದುವೆಯಾದಾಗ, ನಾನು ಒಂದಕ್ಕಿಂತ ಹೆಚ್ಚು ಮಹಿಳೆಯರನ್ನು ಮದುವೆಯಾಗಲು ಯೋಜಿಸಲಿಲ್ಲ. ಏಕೆಂದರೆ, ನಾನು ಆರಾಮದಾಯಕ ಮತ್ತು ಮಕ್ಕಳನ್ನು ಹೊಂದಿದ್ದೆ. ಆದ್ರೆ, ಕೆಲವು ದಿನಗಳು ಕಳೆದಂತೆ ಸಮಸ್ಯೆಗಳು ಎದುರಾದವು. ನಂತ್ರ, ನಾನು 23 ವರ್ಷ ವಯಸ್ಸಿನವನಾಗಿದ್ದಾಗ ಮತ್ತೆ ಮದುವೆಯಾಗಲು ನಿರ್ಧರಿಸಿ ನನ್ನ ನಿರ್ಧಾರವನ್ನು ನನ್ನ ಹೆಂಡತಿಗೆ ತಿಳಿಸಿದೆ. ಇದಕ್ಕೆ ಆಕೆ ಒಪ್ಪಿಗೆ ನೀಡಿದಳು.
فيديو متداول لرجل مُعدد:
تزوجت 53 مرة والجبان والخواف لا يسمع كلامي! pic.twitter.com/H4gItanxsX
— Gorgeous (@gorgeous4ew) September 2, 2022
ಎರಡು ಮದುವೆಗಳು ಕೂಡ ನನಗೆ ಸಂತೋಷ ತರಲು ಸಾಧ್ಯವಾಗಲಿಲ್ಲ. ಅಬ್ದುಲ್ಲಾ ಅವರು ತಮ್ಮ ಇಬ್ಬರು ಹೆಂಡತಿಯರ ನಡುವಿನ ಸಮಸ್ಯೆಗಳಿಂದಾಗಿ ಮೂರನೇ ಮತ್ತು ನಾಲ್ಕನೇ ಬಾರಿಗೆ ಮದುವೆಯಾಗಲು ನಿರ್ಧರಿಸಿದೆ ಎಂದರು. ಆದ್ರೆ, ಎರಡನೆಯ ಮತ್ತು ಮೂರನೇ ಹೆಂಡತಿಯರು ಅಂತಿಮವಾಗಿ ವಿಚ್ಛೇದನ ಪಡೆದರು.
ಅಬ್ದುಲ್ಲಾ ಅವರು ತನ್ನ ಎಲ್ಲಾ ಹೆಂಡತಿಯರನ್ನು ನ್ಯಾಯಯುತವಾಗಿ ನಡೆಸಿಕೊಳ್ಳುತ್ತೇನೆ ಎಂದು ಹೇಳಿಕೊಂಡಿದ್ದಾರೆ ಮತ್ತು ತಾನು ವಿದೇಶಿ ಮಹಿಳೆಯರನ್ನು ಸಹ ಮದುವೆಯಾಗಿದ್ದೇನೆ ಎಂದು ಹೇಳಿದ್ದಾರೆ. ಈಗಾಲೇ 53 ಮಹಿಳೆಯರನ್ನು ಮದುವೆಯಾಗಿರುವ ಅಬ್ದುಲ್ಲಾ ಮತ್ತೊಂದು ಮದುವೆಯಾಗುವ ಉದ್ದೇಶವಿಲ್ಲ ಎಂದು ಹೇಳಿಕೊಂಡಿದ್ದಾರೆ.
BREAKING NEWS: SCO ಶೃಂಗಸಭೆ ನಂತ್ರ ಭಾರತಕ್ಕೆ ಆಗಮಿಸಿದ ಪ್ರಧಾನಿ ಮೋದಿ | PM Modi arrives to India