ಕೋಲಾರ: ಕಾಲೇಜಿಗೆ ಬಂಕ್ ಹಾಕಿ ಜಿಲ್ಲೆಯ ಕೆಲ ವಿದ್ಯಾರ್ಥಿಗಳು ಇತಿಹಾಸ ಪ್ರಸಿದ್ದವಾದ , ಅಂತರಗಂಗೆ ತಪ್ಪಲಿನಲ್ಲಿರುವ ಪೊದೆಯೊಳಗೆ ಹೋಗುತ್ತಿರವ ಘಟನೆ ನಡೆಯುತ್ತಿದ್ದು, ಇದರಿಂದ ನಾಗರೀಕ ಸಮಾಜ ಓಡಾಡದ ಸನ್ನಿವೇಶ ನಿರ್ಮಾಣವಾಗಿದೆ. ಕಾಲೇಜಿಗೆ ಚಕ್ಕರ್ ಹಾಕಿ , ಅಂತರಗಂಗೆ ತಪ್ಪಲಿನಲ್ಲಿರುವ ಪೊದೆಗಳ ಒಳಗೆ ಹೋಗುವ ವಿದ್ಯಾರ್ಥಿಗಳು ಪರಸ್ಪರ ಚುಂಬಿಸುವ, ಮುದ್ದಾಡುವ ಘಟನೆ ನಡೆಯುತ್ತದೆ ಎನ್ನಲಾಗಿದೆ.
ಈ ನಡುವೆ ಅಂತರಗಂಗೆ ಕಾಶಿ ವಿಶ್ವೇಶ್ವರ ಸನ್ನಿಧಿಯಲ್ಲಿ ಈ ರೀತಿ ಘಟನೆಯಿಂದಾಗಿ ಇಲ್ಲಿಗೆ ಭಕ್ತರು ಓಡಾಡದ ಸನ್ನಿವೇಶ ನಿರ್ಮಾಣವಾಗಿದೆ. ಇನ್ನೂ ಪೊಲೀಸ್ ಇಲಾಖೆ, ಅರಣ್ಯ ಇಲಾಖೆಯವರು ಇದರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು ಅಂತ ಸಾರ್ವಜನಿಕರು ಆಗ್ರಹಿದ್ದಾರೆ.