ಶಿವಮೊಗ್ಗ : ರಸ್ತೆ, ಅಣೆಕಟ್ಟು ವಿದ್ಯುತ್, ಮನೆಗಳ ನಿರ್ಮಾಣ ಸೇರಿದಂತೆ ಎಲ್ಲಾ ವಿಭಾಗಗಳಲ್ಲೂ ಇಂಜಿನಿಯರ್ಗಳ ಕೊಡುಗೆ ಅಪಾರವಾಗಿದ್ದು ದೇಶದಲ್ಲಿ ಅವರ ಪಾತ್ರ ಪ್ರಮುಖವಾದದ್ದು ಎಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್ ಹೇಳಿದರು.
ಜಿಲ್ಲಾಧಿಕಾರಿಗಳ ಕಾರ್ಯಾಲಯ, ಜಿಲ್ಲಾ ನಗರಾಭಿವೃದ್ಧಿ ಕೋಶ ಹಾಗೂ ಶಿವಮೊಗ್ಗ ಜಿಲ್ಲೆಯ ನಗರ ಮತ್ತು ಸ್ಥಳೀಯ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಭಾರತ ರತ್ನ ಸರ್.ಎಂ.ವಿಶ್ವೇಶ್ವರಯ್ಯ ಅವರ ಜನ್ಮದಿನದ ಅಂಗವಾಗಿ ಇಂದು ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಏರ್ಪಡಿಸಿದ್ದ ಇಂಜಿನಿಯರ್ಗಳ ದಿನಾಚರಣೆಯನ್ನು ವಿಶ್ವೇಶ್ವರಯ್ಯರ ಭಾವಚಿತ್ರಕ್ಕೆ ಪುಷ್ಪಾರ್ಚಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೋವಿಡ್ ಸಮಯದಲ್ಲಿ ತೀವ್ರವಾದ ವ್ಯಾಯಾಮ ಮಹಿಳೆಯರಲ್ಲಿ ‘ಕಳಪೆ ಮಾನಸಿಕ ಆರೋಗ್ಯ’ಕ್ಕೆ ಕಾರಣವಾಗುತ್ತೆ : ಅಧ್ಯಯನ
ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ ಅವರು ವಿಶ್ವ ಕಂಡ ಶ್ರೇಷ್ಠ ಇಂಜಿನಿಯರ್. ಕೆ.ಆರ್.ಎಸ್ ಅಣೆಕಟ್ಟು, ತುಂಗಾ-ಭದ್ರ ಅಣೆಕಟ್ಟು, ಕಬ್ಬಿಣ ಮತ್ತು ಉಕ್ಕಿನ ಕಾರ್ಖನೆಗಳ ನಿರ್ಮಾಣಕ್ಕೆ ಅವರ ದೂರದೃಷ್ಟಿಯೇ ಕಾರಣ. ಆದ್ದರಿಂದ ಮಂಡ್ಯ ಮತ್ತು ಮೈಸೂರಿನ ಜನತೆ ತಮ್ಮ ಮನೆಗಳಲ್ಲಿ ವಿಶ್ವೇಶ್ವರಯ್ಯರ ಭಾವಚಿತ್ರಗಳನ್ನು ಇಟ್ಟುಕೊಂಡು ಗೌರವಿಸುವುದನ್ನು ಕಾಣಬಹುದು ಎಂದರು.
ಈಗಿನ ಇಂಜಿನಿಯರ್ಗಳು ತರಾತುರಿಯಲ್ಲಿ ಕೆಲಸ ಮಾಡದೆ ವಿಶ್ವೇಶ್ವರಯ್ಯರಂತೆ ಕ್ಷಮತೆಯಿಂದ ಗುಣಮಟ್ಟದ ಕಾಮಗಾರಿ ಮಾಡಬೇಕು. ಇಂಜಿನಿಯರ್ಗಳ ದಿನಾಚರಣೆ ಕೇವಲ ಸಿವಿಲ್ ಇಂಜಿನಿಯರ್ಗಳಿಗೆ ಸೀಮಿತವಾಗಿಲ್ಲ ತಂತ್ರಜ್ಞಾನ, ಮ್ಯೆಕಾನಿಕಲ್ ಮುಂತಾದ ಕ್ಷೇತ್ರದ ಪ್ರತಿಯೊಬ್ಬ ಅಭಿಯಂತರರಿಗೆ ಈ ದಿನ ಸಮರ್ಪಣೆಯಾಗುತ್ತದೆ ಎಂದು ತಿಳಿಸಿದರು.
BIG NEWS: 65 ವರ್ಷಗಳ ಬಳಿಕ KSRTC ವೇತನ ಪಾವತಿ ವಿಧಾನ ಬದಲು: ಇನ್ಮುಂದೆ 1ನೇ ತಾರೀಕು ಚಾಲಕ, ನಿರ್ವಾಹಕರಿಗೂ ವೇತನ
ಅಪರ ಜಿಲ್ಲಾಧಿಕಾರಿ ಡಾ.ನಾಗೇಂದ್ರ ಎಫ್ ಹೊನ್ನಳ್ಳಿ ಮಾತನಾಡಿ ವಿಶ್ವೇಶ್ವರಯ್ಯ ನಿರ್ಮಿಸಿದ ಡ್ಯಾಂ, ಕಟ್ಟಡಗಳಲ್ಲಿ ಅವರ ಕಾರ್ಯಕ್ಷಮತೆ, ದೃಢನಿರ್ಧಾರ, ಸಂಕಲ್ಪಗಳು ಜಗತ್ತಿಗೆ ತಿಳಿದಿದೆ. ಹಾಗಾಗಿ ಪ್ರತಿಯೊಬ್ಬ ಇಂಜಿನಿಯರ್ಗಳು ಅವರ ಕಾರ್ಯವೈಖರಿಯನ್ನು ಜೀವನದಲ್ಲಿ ಅಳವಡಿಸಿಕೊಂಡು ಕರ್ತವ್ಯ ನಿರ್ವಹಿಸಬೇಕೆಂದರು.
ಮಹಾನಗರಪಾಲಿಕೆಯ ಸದಸ್ಯರಾದ ಅಭೀಷ್ ನಾಗೇಂದ್ರ, ಭದ್ರಾವತಿ ನಗರಸಭೆ ಪೌರಯುಕ್ತ ಮನುಕುಮಾರ್, ಸಾಗರ ನಗರಸಭೆ ಪೌರಯುಕ್ತ ರಾಜು ಬಣಕಾರ್, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ಮೂಕಪ್ಪ ಕರಿಭೀಮಣ್ಣನವರ್, ಅಧೀಕ್ಷಕ ಅಭಿಯಂತರರಾದ ನಟೇಶ್, ಎಲ್. ಮೋಹನ್ ಕುಮಾರ್, ಕಾನೂನು ಸಲಹೆಗಾರ ರವೀಂದ್ರನಾಥ್, ಕಾರ್ಯಪಾಲ ಅಭಿಯಂತರರಾದ ನದಾಫ್ ವಹೀದ ಬೇಗಂ, ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ನಾಗರಾಜು, ಜಿಲ್ಲೆಯ ಎಲ್ಲ ಇಂಜಿನಿಯರ್ಗಳು, ಸಿಬ್ಬಂದಿಗಳು ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.