ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳ ಮಾರಾಟವನ್ನು ಕಡಿಮೆ ಮಾಡಲು ಮತ್ತು ಮಾಲಿನ್ಯವನ್ನು ಕಡಿಮೆ ಮಾಡಲು ಪರ್ಯಾಯ ಇಂಧನಗಳಿಗೆ ಆದ್ಯತೆ ನೀಡಬೇಕು ಅಂತ ನಿತಿನ್ ಗಡ್ಕರಿ ಅವರು ಹೇಳಿದ್ದಾರೆ. ಅವರು ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚರರ್ಸ್ (ಎಸ್ಐಎಎಂ) ನ 62 ನೇ ವಾರ್ಷಿಕ ಸಮಾವೇಶದಲ್ಲಿ ಮಾತನಾಡುತ್ತ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಇದೇ ವೇಳೆ ಅವರಗಡ್ಕರಿ ಅವರು ಆಮದು ಅವಲಂಬನೆಯನ್ನು ಕಡಿಮೆ ಮಾಡಲು ಕಾರ್ಯತಂತ್ರಗಳನ್ನು ಸಂಶೋಧಿಸಲು ಎಸ್ಐಎಎಂ ಅನ್ನು ವಿನಂತಿಸಿದರು. ಎಲೆಕ್ಟ್ರಿಕ್ ವೆಹಿಕಲ್ (ಇವಿ) ವ್ಯವಹಾರವನ್ನು ಬೆಳೆಸಲು ಮತ್ತು ಬಸ್ಸುಗಳು ಮತ್ತು ದ್ವಿಚಕ್ರ, ಮೂರು ಮತ್ತು ನಾಲ್ಕು ಚಕ್ರದ ವಾಹನಗಳ ಉತ್ಪಾದನೆಯನ್ನು ಹೆಚ್ಚಿಸಲು ಇದು ಸಕಾಲ ಎಂದು ಸಚಿವರು ಹೇಳಿದರು. ಭಾರತವನ್ನು ಪರ್ಯಾಯ ಇಂಧನ ವಾಹನಗಳ ಅಗ್ರ ಉತ್ಪಾದಕನನ್ನಾಗಿ ಮಾಡಲು ಬಯಸುವುದಾಗಿ ಹೇಳಿದ ಅವರು, ವಿದ್ಯುತ್ ಹೆದ್ದಾರಿಯನ್ನು ಪ್ರಾರಂಭಿಸುವ ಕನಸು ಕಂಡಿದ್ದೇನೆ ಎಂದು ಹೇಳಿದರು.
ಗಡ್ಕರಿ ಅವರು 27 ಹಸಿರು ಎಕ್ಸ್ಪ್ರೆಸ್ವೇಗಳನ್ನು ನಿರ್ಮಿಸಲು ಶಿಫಾರಸು ಮಾಡಿದರು. ದೆಹಲಿಯಿಂದ ಮುಂಬೈಗೆ ಪ್ರಸ್ತುತ 52 ಗಂಟೆಗಳ ಪ್ರಯಾಣವು ಕೇವಲ 12 ಗಂಟೆಗಳನ್ನು ತೆಗೆದುಕೊಳ್ಳುತ್ತದೆ ಎಂದು ಅವರು ಹೇಳಿದರು. ಡಿಸೆಂಬರ್ ವೇಳೆಗೆ, ಇದು 20 ರಿಂದ 22 ಗಂಟೆಗಳಿಗೆ ಅಂತ ಹೇಳಿದ ಅವರು ಲಾಜಿಸ್ಟಿಕ್ ವೆಚ್ಚಗಳಲ್ಲಿ 10% ರಷ್ಟು ಕಡಿತ ಮಾಡಲು ಉದ್ದೇಶಿಸಿಲಾಗಿದೆ ಅಂತ ತಿಳಿಸಿದರು.