ಬೆಂಗಳೂರು: ಇದುವರೆಗೆ ಕೆಎಸ್ಆರ್ ಟಿಸಿಯಿಂದ 1957 ಮತ್ತು 1962ರ ಕೈಗಾರಿಕ ಒಬ್ಬಂದದಂತೆ ವಿವಿಧ ಸಿಬ್ಬಂದಿಗಳಿಗೆ, ವಿವಿಧ ಹಂತಗಳಲ್ಲಿ ವೇತನ ಪಾವತಿ ಮಾಡಲಾಗುತ್ತಿತ್ತು. ಈ ವಿಧಾನಕ್ಕೆ 65 ವರ್ಷಗಳ ಬಳಿಕ ತಿಲಾಂಜಲಿ ಇಡಲಾಗಿದೆ. ಇನ್ಮುಂದೆ ಕೆ ಎಸ್ ಆರ್ ಟಿ ಸಿಯ ಎಲ್ಲಾ ಅಧಿಕಾರಿ, ನೌಕರರು, ಚಾಲಕ, ನಿರ್ವಾಹಕರಿಗೆ ( KSRTC Driver and Conductor ) 1ನೇ ತಾರೀಕು ವೇತನ ಪಾವತಿ ಕ್ರಮವನ್ನು ಜಾರಿಗೊಳಿಸಲಾಗುತ್ತಿದೆ.
ಈ ಕುರಿತಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದಂತ ವಿ ಅನ್ಬುಕುಮಾರ್ ( KSRTC MD V Anbhukumar ) ಅವರು ನಿಗಮದ ಎಲ್ಲಾ ಆದೇಶ ಹೊರಡಿಸಿದ್ದಾರೆ. ಆ ಆದೇಶದಲ್ಲಿ ಆಡಳಿತ ಸಿಬ್ಬಂದಿಗಳಿಗೆ ಪ್ರತಿ ತಿಂಗಳ 1ನೇ ತಾರೀಕು, ತಾಂತ್ರಿಕ ಸಿಬ್ಬಂದಿಗಳಿಗೆ 4ನೇ ತಾರೀಕು, ಚಾಲಕ ಸಿಬ್ಬಂದಿಗಳಿಗೆ 6ನೇ ತಾರೀಕು ವೇತನ ಪಾತಿಸಗೆ ಎಂಜಿಆರ್ ಟಿಡಿ ಸ್ಥಾಯಿ ಆದೇಶದಲ್ಲಿ ನಿರ್ದೇಶನವಿರುತ್ತದೆ ಎಂದಿದ್ದಾರೆ.
ಶಿವಮೊಗ್ಗ: ಕೋವಿಡ್-19 ಬೂಸ್ಚರ್ ಡೋಸ್ ಪಡೆಯಿರಿ – DHO ಡಾ.ರಾಜೇಶ್ ಸುರಗಿಹಳ್ಳಿ ಮನವಿ
ಇದಲ್ಲದೇ ನೌಕರರ ವೇತನವನ್ನು ಸಾಮಾನ್ಯವಾಗಿ 7ನೇ ತಾರೀಕಿನಂದು ಪಾವತಿ ಮಾಡಲು 1957 ಮತ್ತು 1962ರ ಕೈಗಾರಿಕ ಒಪ್ಪಂದದಲ್ಲಿ ಉಲ್ಲೇಖಿಸಲಾಗಿದೆ. ವೇತನ ಪಾವತಿ ಕುರಿತು ಅನುಸರಿಸುವ ಕ್ರಮಗಳ ಕುರಿತು ಲೆಕ್ಕಪತ್ರ ಕೈಪಿಡಿಯಲ್ಲಿ ನಿರ್ದೇಶನಗಳಿರುತ್ತವೆ ಎಂದು ತಿಳಿಸಿದ್ದಾರೆ.
ಪ್ರಸ್ತುತ ಕೆಎಸ್ಆರ್ ಟಿಸಿ ನಿಗಮದಲ್ಲಿ ಕೇಂದ್ರ ಕಚೇರಿ, ವಿಭಾಗೀಯ ಕಚೇರಿ, ತರಬೇತಿ ಕೇಂದ್ರದ ಅಧಿಕಾರಿ, ಸಿಬ್ಬಂದಿಗಳಿಗೆ ಪ್ರತಿ ತಿಂಗಳು 7ನೇ ತಾರೀಕಿನಂದು ವೇತನವನ್ನು ಪಾವತಿಸಲಾಗುತ್ತಿದೆ. ಆದ್ರೇ ಇನ್ಮುಂದೆ ವೇತನ ಪಾವತಿಯಲ್ಲಿ ಏಕರೂಪತೆ ತರುವ ನಿಟ್ಟಿನಲ್ಲಿ ಎಲ್ಲಾ ಅಧಿಕಾರಿ, ನೌಕರರ ವೇತನವನ್ನು ಪ್ರತಿ ತಿಂಗಳ 1ನೇ ತಾರೀಕಿನಂದು ಪಾವತಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದ್ದಾರೆ.
