ಪುಣೆ: ಆನ್ಲೈನ್ ಸಾಲದ ಅರ್ಜಿಗೆ 15,000 ರೂ.ಗಳನ್ನು ಪಾವತಿಸಲು ಹಣ ನೀಡಲು ನಿರಾಕರಿಸಿದ ಅಜ್ಜಿಯನ್ನು ಕೊಲೆ ಮಾಡಿರುವ ಘಟನೆ ನಡೆದಿದೆ. ತನ್ನ ಅಜ್ಜಿ ಸುಲೋಚನಾ ಡಾಂಗೆಯನ್ನು ಕೊಂದ ಆರೋಪದ ಮೇಲೆ 24 ವರ್ಷದ ಗೌರಿ ಡಾಂಗೆ ಎಂಬ ಮಹಿಳೆಯನ್ನು ಬಂಧಿಸಲಾಗಿದೆ.
ಸುಲೋಚನಾ ಡಾಂಗೆ (70) ಮಂಗಳವಾರ ವಾರ್ಜೆ ನಾಕಾ ಬಳಿಯ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎನ್ನಲಾಗಿದೆ. ಅಜ್ಜಿಯ ಸಾವಿನ ನಂತರ, ಗೌರಿ ಕೊಲೆ ದೂರು ದಾಖಲಿಸಿದ್ದಳು ಎನ್ನಲಗಿದೆ. ಇದೇ ವೇಳೆ ಪೋಲಿಸರ ವಿಚಾರಣೆ ವೇಳೆ ಚತನ್ನ ಹೇಳಿಕೆಗಳನ್ನು ಬದಲಾಯಿಸುತ್ತಲೇ ಇದ್ದಳು, ಇದು ಪೊಲೀಸರಿಗೆ ಅನುಮಾನವನ್ನುಂಟು ಮಾಡಿತು. ಆಕೆಯನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಯಿತು, ಈ ಸಮಯದಲ್ಲಿ ಅವಳು ಅಪರಾಧವನ್ನು ಮಾಡಿದ್ದಾಗಿ ಒಪ್ಪಿಕೊಂಡಳು” ಎಂದು ಡೆಪ್ಯುಟಿ ಕಮಿಷನರ್ ಆಫ್ ಪೊಲೀಸ್ (ವಲಯ 3) ಪೌರ್ನಿಮಾ ಗಾಯಕ್ವಾಡ್ ಅವರನ ಉಲ್ಲೇಖಿಸಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿದ್ದಾವೆ.