ಬೆಂಗಳೂರು: ಮತಾಂತರ ನಿಷೇಧ ಕಾಯ್ದೆ ಬಿಲ್ ಪಾಸ್ ಆಗಿದ್ದ ಕುರಿತು ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ. ಬಿಲ್ ಪಾಸ್ ಆಗಿರುವ ವಿಚಾರ ಖುಷಿ ತಂದಿದೆ. ಗೋಹತ್ಯೆ ನಿಷೇಧ, ಮತಾಂತರ ನಿಷೇಧ ಇವು ಪ್ರಮುಖ ಕಾಯ್ದೆಗಳಾಗಿದ್ದವು. ಈ ಕಾಯ್ದೆ ಮಂಡನೆಗಾಗಿ ಅಂಗೀಕಾರವಾಗಿದ್ದು ನಿಜಕ್ಕೂ ಸಂತಸ ತಂದಿದೆ ಎಂದು ಹೇಳಿದ್ದಾರೆ.
BIGG NEWS: ಸಿಗ್ನಲ್ ನಲ್ಲಿ ಭಿಕ್ಷುಕರ ಹಾವಳಿ ಬಗ್ಗೆ ಪರಿಷತ್ ನಲ್ಲಿ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದೇನು ಗೊತ್ತಾ?
ವಿಧಾನಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾದಲ್ಲಿನ ಎರಡು ಪ್ರಮುಖ ಬಿಲ್ ಗಳು ಪಾಸಾಗಿವೆ. ಇದು ನನ್ನ ಜೀವನದ ಅಪೂರ್ವ ಸಮಯವಿದು. ಹಿಂದು ಸಂಸ್ಕೃತಿ ತಳ ಅಲ್ಲಾಡಿಸುವ ಕೆಲಸವಾಗುತ್ತಿತ್ತು. ಧಾರ್ಮಿಕ ಸ್ವಾತಂತ್ರ್ಯದ ದುರುಪಯೋವಾಗುತ್ತಿತ್ತು. ಹಾಗಾಗಿ ಮತಾಂತರ ನಿಷೇಧಕ್ಕೆ ಬಿಗಿ ಕಾಯ್ದೆ ತರಲಾಗಿದೆ ಎಂದು ಹೇಳಿದ್ದಾರೆ.
ಆದರೆ ಇದಕ್ಕೆ ಕಾಂಗ್ರೆಸ್ ಅವರು ವಿರೋಧ ವ್ಯಕ್ತಪಡಿಸಿದ್ದರು. ಬಿಲ್ ಗಳನ್ನ ಹರಿದು ಆಕ್ರೋಶ ವ್ಯಕ್ತಪಡಿಸಿದ್ದರು. ಇರದಿಂದ ಕಾಂಗ್ರೆಸ್ ಅವರ ಮುಖವಾಡ ಕಳಚಿಬಿದ್ದಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.