ನವದೆಹಲಿ : ನ್ಯಾಷನಲ್ ಬೋರ್ಡ್ ಆಫ್ ಎಕ್ಸಾಮಿನೇಷನ್ಸ್ ಇನ್ ಮೆಡಿಕಲ್ ಸೈನ್ಸಸ್, ಎನ್ಬಿಇಎಂಎಸ್ ಇಂದು ನೀಟ್ ಎಸ್ಎಸ್ ಫಲಿತಾಂಶ ಪ್ರಕಟಿಸಿದೆ. ನೀಟ್ ಎಸ್ಎಸ್ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳು ಎನ್ಬಿಇಯ ಅಧಿಕೃತ ಸೈಟ್ nbe.edu.in ಮೂಲಕ ತಮ್ಮ ಫಲಿತಾಂಶಗಳನ್ನ ಪರಿಶೀಲಿಸಬಹುದು.
2022ರ ಸೆಪ್ಟೆಂಬರ್ 1 ಮತ್ತು 2ರಂದು ವಿವಿಧ ಗುಂಪುಗಳಿಗೆ ಪರೀಕ್ಷೆಯನ್ನ ನಡೆಸಲಾಯಿತು. ಇದಲ್ಲದೆ, ನೀಟ್-ಎಸ್ಎಸ್ 2022ರಲ್ಲಿ ಹಾಜರಾಗಲು ಅರ್ಹತೆಯನ್ನ ನಿರ್ಧರಿಸುವ ಸಲುವಾಗಿ ಎಂಡಿ, ಎಂಎಸ್, ಡಿಎನ್ಬಿ ಬ್ರಾಡ್ ಸ್ಪೆಷಾಲಿಟಿ ಅರ್ಹತೆಗಾಗಿ ಕಟ್ ಆಫ್ ಅಂಕಗಳನ್ನ ಸೆಪ್ಟೆಂಬರ್ 15, 2022 ರಂದು ಬಿಡುಗಡೆ ಮಾಡಲಾಗಿದೆ.
ನೀಟ್ ಎಸ್ಎಸ್ ಫಲಿತಾಂಶ ಪರಿಶೀಲಿಸುವುದು ಹೇಗೆ?
* NBEಯ ಅಧಿಕೃತ ಸೈಟ್ nbe.edu.inಗೆ ಭೇಟಿ ನೀಡಿ
* ಮುಂದೆ, ಮುಖಪುಟದಲ್ಲಿ ಲಭ್ಯವಿರುವ ನೀಟ್ ಎಸ್ಎಸ್ ಫಲಿತಾಂಶ 2022 ಲಿಂಕ್ ಕ್ಲಿಕ್ ಮಾಡಿ
* ಲಾಗಿನ್ ವಿವರಗಳನ್ನು ನಮೂದಿಸಿ ತದನಂತರ ಸಲ್ಲಿಸಿ
* ಫಲಿತಾಂಶವನ್ನು ಪರದೆಯ ಮೇಲೆ ಪ್ರದರ್ಶಿಸಲಾಗುತ್ತದೆ
* ಫಲಿತಾಂಶವನ್ನು ಪರಿಶೀಲಿಸಿ ಮತ್ತು ಪುಟವನ್ನು ಡೌನ್ ಲೋಡ್ ಮಾಡಿ