ಬೆಂಗಳೂರು: ಬಿಗ್ ಬಾಸ್ ಕನ್ನಡ ಒಟಿಟಿ ಮೊದಲ ಸೀಸನ್ ನಲ್ಲಿ ಹಲವು ಘಟನೆಗಳು ನಡೆಯಿತ್ತು. ಅದರಲ್ಲಿ ದೊಡ್ಡ ಸೆಲೆಬ್ರೇಷನ್ ಇತ್ತು, ಜಗಳ ಕೂಡ ನಡೆದ್ದವು. ಅಲ್ಲಿ ಸ್ನೇಹ ಚಿಗುರಿತು ಪ್ರೇಮ ಹುಟ್ಟಿಕೊಂಡಿತ್ತು. ಅದರ ಜೊತೆಗೆ ಹೊಟ್ಟೆಕಿಚ್ಚು ಸಹ ಕಾಣಿಸಿತ್ತು. ಹೀಗೆ ಹತ್ತಾರೂ ಘಟನೆಗಳಿಗೆ ಬಿಗ್ ಬಾಸ್ ಶೋ ಸಾಕ್ಷಿಯಾಗಿತ್ತು.
ಪ್ರತಿದಿನ ಪ್ರತಿ ಟಾಸ್ಕ್ ಮೂಲಕ ಬಿಗ್ ಬಾಸ್ ವರದಿಗಳು ಪ್ರೇಕ್ಷರಿಗೆ ಸಾಕಷ್ಟು ಮನರಂಜನೆಯನ್ನು ನೀಡಿದ್ದರು.
ಈ ಮೊದಲ ಸೀಸನ್ ತೆರೆಕಾಣುವ ಸಮಯ ಹತ್ತಿರವಾಗಿರುವ ಈ ಸಂಧರ್ಭದಲ್ಲಿ ಒಟ್ಟಾರೆ ಸೀಸನ್ ನಲ್ಲಿ ನಡೆದ ಕೆಲವೊಂದು ಮುಖ್ಯ ಘಟನೆಗಳ ಮೆಲುಕು ಇಲ್ಲಿದೆ.
ಸ್ಪರ್ಧಿಗಳಿಗೆ ತಮ್ಮ ಬದುಕಿನ ಘಟನೆಗಳು ಮತ್ತು ಸವಾಲಿನ ಘಟನೆಗಳನ್ನ ನೆನಪಿಸಿಕೊಳ್ಳಲು ವೇದಿಕೆ ಕಲ್ಪಿಸಲಾಗಿದೆ. ಅದರಲ್ಲಿ ಲೋಕೇಶ್ ಅವರು ಬದುಕುಗಳನ್ನ ಹೊರಾಡಿದ ಘಟನೆಯನ್ನ ಕಷ್ಟದ ಕಥೆಯನ್ನು ಹೇಳಿಕೊಂಡರು.
ಇನ್ನು ಸೋನುಗೌಡ ತಮ್ಮ ವೈರಲ್ ವಿಡಿಯೋದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಚೈತ್ರಹಳ್ಳಿಕೆರೆಯವರು ಮದುವೆಯಿಂದ ಕಷ್ಟಗಳನ್ನು ನೆನಪಿಸಿಕೊಂಡರು. ಸಾನಿಯಾ ತಮ್ಮ ಬಾಯ್ ಫ್ರೆಂಡ್ ಅನುಭವಿಸಿದ ಕಿರುಕುಳ ವಿವಿರವನ್ನು ತೆರೆದಿಟ್ಟರು. ವಿಚ್ಛೇಧನ ಬಳಿಕ ಸೋಮಣ್ಣ ಎದುರಿಸಿದ ಕಷ್ಟಗಳನ್ನ ಹೇಳಿಕೊಂಡರು. ಹಾಗೆ ಅನೇಕ ಸ್ಪರ್ಧಿಗಳು ತಮ್ಮ ಬದುಕಿನ ಶಾಕಿಂಗ್ ಸತ್ಯಗಳನ್ನ ವೀಕ್ಷಕರ ಮುಂದೆ ತೆರೆದಿಟ್ಟಿದ್ದಾರೆ.