ಬೆಂಗಳೂರು: ನಗರದಲ್ಲಿ ಮಳೆಯಿಂದ ರಸ್ತೆಗಳೆಲ್ಲ ಹಾಳಾಗಿ ಹೋಗಿದೆ. ಇದರಿಂದ ವಾಹನ ಸವಾರರಿಗೆ ಕಿರಿಕಿರಿ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಸಿವಿಲ್ ವರ್ಕ್ಗೆ ಇನ್ಮುಂದೆ ಕ್ವಾಲಿಟಿ ಚೆಕ್ ಕಡ್ಡಾಯ ಮಾಡಿ ಎಂದು ಬಿಬಿಎಂಪಿ ಆದೇಶ ಹೊರಡಿಸಿದೆ.
BIGG NEWS: ಜೈಲಿನಿಂದ ಹೊರಗೆ ಬಂದ ಕೈದಿಗಳಿಗೆ ಗುಡ್ ನ್ಯೂಸ್: ಉದ್ಯೋಗ ಕೊಡಿಸಲು ಸಿದ್ಧತೆ
ರಾಜ್ಯಕ್ಕೆ ಮೊನ್ನೆ ಪ್ರಧಾನಿ ಮೋದಿ ಭೇಟಿ ವೇಳೆ ನೂತನವಾಗಿ ಹಾಕಿದ್ದ ಡಾಂಬಾರು ಎರಡೇ ದಿನಕ್ಕೆ ಕಿತ್ತು ಬಂದಿತ್ತು. ಹೀಗಾಗಿ ಪಾಲಿಕೆ ವತಿಯಿಂದ ಕೈಗೊಳ್ಳುವ ಪ್ರತಿ ಕಾಮಗಾರಿಗಳ ಗುಣಮಟ್ಟ ಮತ್ತು ಅದಕ್ಕೆ ಬಳಸಿರುವ ಮಿಶ್ರಣಗಳ ಪ್ರಮಾಣ ಜೊತೆಗೆ ಕ್ವಾಲಿಟಿ ಹೇಗಿದೆ ಎಂಬುದನ್ನು ಕೊಡಬೇಕು. ಬಿಬಿಎಂಪಿಯ ಟಿವಿಸಿಸಿ ಅಧಿಕಾರಿಗಳು ಕಡ್ಡಾಯವಾಗಿ ಕ್ವಾಲಿಟಿ ಚೆಕ್ ಮಾಡಬೇಕು ಎಂದು ಆದೇಶ ಮಾಡಿದೆ.
BIGG NEWS: ಜೈಲಿನಿಂದ ಹೊರಗೆ ಬಂದ ಕೈದಿಗಳಿಗೆ ಗುಡ್ ನ್ಯೂಸ್: ಉದ್ಯೋಗ ಕೊಡಿಸಲು ಸಿದ್ಧತೆ
ಕಾಮಗಾರಿಗಳ ಬಿಲ್ ಪಾಸ್ ಮಾಡುವುದಕ್ಕೂ ಮುಂಚೆ ವಲಯದ ಜಂಟಿ ಆಯುಕ್ತರು ಬಿಲ್ಗಳನ್ನು ಆಯ್ಕೆ ಮಾಡಿ ಸ್ಥಳ ಪರಿಶೀಲನೆಗೆ ಟಿವಿಸಿಸಿ ಅಧಿಕಾರಿಗಳಿಗೆ ನೀಡಬೇಕು. ಬಳಿಕ ಟಿವಿಸಿಸಿ ಅಧಿಕಾರಿಗಳು ಕಾಮಗಾರಿಯ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮತ್ತು ಗುಣಮಟ್ಟ ಜೊತೆಗೆ ಕ್ವಾಲಿಟಿ ಚೆಕ್ ಮಾಡಲಿದ್ದಾರೆ.