ಬೆಂಗಳೂರು: ಯಾವುದೇ ಮಾದರಿಯ ವಾಹನಗಳಲ್ಲಿನ ಹೆಡ್ ಲೈಟ್ಗಳಲ್ಲಿ ಹೈ ಬೀಮ್ ಹಾಕಿ ವಾಹನ ಚಾಲನೆ ಮಾಡಿದರೆ ದಂಡ ಹಾಕುವುದರ ಜೊತೆ ಪ್ರಕರಣವನ್ನು ದಾಖಲು ಮಾಡಲಾಗುತ್ತದೆ ಎಂದು ಸಾರಿಗೆ ಸಚಿವ ಶ್ರೀರಾಮುಲು ಹೇಳಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯ ವೈ.ಎಂ ಸತೀಶ್ ಪ್ರಶ್ನೆಗೆ ಉತ್ತರಿಸಿದ ಸಾರಿಗೆ ಸಚಿವ ಶ್ರೀರಾಮುಲು,
ಹೈ ಬೀಮ್ ಲೈಟ್ನಿಂದ ಅಪಘಾತವಾದ ಪ್ರಕರಣಗಳು ಹೆಚ್ಚುತ್ತಿದೆ. ಆದರೂ ಕೂಡ ನಮ್ಮ ಗಮನಕ್ಕೆ ಬಂದಿಲ್ಲ. ಆದರೂ ನಾವು ಹೈ ಬೀಮ್ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇವೆ. 295 ಕೋಟಿ ರೂ. ಹಣ ರಸ್ತೆ ಸುರಕ್ಷತೆಗೆ ಇರಿಸಲಾಗಿದೆ. ಹೈ ಬೀಮ್ ಲೈಟ್ ಹಾಕಿಕೊಂಡು ಬರುವ ಟ್ರಕ್, ಬೈಕ್ ಸವಾರರಿಗೆ 500 ರೂ.ದಂಡ ಹಾಕುವ ಕೆಲಸ ಮಾಡಲಾಗಿದೆ ಎಂದರು.