ರಾಜಸ್ಥಾನ : ರಾಜಸ್ಥಾನದ ದೌಸಾ ಜಿಲ್ಲೆಯ ಬಂಡಿಕುಯಿ ಪಟ್ಟಣದಲ್ಲಿ ಸುಮಾರು 200 ಅಡಿ ಆಳದ ಕೊಳವೆ ಬಾವಿಗೆ ಬಿದ್ದಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
BIGG NEWS : ‘ಶಿಕ್ಷಣ ಸಂಸ್ಥೆಗಳಿಗೆ ಅಧಿಕಾರವಿದೆ..’ ; ಹಿಜಾಬ್ ನಿಷೇಧದ ಕುರಿತು ಸುಪ್ರೀಂಕೋರ್ಟ್ ಮಹತ್ವದ ಅಭಿಪ್ರಾಯ
ಬಾಲಕಿಯನ್ನು ಅಂಕಿತಾ ಎಂದು ಗುರುತಿಸಲಾಗಿದ್ದು,ಆಕೆ 100 ಅಡಿ ಎತ್ತರದಲ್ಲಿ ಸಿಲುಕಿಕೊಂಡಿದ್ದಾಳೆ ಎಂದು ತಿಳಿದು ಬಂದಿದೆ. ಸದ್ಯ ಸ್ಥಳಕ್ಕೆ ರಕ್ಷಣಾ ಸಿಬ್ಬಂದಿ, ಯಂತ್ರಗಳು ಮತ್ತು ಟ್ರ್ಯಾಕ್ಟರ್ಗಳನ್ನು ದಾವಿಸಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
ಬಾಲಕಿ ಆಟವಾಡುತ್ತಿದ್ದಾಗ ಕೊಳವೆ ಬಾವಿಗೆ ಬಿದ್ದಿದ್ದು, ಮಗು ಬಿದ್ದಿರುವುದನ್ನು ಅರಿತ ಮನೆಯವರು ಅಧಿಕಾರಿಗಳ ಮೊರೆ ಹೋಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಜೈಪುರದಿಂದ ಎಸ್ಡಿಆರ್ಎಫ್ (ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ) ತಂಡವನ್ನು ಸ್ಥಳಕ್ಕೆ ಕರೆಸಿದೆ. ಜಿಲ್ಲಾಡಳಿತ ಆಗಮಿಸಿದ್ದು, ಸ್ಥಳದಲ್ಲಿದ್ದ ಬಾಲಕಿಗೆ ವೈದ್ಯಕೀಯ ತಂಡ ಪೈಪ್ ಮೂಲಕ ಆಮ್ಲಜನಕ ಪೂರೈಸುತ್ತಿದ್ದು, ಬೋರ್ ವೆಲ್ ಮೇಲೆ ನಿಗಾ ಇಡಲು ಸಿಸಿಟಿವಿ ಇರಿಸಲಾಗಿದೆ.
BREAKING NEWS : ರಜೌರಿಯಲ್ಲಿ ಭೀಕರ ಬಸ್ ಅಪಘಾತ ; 6 ಜನ ಸಾವು, 25 ಮಂದಿಗೆ ಗಾಯ |Bus accident in Rajouri