ಬೆಂಗಳೂರು: ಇಂದು ವಿಧಾನ ಪರಿಷತ್ ನಲ್ಲಿ ಮತಾಂತರ ನಿಷೇಧ ಕಾಯ್ದೆ ಮಂಡಿಸಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮತಾಂತರವನ್ನು ಕಾನೂನು ಬದ್ಧವಾಗಿ ಮಾಡಲಿ ಎಂದು ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕವನ್ನು ತರುತ್ತಿದ್ದೇವೆ ಎಂದರು.
BIGG NEWS: ಧಾರವಾಡದಲ್ಲಿ ಕುಡಿದ ಮತ್ತಿನಲ್ಲಿ ಹೆಂಡ್ತಿಯನ್ನೇ ಕೊಂದ ಭೂಪ
ಸಂವಿಧಾನದ ಪ್ರಕಾರವೇ ಮತಾಂತರ ನಿಷೇಧ ಕಾಯ್ದೆ ಇರಲಿದೆ. ಮೂಲಭೂತ ಹಕ್ಕಿಗೆ ಚ್ಯುತಿ ತರುತ್ತಿಲ್ಲ. ಮತಾಂತರ ಮಾಡಬೇಡಿ ಎಂದು ಎಲ್ಲಿಯೂ ಹೇಳುತ್ತಿಲ್ಲ. ಆದರೆ, ಒತ್ತಾಯ, ಬಲವಂತ ಎನ್ನುವುದಷ್ಟೇ ಇದೆ. ಈಗಾಗಲೇ ಕೆಲ ರಾಜ್ಯಗಳಲ್ಲಿ ಈ ಕಾಯ್ದೆ ತರಲಾಗಿದೆ. ಸಂವಿಧಾನದ ಆರ್ಟಿಕಲ್ 25ರ ಉಲ್ಲಂಘನೆ ಮಾಡುವ ಅಂಶ ಕಾನೂನಿನಲ್ಲಿ ಇಲ್ಲ. ಕೋರ್ಟ್ನಲ್ಲಿ ಪ್ರಶ್ನಿಸಿದ ನಂತರವೂ ಕಾನೂನು ಜಾರಿಯಾಗಿದೆ ಎಂದರು.
BIGG NEWS: ಧಾರವಾಡದಲ್ಲಿ ಕುಡಿದ ಮತ್ತಿನಲ್ಲಿ ಹೆಂಡ್ತಿಯನ್ನೇ ಕೊಂದ ಭೂಪ
ಇನ್ನು ಧರ್ಮಾಧಾರಿತ ಯುದ್ಧಗಳಿಂದ ಎಷ್ಟು ಸಾವು ನೋವುಗಳಾಗಿವೆ ಎನ್ನುವುದು ಇತಿಹಾಸದ ಪುಟದಲ್ಲಿದೆ. ಹಾಗಾಗಿ ನಾವು ಅಂತಹ ಘಟನೆಗಳಾಗಬಾರದು ಎಂದು ವಿಧೇಯಕ ತರುತ್ತಿದ್ದೇವೆ. ಇಂದು ಧರ್ಮವನ್ನು ಅದರ ಪಾಡಿಗೆ ಅದನ್ನು ಬಿಟ್ಟರೆ ಶಾಂತಿ, ಪ್ರೀತಿ ವಿಶ್ವಾಸ ಎಂದು ಬೋಧಿಸುತ್ತಾರೆ. ಆದರೆ ಇಂದು ಧರ್ಮದ ಹೆಸರಿನಲ್ಲಿ ಭಯೋತ್ಪಾದಕ ಚಟುವಟಿಕೆ, ಧರ್ಮದ ಹೆಸರಿನಲ್ಲಿ ಅಧರ್ಮ ಮಾಡಲಾಗುತ್ತಿದೆ ಎಂದು ಹೇಳಿದರು.