ಕರಾಚಿ ; ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಗುರುವಾರ (ಸೆಪ್ಟೆಂಬರ್ 15) T20 ವಿಶ್ವಕಪ್ 2022 ಗಾಗಿ ತನ್ನ ತಂಡವನ್ನು ಪ್ರಕಟಿಸಿದೆ. 15 ಸದಸ್ಯರ ತಂಡಕ್ಕೆ ಬಾಬರ್ ಅಜಮ್ ನಾಯಕತ್ವ ವಹಿಸಲಿದ್ದಾರೆ. ವೇಗಿ ಶಾಹೀನ್ ಅಫ್ರಿದಿ ಮತ್ತು ಬ್ಯಾಟ್ಸ್ಮನ್ ಶಾನ್ ಮಸೂದ್ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಮತ್ತೊಂದೆಡೆ ಅನುಭವಿ ಆಟಗಾರ ಶೋಯೆಬ್ ಮಲಿಕ್ʼಗೆ ಅವಕಾಶ ಸಿಕ್ಕಿಲ್ಲ. ಅದ್ರಂತೆ ತಂಡದಲ್ಲಿ, ಇತ್ತೀಚಿನ ಟಿ20 ತಂಡದ ಭಾಗವಾಗಿದ್ದ ಆಟಗಾರರಿಗೆ ಆದ್ಯತೆ ನೀಡಲಾಗಿದೆ.
ಟಿ20 ವಿಶ್ವಕಪ್ಗಾಗಿ ಪಾಕಿಸ್ತಾನ ತಂಡ ಇಂತಿದೆ : ಬಾಬರ್ ಅಜಮ್ (ನಾಯಕ), ಶಾದಾಬ್ ಖಾನ್, ಆಸಿಫ್ ಅಲಿ, ಹೈದರ್ ಅಲಿ, ಹಾರಿಸ್ ರೌಫ್, ಇಫ್ತಿಕರ್ ಅಹ್ಮದ್, ಖುಷ್ದಿಲ್ ಶಾ, ಮೊಹಮ್ಮದ್ ಹಸ್ನೇನ್, ಮೊಹಮ್ಮದ್ ನವಾಜ್, ಮೊಹಮ್ಮದ್ ರಿಜ್ವಾನ್, ಮೊಹಮ್ಮದ್ ವಾಸಿಂ ಜೂನಿಯರ್, ನಸೀಮ್ ಶಾಹ್, ಶಾಹೀನ್ ಶಾಹಿ , ಶಾನ್ ಮಸೂದ್, ಉಸ್ಮಾನ್ ಖಾದಿರ್.
ಸ್ಟ್ಯಾಂಡ್ಬೈಸ್ : ಮೊಹಮ್ಮದ್ ಹ್ಯಾರಿಸ್, ಫಖರ್ ಜಮಾನ್ ಮತ್ತು ಶಹನವಾಜ್ ದಹಾನಿ.