ಬೆಂಗಳೂರು: ನಗರದ ಹೊರವಲಯದಲ್ಲಿ ಸಾದಹಳ್ಳಿ ಜೆಡಿ ಗಾರ್ಡನ್ ರೆಸಾರ್ಟ್ ನಲ್ಲಿ ರೇವ್ ಪಾರ್ಟಿ ನಡೆದಿದೆ. ಇದರಲ್ಲಿ ಬಳ್ಳಾರಿ ಗಣಿ ಉದ್ಯಮಿ ಪುತ್ರ ಸೇರಿದಂತೆ ಪ್ರಭಾವಿ ರಾಜಕಾರಣಿಗಳ ಪುತ್ರರು ಈ ರೇವ್ ಪಾರ್ಟಿಯಲ್ಲಿ ಭಾಗಿಯಾಗಿದ್ದಾರೆ. ಆದರೆ ಸಿಸಿಬಿ ಪೊಲೀಸರು ಪ್ರಭಾವಿಗಳ ಪುತ್ರರನ್ನು ರಕ್ಷಿಸಲು ಮುಂದಾಗಿದ್ದು, ಪ್ರಕರಣ ಮುಚ್ಚಿಹಾಕಲು ಪ್ಲಾನ್ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
BIGG NEWS: ರಾಜಕಾಲುವೆ ಹೆಸರನ್ನು ಬದಲಾಯಿಸಿ; ಸದನದಲ್ಲಿ ಎ.ಟಿ ರಾಮಸ್ವಾಮಿ ಒತ್ತಾಯ
ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಲೀಕ ಶ್ರೀನಿವಾಸ್ ಸೇರಿ 9 ಮಂದಿ ಜನರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಪ್ರಭಾವಿ ರಾಜಕಾರಣಿ ಪುತ್ರರ ಹೆಸರು ನಾಪತ್ತೆಯಾಗಿದೆ ಎಂದು ಹೇಳಲಾಗಿದೆ. ಎಫ್ ಐ ಆರ್ ದಾಖಲಾಗುತ್ತಿದ್ದಂತೆ ಪ್ರಕರಣವನ್ನು ಸಿಸಿಬಿಗೆ ಹಸ್ತಾಂತರ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಸೆಪ್ಟೆಂಬರ್ 6 ರಂದು ಕೆಐಎಎಲ್ ಏರ್ ಪೋರ್ಟ್ ಠಾಣಾ ವ್ಯಾಪ್ತಿಯಲ್ಲಿ ಜೆಡಿ ಗಾರ್ಡನ್ ರೆಸಾರ್ಟ್ ನಲ್ಲಿ ಪಾರ್ಟಿ ಆಯೋಜಿಸಿದ್ದರ ಹಿನ್ನೆಲೆಯಲ್ಲಿ ಎಫ್ಐಆರ್ ದಾಖಲಾಗಿತ್ತು.
BIGG NEWS: ರಾಜಕಾಲುವೆ ಹೆಸರನ್ನು ಬದಲಾಯಿಸಿ; ಸದನದಲ್ಲಿ ಎ.ಟಿ ರಾಮಸ್ವಾಮಿ ಒತ್ತಾಯ
ಮುಂದೆ ಅದು ಸಿಸಿಬಿ ಗೆ ಹಸ್ತಾಂತರಗೊಂಡಿತ್ತು. ಹೊರ ದೇಶದ-ಹೊರ ರಾಜ್ಯದ ಯುವತಿಯರ ಕರೆ ತಂದು ವೇಶ್ಯಾವಾಟಿಕೆ ನಡೆದಿತ್ತು. ಆ ವೇಳೆ ಯುವತಿಯರು ವೀಸಾ-ಪಾಸ್ ಪೋರ್ಟ್ ಹಾಜರುಪಡಿಸಿಲ್ಲ. ಹಾಗಾಗಿ ಮಾನವ ಕಳ್ಳಸಾಕಣೆ ಕಾಯ್ದೆ ಅಡಿ ಎಫ್ ಐಆರ್ ದಾಖಲಾಗಿತ್ತು. ಜೆಡಿ ಗಾರ್ಡನ್ ಮಾಲೀಕ ಶ್ರೀನಿವಾಸ್ ಸುಬ್ರಮಣ್ಯ ಸೇರಿದಂತೆ 9 ಆರೋಪಿಗಳ ವಿರುದ್ದ ಮಾತ್ರ ಕೇಸ್ ದಾಖಲು ಮಾಡಿಕೊಳ್ಳಲಾಗಿತ್ತು.