ಬೆಂಗಳೂರು: ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ಮೀಟೂ ಆರೋಪ ಮಾಡಲಾಗಿತ್ತು. ಆ ಪ್ರಕರಣ ಮರೆಯಾಗೋ ಮುನ್ನವೇ ಚೆಂದನವನದಲ್ಲಿ ಮತ್ತೊಂದು ಮೀಟೂ ಆರೋಪ ಕೇಳಿ ಬಂದಿದೆ. ನಟಿ ಆಶಿತಾ ರಿಂದ ( Actress Ashita ) ಮೀಟು ( #MeToo ) ಆರೋಪ ಮಾಡಲಾಗಿದೆ. ಈ ಕುರಿತಂತೆ ಸಂದರ್ಶನವೊಂದರಲ್ಲಿ ಮಾತನಾಡಿರುವಂತ ನಟಿ ಆಶಿತಾ ಅವರು, ಸ್ಯಾಂಡಲ್ ವುಡ್ ಚಿತ್ರರಂಗದಲ್ಲಿ ದೂರವಾಗಲು ಕಾರಣ ಏನು ಎನ್ನುವಂತ ಹಿಂದಿನ ಸ್ಪೋಟಕ ಕಾರಣವನ್ನು ಬಿಚ್ಚಿಟ್ಟಿದ್ದಾರೆ.
ಅವರು ಕನ್ನಡ ಚಿತ್ರರಂಗದಲ್ಲಿ ನಟಿಸಬೇಕು ಎಂದ್ರೇ ಅವರು ಬಯಸಿದ ಹಾಗೆ ಇರಬೇಕು. ನಾನು ನೈಸ್ ಆಗಿರಸಿಲ್ಲ ಎಂಬುದಾಗಿ ಆರೋಪಿಸಿದ್ದಾರೆ. ಇದಲ್ಲದೇ ಅವರು ಬಯಸಿದಂತೆ ಸೆಟ್ ನಲ್ಲಿ ಇರಲಿಲ್ಲ ಎನ್ನುವ ಕಾರಣಕ್ಕಾಗಿ ಸೆಟ್ ನಲ್ಲಿಯೇ ಕಿರುಕುಳ ನೀಡಲಾಗಿತ್ತು ಎಂಬುದಾಗಿ ಹೇಳಿದ್ದಾರೆ. ಇದಷ್ಟೇ ಅಲ್ಲದೇ ಕನ್ನಡ ಚಿತ್ರರಂಗದಲ್ಲಿ ಒಳ್ಳೆಯ ವಾತಾವರಣವಿಲ್ಲ. ನಾನು ಅವರು ಹೇಳಿದಂತೆ ಅರ್ಜೆಂಸ್ಟ್ ಆಗಲಿಲ್ಲ. ಹೀಗಾಗಿಯೇ ಕನ್ನಡ ಸಿನಿ ಲೋಕದಿಂದ ದೂರ ಉಳಿಯಬೇಕಾಯಿತು ಎಂಬುದಾಗಿ ಹೇಳಿದ್ದಾರೆ.
ಅಂದಹಾಗೇ ನಟಿ ಆಶಿತಾ ಮೀಟೂ ಆರೋಪವನ್ನು ಯಾರ ಬಗ್ಗೆ ಮಾಡಿದ್ದಾರೆ ಎನ್ನುವ ಯಾವುದೇ ಮಾಹಿತಿ ನೀಡಿಲ್ಲ. ಕೇವಲ ಸ್ಯಾಂಡಲ್ ವುಡ್ ಚಿತ್ರರಂಗದಲ್ಲಿ ಇಂತಹ ವಾತಾವರಣವಿದೆ ಎಂಬುದಾಗಿ ಆರೋಪಿಸಿದ್ದಾರೆ. ಆ ಬಗ್ಗೆ ಮುಂದಿನ ನಟಿ ಆಶಿತಾ ನಡೆ ಏನು ಎಂಬುದನ್ನು ಕಾದು ನೋಡಬೇಕಿದೆ. ನಟಿ ಆಶಿತಾ ಕನ್ನಡದ ರೋಡ್ ರೋಮಿಯೋ, ಹಾರ್ಟ್ ಬೀಟ್, ತವರಿನ ಸಿರಿ, ಬಾ ಬಾರೋ ರಸಿಕಾ, ಆಕಾಶ್ ಸೇರಿದಂತೆ ವಿವಿಧ ಚಿತ್ರಗಳಲ್ಲಿ ನಟಿಸಿದ್ದಾರೆ. ಹೀಗೆ ನಟಿಸಿದಂತ ನಟಿ ಇಂತದ್ದೊಂದು ಗಂಭೀರ ಆರೋಪವನ್ನು ಮಾಡಿದ್ದಾರೆ.