BIGG NEWS : ಭಾರತ್ ಜೋಡೋ ,ಅಧಿವೇಶನ ಮಧ್ಯೆ ನನಗೆ ಇಡಿ ಸಮನ್ಸ್ : ಡಿ.ಕೆ.ಶಿವಕುಮಾರ್ ಅಸಮಧಾನ | DK Shivakumar
ಅಂದಹಾಗೇ ಇದು ಸಾಧ್ಯವೇ ಎಂಬುದಾಗಿ ನೌಕರರು ಹುಬ್ಬೇರಿಸಬಹುದು. ಆದ್ರೇ ಇದನ್ನು ಸಾಧ್ಯವಾಗಿಸೋ ನಿಟ್ಟಿನಲ್ಲಿ ಮಹತ್ವದ ಕ್ರಮವನ್ನು ಕೂಡ ಕೆ ಎಸ್ ಆರ್ ಟಿಸಿ ಎಂ.ಡಿ ವಿ ಅನ್ಬುಕುಮಾರ್ ಕೈಗೊಂಡಿದ್ದಾರೆ.
ಅದೇನೆಂದ್ರೇ ವೇತನ ಪಾವತಿ ಸಂಬಂಧ ವಾಸ್ತವಿಕ ಹಾಜರಾತಿ ಪರಿಗಣನೆಗೆ ಪ್ರತಿ ತಿಂಗಳ 20ನೇ ತಾರೀಕು ಡೆಡ್ ಲೈನ್ ನೀಡಿದ್ದಾರೆ. ಊಹಾತ್ಮಕ ಹಾಜರಾತಿಗೆ 21ನೇ ತಾರೀಕಿನಿಂದ ತಿಂಗಳಾಂತ್ಯದವರೆಗೆ ಸಲ್ಲಿಸುವಂತೆ ಸೂಚಿಸಿದ್ದಾರೆ. ರಜೆ ಮಂಜೂರಾತಿ ಆದೇಶಗಳನ್ನು 23ನೇ ತಾರೀಕಿನ ಒಳಗೆ ಸಲ್ಲಿಸಬೇಕು. ಸಮಯ ಪಟ್ಟಿಯನ್ನು 25ನೇ ತಾರೀಕು, ಹಾಜರಾತಿ ಹಾಗೂ ಪೂರಕ ವಿವರಣಾ ಪಟ್ಟಿಗಳನ್ನು ಲೆಕ್ಕಪತ್ರ ಇಲಾಖೆ, ಶಾಖೆಗೆ ಪ್ರತಿ ತಿಂಗಳ 25ನೇ ತಾರೀಕಿನೊಳಗೆ ಸಲ್ಲಿಸಿ, ಪ್ರತಿ ತಿಂಗಳ 1ನೇ ತಾರೀಕಿನಂದು ಕೆ ಎಸ್ ಆರ್ ಟಿ ಸಿಯ ಅಧಿಕಾರಿ, ತಾಂತ್ರಿಕ ವರ್ಗ, ಸಿಬ್ಬಂದಿ, ಚಾಲಕ, ನಿರ್ವಾಹಕರಿಗೆ ವೇತನ ಪಾವತಿಯಾಗುವಂತೆ ಖಡಕ್ ಆದೇಶಿಸಿದ್ದಾರೆ.
ಕೋವಿಡ್ ಸಮಯದಲ್ಲಿ ತೀವ್ರವಾದ ವ್ಯಾಯಾಮ ಮಹಿಳೆಯರಲ್ಲಿ ‘ಕಳಪೆ ಮಾನಸಿಕ ಆರೋಗ್ಯ’ಕ್ಕೆ ಕಾರಣವಾಗುತ್ತೆ : ಅಧ್ಯಯನ
ಈ ಎಲ್ಲಾ ಸೂಚನೆ, ಕ್ರಮಗಳನ್ನು ಇಲಾಖಾ ಮುಖ್ಯಸ್ಥರು, ವಿಭಾಗೀಯ ನಿಯಂತ್ರಣಾಧಿಕಾರಿಗಳು ಸೇರಿದಂತೆ ವಿವಿಧ ಹಂತದ ಅಧಿಕಾರಿಗಳಉ ತಪ್ಪದೇ ಪಾಲಿಸಬೇಕು. ಎಲ್ಲಾ ಹಂತಗಳಲ್ಲಿ ಪರಿಪೂರ್ಣವಾಗಿ ಜಾರಿಗೆ ತರಬೇಕು. ದೂರುಗಳಿಗೆ ಆಸ್ಪದ ನೀಡದಂತೆ ಕ್ರಮ ಕೈಗೊಳ್ಳಬೇಕು. ಈ ಸಾಮಾನ್ಯ ಸ್ಥಾಯಿ ಆದೇಶವು ತಕ್ಷಣದಿಂದ ಜಾರಿಗೆ ಬರುವಂತೆ ಆದೇಶಿಸಿದ್ದಾರೆ.
ವರದಿ : ವಸಂತ ಬಿ ಈಶ್ವರಗೆರೆ