ಬೆಂಗಳೂರು :ವಿಧಾನ ಪರಿಷತ್ನಲ್ಲಿ ಸಿಲಿಕಾನ್ ಸಿಟಿ ಬೆಂಗಳೂರಿನ ಕಸದ ಸಮಸ್ಯೆ ವಿಚಾರ ಪ್ರಸ್ತಾಪವಾಗಿದ್ದು, ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ ʻ ಹಸಿ-ಒಣ ಕಸ ನಿರ್ವಹಣೆಗೆ ಸಮಗ್ರ ಯೋಜನೆ ಮಾಡುತ್ತೇವೆ ʼ ಪ್ರತಿಕ್ರಿಯೆ ನೀಡಿದ್ದಾರೆ.
ಗಲ್ಲಿ ಗಲ್ಲಿಯಲ್ಲೂ.. ಏರಿಯಾ ಏರಿಯಾದಲ್ಲೂ ಕಸ ದಿನದಿಂದ ದಿನಕ್ಕೆ ಹೆಚ್ಚಾಗಿದೆ. ಬಿಬಿಎಂಪಿಯನ್ನ ಬೆಂಬಿಡದೇ ಕಾಡ್ತಿರೋ ಬಹುದೊಡ್ಡ ಸಮಸ್ಯೆಯಾಗಿದೆ. ಅದ್ರಲ್ಲೂ, ಗಾರ್ಬೇಜ್ ಸಿಟಿ ಎಂದು ಕರೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಈ ವಿಚಾರ ಇದೀಗ ಪರಿಷತ್ ಪ್ರಸ್ತಾಪವಾಗಿದ್ದು, ಹಸಿ- ಒಣ ಕಸ ನಿರ್ವಹಣೆ ದೊಡ್ಡ ಸಮಸ್ಯೆಯಾಗಿದೆ. ಹಸಿ- ಒಣ ಕಸ ನಿರ್ವಹಣೆಗೆ ಒಂದು ಯೋಜನೆ ಇಲ್ಲ. ಬೆಂಗಳೂರು ವೇಗವಾಗಿ ಬೆಳೆಯುತ್ತಿದೆ , ಕಸವೂ ಹೆಚ್ಚಾಗುತ್ತಿದೆ. ಕಸ ನಿರ್ವಹಣೆಗೆ ಸಮಗ್ರ ಯೋಜನೆ ಮಾಡ್ತೀವೆ. ಕಸ ನಿರ್ವಹಣೆ ಸಮಸ್ಯೆಗೆ ಸರ್ಕಾರ ಪರಿಹಾರ ಕೊಡಲಿದೆ. ಕಾಂಗ್ರೆಸ್ ಸದಸ್ಯರ ಪ್ರಶ್ನೆಗೆ ಸಿಎಂ ಬೊಮ್ಮಾಯಿ ಉತ್ತರಿಸಿದ್ದಾರೆ.