ಕೋಲಾರ: ಅಂಗನವಾಡಿ ನೌಕರರ ಯಡವಟ್ಟಿನಿಂದ ಮಗುವೊಂದು ಕೆಲ ಗಂಟೆಗಳ ಕಾಲ ಮಗುವೊಂದು ಶೌಚಾಲಯದಲ್ಲೇ ಬಂಧನವಾಗಿರುವ ಘಟನೆ ಕೋಲಾರದಲ್ಲಿ ನಡೆದಿದೆ.
ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ಆರೋಹಳ್ಳಿ ಗ್ರಾಮದಲ್ಲಿ ಈ ಘಟನೆ ನಡಿದಿದ್ದು, ಅಂಗನವಾಡಿ ಶಿಕ್ಷಕಿ ಸುಧಾ ಹಾಗೂ ಸಹಾಯಕಿ ಶಾರದ ಎನ್ನುವವರ ವಿರುದ್ದ ಮಗುವಿನ ಹೆತ್ತುವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಗುವೊಂದು ಶೌಚಾಲಯಕ್ಕೆ ಹೋಗಿದ್ದು, ಇದನ್ನು ಗಮನಿಸಿದ ಸಹಾಯಕರು ಶೌಚಾಲಯಕ್ಕೆ ಬೀಗ ಜಡಿದುಕೊಂಡು ಮನೆಗೆ ಹೋಗಿದ್ದಾರೆ. ಈ ವೇಳೆ ಮಗುವಿನ ಹೆತ್ತವರು ಮಗುವಿಗಾಗಿ ಇಡೀ ಊರನ್ನು ಸುತ್ತು ಹಾಕಿದ್ದಾರೆ. ಕೊನೆಗೆ ಕೊನೆಗೆ ಅಂಗನವಾಡಿ ಬಳಿ ಬಂದಾಗ. ಶೌಚಾಲಯದಲ್ಲಿ ಬಾಲಕ ಅಳುತ್ತಿರುವುದು ಕೇಳಿಸಿಕೊಂಡು ಬಂದಿದ್ದಾರೆ. ಇದೇ ವೇಳೆ ಅಂಗನವಾಡಿ ಶಿಕ್ಷಕಿ ಹಾಗೂ ಸಹಾಯಕಿ ಬೇಜವಾಬ್ದಾರಿಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು ಸೂಕ್ತ ಕ್ರಮವನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.