ಬೆಂಗಳೂರು: ಜಾಂಡೀಸ್ ನಿಂದ ಬಳಲುತ್ತಿದ್ದಂತ ಕಿರುತೆರೆ ನಟ ಮಂಡ್ಯ ರವಿ ( Serial Artist Mandya Ravi ) ಅವರ ಆರೋಗ್ಯ ಕಿಡ್ನಿ ಸಮಸ್ಯೆಯಿಂದಾಗಿ ಗಂಭೀರಗೊಂಡಿತ್ತು. ನಿನ್ನೆ ತೀವ್ರ ಅನಾರೋಗ್ಯದ ಕಾರಣ ಚಿಕಿತ್ಸೆ ಫಲಿಸದೇ ಅವರು ನಿಧನರಾಗಿದ್ದರು. ಹೀಗೆ ನಿಧನರಾದಂತ ಅವರ ಪಾರ್ಥೀವ ಶರೀರವನ್ನು ಸ್ವಗ್ರಾಮದಲ್ಲಿ ಇಂದು ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಈ ಮೂಲಕ ಕಿರುತೆರೆ ನಟ ಮಂಡ್ಯ ರವಿ ಅವರು ಪಂಚಭೂತಗಳಲ್ಲಿ ಲೀನರಾಗಿದ್ದಾರೆ.
BIGG NEWS: ಕಾರಂಜಾ ಮುಳುಗಡೆ; ರೈತರಿಗೆ ಹೆಚ್ಚುವರಿ ಪರಿಹಾರ ನೀಡುವುದಕ್ಕೆ ಆಗೋಲ್ಲ- ಗೋವಿಂದ್ ಕಾರಜೋಳ
ಕೆಲ ದಿನಗಳಿಂದ ತೀವ್ರ ಸ್ವರೂಪದ ಜಾಂಡೀಸ್ ನಿಂದಾಗಿ ಕಿರುತೆರೆ ನಟ ಮಂಡ್ಯ ರವಿ ಅವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಈ ಬಳಿಕ ಅವರಿಗೆ ಕಿಡ್ನಿ ಸಮಸ್ಯೆ ಉಂಟಾಗಿ ಸ್ಥಿತಿ ಗಂಭೀರಗೊಂಡಿತ್ತು. ಇಂತಹ ಅವರು ನಿನ್ನೆ ಚಿಕಿತ್ಸೆ ಫಲಿಸದೇ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧರಾಗಿದ್ದರು.
ನಿನ್ನೆ ನಿಧನರಾಗಿದ್ದಂತ ಕಿರುತೆರೆ ನಟ ಮಂಡ್ಯ ರವಿ ಅವರ ಅಂತ್ಯಕ್ರಿಯೆಯನ್ನು ಮಂಡ್ಯ ಜಿಲ್ಲೆಯ ಕಲ್ಲಹಳ್ಳಿಯ ರುದ್ರಭೂಮಿಯಲ್ಲಿ ಇಂದು ನೆರವೇರಿಸಲಾಯಿತು. ಒಕ್ಕಲಿಗರ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಸಲಾಯಿತು. ಮಂಡ್ಯ ರವಿಯ ಪಾರ್ಥೀವ ಶರೀರದ ಚಿತೆಗೆ ಅವರ ಪುತ್ರ ರಾಜೀವ್ ಗೌಡ ಅಗ್ನಿಸ್ಪರ್ಷ ಮಾಡಿದರು. ಈ ಮೂಲಕ ಕಿರುತೆರೆ ನಟ ಮಂಡ್ಯ ರವಿ ಪಂಚಭೂತಗಳಲ್ಲಿ ಲೀನರಾದರು.
ಶಿವಮೊಗ್ಗ: ಕೋವಿಡ್-19 ಬೂಸ್ಚರ್ ಡೋಸ್ ಪಡೆಯಿರಿ – DHO ಡಾ.ರಾಜೇಶ್ ಸುರಗಿಹಳ್ಳಿ ಮನವಿ