ದಾವಣಗೆರೆ : ಮಳೆಹಾನಿ ಪರಿಹಾರ ವಿಚಾರವಾಗಿ ಹೊನ್ನಾಳಿ ಕ್ಷೇತ್ರದ ಮಾಜಿ ಶಾಸಕ ಶಾಂತನಗೌಡ ಹಾಗೂ ಶಾಸಕರ ನಡುವೆ ಭಾರಿ ಜಟಾಪಟಿಯೇ ನಡೆದಿದ್ದು, ಜಗಳ ತಾರಕಕ್ಕೇರಿದ ಘಟನೆ ನಡೆದಿದೆ.
ಹೊನ್ನಾಳಿ ಮಾಜಿ ಶಾಸಕ ಶಾಂತನಗೌಡ ಹಾಗೂ ಹಾಲಿ ಶಾಸಕ ಎಂ.ಪಿ.ರೇಣುಕಾಚಾರ್ಯ ನಡುವೆ ತಹಶೀಲ್ದಾರ್ ಸಮ್ಮುಖದಲ್ಲಿಯೇ ಜಗಳ ನಡೆದಿದೆ. ಉದ್ದೇಶಪೂರ್ವಕವಾಗಿಯೇ ಮಳೆಹಾನಿ ಪರಿಹಾರವನ್ನು ನೀಡುತ್ತಿಲ್ಲ. ಜನರು ಸಂಕಷ್ಟದಿಂದ ಪರದಾಡುತ್ತಿದ್ದಾರೆ ಆದರೂ ಶಾಸಕರು ಈ ಬಗ್ಗೆ ಕಿಂಚಿತ್ತು ಕಾಳಜಿ ತೋರುತ್ತಿಲ್ಲ. ಫೋನ್ ಮಾಡಿದರೆ ನಮ್ಮ ಕರೆಯನ್ನೂ ಸ್ವೀಕರಿಸುತ್ತಿಲ್ಲ ಎಂದು ಮಾಜಿ ಶಾಸಕ ಶಾಂತನಗೌಡ ವಾಗ್ದಾಳಿ ನಡೆಸಿದ್ದಾರೆ ಇಬ್ಬರು ನಾಯಕರ ನಡುವಿನ ವಾಕ್ಸಮರದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Video: ಅಹಮದಾಬಾದ್ನಲ್ಲಿ ಧಗಧಗಿಸಿದ ಬಸ್… ಚಾಲಕನ ಸಮಯ ಪ್ರಜ್ಞೆಯಿಂದ ಪ್ರಯಾಣಿಕರೆಲ್ಲರೂ ಸೇಫ್
ಮಾಜಿ ಶಾಸಕ ಶಾಂತನಗೌಡ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಶಾಸಕ ಎಂ.ಪಿ.ರೇಣುಕಾಚಾರ್ಯ, ಪಕ್ಷಾತೀತವಾಗಿ ಜನರಿಗೆ ಮಳೆ ಹಾನಿ ಪರಿಹಾರ ನೀಡುತ್ತಿದ್ದೇನೆ. ಶಾಂತನಗೌಡ ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ. ಒಬ್ಬ ಮಹಿಳಾ ತಹಶೀಲ್ದಾರ್ ಅವಾಚ್ಯ ಶಬ್ದ ಬಳಸುತ್ತಾರೆ. 50 ಸಾವಿರ ರೂ. ಲಂಚ ಪಡೆದು ಜೆಸಿಬಿ ಬಳಸಿ ಮನೆ ಕೆಡುವುತಿದ್ದಾರೆ. ಬಿಜೆಪಿ ಕಾರ್ಯಕರ್ತರಿಗೆ ಮಾತ್ರ ಪರಿಹಾರ ನೀಡಲಾಗುತ್ತಿದೆ ಎಂಬುದು ಸುಳ್ಳು. ಅಧಿಕಾರಿಗಳು ಕೆಲಸ ಮಾಡಲು ಮಾಜಿ ಶಾಸಕರು ಬಿಡುತ್ತಿಲ್ಲ. ಮಾಜಿ ಶಾಸಕ ಶಾಂತನಗೌಡ ವಿರುದ್ಧ ರೇಣುಕಾಚಾರ್ಯ ಕಿಡಿಕಾರಿದ್ದಾರೆ.