ಬೆಂಗಳೂರು: ಇತ್ತೀಚಿಗೆ ಸಿಎಂ ಬಸವರಾಜ ಬೊಮ್ಮಾಯಿಯವರ ( CM Basavaraj Bommai ) ಮಾಧ್ಯಮ ಸಂಯೋಜಕರಾಗಿದ್ದಂತ ಗುರುಲಿಂಗಸ್ವಾಮಿ ಹೊಳಿಮಠ ಅವರು ಅಕಾಲಿಕವಾಗಿ ನಿಧನಹೊಂದಿದ್ದರು. ಅವರ ನಿಧನದ ತರುವಾಯ ತೆರವಾಗಿದ್ದಂತ ಸ್ಥಾನಕ್ಕೆ ಹಿರಿಯ ಪತ್ರಕರ್ತ ಶಂಕರ್ ಹಾಗೋಜಿ ಅವರನ್ನು ನೇಮಕ ಮಾಡಲಾಗಿದೆ. ಇದಲ್ಲದೇ ಸಿಎಂ ಮಾಧ್ಯಮ ಸಲಹೆಗಾರರನ್ನಾಗಿ ಮೋಹನ್ ಕೃಷ್ಣ ಅವರನ್ನು ನೇಮಕ ಮಾಡಲಾಗಿದೆ.
ಸಿಎಂ ಬಸವರಾಜ ಬೊಮ್ಮಾಯಿಯವರ ಮಾಧ್ಯಮ ಸಲಹೆಗಾರರನ್ನಾಗಿ ಮೋಹನ್ ಕೃಷ್ಣ ಅವರನ್ನು ನೇಮಕ ಮಾಡಲಾಗಿದೆ. ಈ ಸಂಬಂಧ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಅಧಿಸೂಚನೆ ಹೊರಡಿಸಿದ್ದಾರೆ. ಇವರಲ್ಲದೇ ಈ ತಕ್ಷಣದಿಂದ ಜಾರಿಗೆ ಬರುವಂತೆ ಶಂಕರ್ ಪಾಗೋಜಿ ಅವರನ್ನು ಮುಖ್ಯಮಂತ್ರಿಯವರ ಪದಾವಧಿವರೆಗೆ ಅಥವಾ ಮುಂದಿನ ಆದೇಶದವರೆಗೆ ಮುಖ್ಯಮಂತ್ರಿಯವರ ಮಾಧ್ಯಮ ಸಂಯೋಜಕರನ್ನಾಗಿ ನೇಮಿಸಲಾಗಿದೆ ಎಂದು ತಿಳಿಸಿದ್ದಾರೆ.
ಅಂದಹಾಗೇ ಈ ಮೊದಲು ಸಿಎಂ ಬೊಮ್ಮಾಯಿಯವರ ಮಾಧ್ಯಮ ಸಂಯೋಜಕರಾಗಿದ್ದಂತ ಗುರುಲಿಂಗಸ್ವಾಮಿ ಹೊಳಿಮಠ, ದಿಢೀರ್ ಹೃದಯಾಘಾತಕ್ಕೆ ಒಳಗಾಗಿ ನಿಧನರಾಗಿದ್ದರು. ಅವರ ನಿಧನದಿಂದಾಗಿ ಕುಟುಂಬಸ್ಥರು ಕಂಗಾಲಾಗಿದ್ದರು. ಈ ಹಿನ್ನಲೆಯಲ್ಲಿ ಮಾನವೀಯತೆ ಮೆರೆದಿದ್ದಂತ ಬೊಮ್ಮಾಯಿ, ಸಿಎಂ ಕಚೇರಿಯಲ್ಲಿ ಗುರುಲಿಂಗಸ್ವಾಮಿ ಪತ್ನಿಗೆ ಕೆಲಸ ನೀಡಿದ್ದರು.