ಬೆಂಗಳೂರು : ಬಳ್ಳಾರಿ ವಿಮ್ಸ್ ನಲ್ಲಿ ರೋಗಿಗಳ ಸಾವು ಪ್ರಕರಣ ಸಂಬಂಧಿಸಿ ಮಾತನಾಡಿ ಸಚಿವ ಬಿ. ಶ್ರೀರಾಮುಲು ಮಾತನಾಡಿ, ವಿಮ್ಸ್ ನಲ್ಲಿ ʻವಿದ್ಯುತ್ ಸಮಸ್ಯೆಯಿಂದ ಸಾವಾಗಿಲ್ಲ ʼಎಂದು ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದಾರೆ.
ಬಳ್ಳಾರಿಯ ವಿಮ್ಸ್ ಐಸಿಯುನಲ್ಲಿ ಮೂವರು ದಾರುಣ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನಸಭೆಯಲ್ಲಿ ಬಳ್ಳಾರಿ ವಿಮ್ಸ್ ಆಸ್ಪತ್ರೆಯ ದುರಂತವನ್ನು ಧ್ವನಿ ಎತ್ತಿದ್ದಾರೆ. ವಿಮ್ಸ್ ಘಟನೆ ಇದು ಸರ್ಕಾರಿ ಪ್ರಾಯೋಜಿತ ಕೊಲೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಈ ಹೇಳಿಕೆಗೆ ಸದಸನದಲ್ಲಿ ಸಚಿವ ಮಾಧುಸ್ವಾಮಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ
ಇದೀಗ ಸಚಿವ ಬಿ. ಶ್ರೀರಾಮುಲು ಮಾಧ್ಯಮಗಳೊಂದಿಗೆ ಮಾತನಾಡಿ, ವಿಮ್ಸ್ ನಲ್ಲಿ ವಿದ್ಯುತ್ ಸಮಸ್ಯೆಯಿಂದ ಸಾವಾಗಿಲ್ಲ. ವಿಮ್ಸ್ ಗೆ ಸುಮಾರು 150 ವರ್ಷಗಳ ಇತಿಹಾಸವಿದೆ. ಆವತ್ತು ಆಸ್ಪತ್ರೆಯಲ್ಲಿ ಶಾರ್ಟ್ಸರ್ಕ್ಯೂಟ್ ಆಗಿತ್ತು. ಆದ್ರೆ ಆಸ್ಪತ್ರೆಯಲ್ಲಿ ಯುಪಿಎಸ್ಗಳು ಕೆಲಸ ಮಾಡುತ್ತಿದ್ದು, ಸರ್ಕಾರಿ ಪ್ರಾಯೋಜಿತ ಕೊಲೆ ಅಂತಾ ಪದ ಬಳಕೆ ಮಾಡೋದು ಸರಿಯಲ್ಲ. ಸಿದ್ದರಾಮಯ್ಯ ಕೊಲೆ ಎಂದು ಪದ ಬಳಸಿದ್ದು ಸರಿಯಲ್ಲ ಬೆಂಗಳೂರಿನಲ್ಲಿ ಸಚಿವ ಬಿ. ಶ್ರೀರಾಮುಲು ಸ್ಪಷ್ಟನೆ ನೀಡಿದ್ದಾರೆ.