ದಾವಣಗೆರೆ:2022-23 ನೇ ಸಾಲಿನ ಡಿ.ಇಎಲ್.ಇಡಿ. ಕೋರ್ಸಿನ ದಾಖಲಾತಿಗೆ ಔಜಿಜಿ ಟiಟಿe ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈಗಾಗಲೇ ದ್ವಿತೀಯ ಪಿ.ಯು.ಸಿ. ಪೂರಕ ಪರೀಕ್ಷೆಯನ್ನು ಬರೆದು ಫಲಿತಾಂಶ ಪ್ರಕಟವಾಗಿದ್ದು ಉತ್ರ್ತಿರ್ಣರಾದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
ಅರ್ಜಿ ನಮೂನೆಗಳನ್ನು www.schooleducation.kar.nic.in ನಲ್ಲಿ ಡೌನ್ಲೋನ್ ಮಾಡಿಕೊಂಡು ನಿಗದಿತ ದಾಖಲೆಗಳು ಮತ್ತು ಅರ್ಜಿ ಶುಲ್ಕವನ್ನು ಪಾವತಿಸಿದ ಡಿ.ಡಿ.ಯೊಂದಿಗೆ ನೋಡಲ್ ಕೇಂದ್ರವಾದ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ(ಡಯಟ್), ದಾವಣಗೆರೆ ಇಲ್ಲಿ ನಿಗದಿತ ದಿನಾಂಕದೊಳಗೆ ಸಲ್ಲಿಸುವುದು ಅರ್ಜಿ ಸಲ್ಲಿಸಲು ಸೆ.23 ಕೊನೆಯ ದಿನವಾಗಿರುತ್ತದೆ.
ಅರ್ಜಿ ಸಲ್ಲಿಸುವ ವಿಧಾನ, ಶುಲ್ಕದ ಮಾಹಿತಿ, ಅರ್ಹತೆ, ಮೀಸಲಾತಿ ವಿವರಗಳು ಮತ್ತು ಇತರೆ ಮಾಹಿತಿಗಳನ್ನು www.schooleducation.kar.nic.in ನಲ್ಲಿ ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ದೂ.ಸಂ: 8884881816, 9844401092, 08192-231156.ನ್ನು ಸಂಪರ್ಕಿಸಬಹುದೆಂದು ಡಯಟ್ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.