ಶಿವಮೊಗ್ಗ: ಸೆಪ್ಟೆಂಬರ್ 17ರಂದು ಪ್ರಧಾನಿ ನರೇಂದ್ರ ಮೋದಿ ಜನ್ಮದಿನ ಹಿನ್ನೆಲೆಯಲ್ಲಿ ಅಂದಿನಿಂದ ಅಕ್ಟೋಬರ್ 2 ಗಾಂಧೀಜಿ ಜಯಂತಿವರೆಗೆ ಸೇವಾ ಪಾಕ್ಷಿಕ ಕಾರ್ಯಕ್ರಮ ಆಯೋಜನೆ ಮಾಡಲು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಸೂಚನೆ ನೀಡಿದ್ದಾರೆ ಎಂದು ಸಂಸದ ಬಿವೈ ರಾಘವೇಂದ್ರ ಹೇಳಿದ್ದಾರೆ.
BIGG NEWS: ವಿಧಾನಸಭೆ ಕಲಾಪದಲ್ಲಿ ಸದಸ್ಯರು, ಸಚಿವರು ಗೈರು; ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅಸಮಾಧಾನ
ನಗರದಲ್ಲಿ ಮಾತನಾಡಿದ ಅವರು, ಈಗಾಗಲೇ ಪ್ರಧಾನಿ ಮೋದಿ ಜನ್ಮ ದಿನ್ಕಕೆ ಬಿಜೆಪಿ ಭರ್ಜರಿ ಸಿದ್ದತೆ ನಡೆಸಿದೆ. ರಾಷ್ಟ್ರಾದ್ಯಂತ 15 ದಿನಗಳ ಕಾಲ ಸೇವಾ ಚಟುವಟಿಕೆಗಳು ನಡೆಯಲಿದೆ. ಈ ವೇಳೆ ಕೇಂದ್ರ ಸರ್ಕಾರ ಸಾಧನೆ ಕುರಿತು ಪ್ರದರ್ಶಿನಿ ಆಯೋಜನೆ, ಕರಪತ್ರ ವಿತರಣೆ ನಡೆಯಲಿದೆ. ರಕ್ತದಾನ ಶಿಬಿರ, ಆರೋಗ್ಯ ತಪಾಸಣೆ ಆಯೋಜನೆ ಮಾಡಲಾಗಿದೆ. ಪ್ರತಿ ಬೂತ್ ನಲ್ಲಿ ವನಮಹೋತ್ಸವ, ಸ್ವಚ್ಛತಾ ಅಭಿಯಾನ ಸೇರಿದಂತೆ 2030ರೊಳಗೆ ಕ್ಷಯ ನಿರ್ಮೂಲನೆ ಗುರಿ ಹಿನ್ನೆಲೆ ಕ್ಷಯರೋಗಿಗಳ ಪಟ್ಟಿಗೆ ರಾಷ್ಟ್ರಾಧ್ಯಕ್ಷರು ಸೂಚನೆ ನೀಡಿದ್ದಾರೆ ಎಂದರು.
BIGG NEWS: ವಿಧಾನಸಭೆ ಕಲಾಪದಲ್ಲಿ ಸದಸ್ಯರು, ಸಚಿವರು ಗೈರು; ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅಸಮಾಧಾನ
ಇನ್ನು ಅಮೃತ ಸರೋವರ ಯೋಜನೆಯಡಿ ಪ್ರತಿ ತಾಲೂಕಲ್ಲಿ ಕೆರೆ ಅಭಿವೃದ್ಧಿ, ಜಲವೇ ಜೀವನ ಮಂತ್ರದಡಿ ಮಳೆ ನೀರಿನ ಶೇಖರಣೆ ಕುರಿತು ಜನಜಾಗೃತಿ ಮೂಡಿಸಲು ಜೆ.ಪಿ.ನಡ್ಡಾ ಸೂಚನೆ ನೀಡಿದ್ದಾರೆ.ಸೆ.25ರಂದು ಪಂಡಿತ್ ದೀನದಯಾಳ ಜನ್ಮದಿನವನ್ನು ಬೂತ್ ಮಟ್ಟದಲ್ಲಿ ಆಚರಣೆ ಮಾಡಬೇಕು ಎಂದು ತಿಳಿಸಿದ್ದಾರೆ.