ನವದೆಹಲಿ: ಇಂದು ರಾತ್ರಿ 10 ಗಂಟೆಯೊಳಗೆ ಸಿಯುಇಟಿ-ಯುಜಿ ಫಲಿತಾಂಶ ಪ್ರಕಟವಾಗಲಿದೆಯಂತ ಯುಜಿಸಿ ಅಧ್ಯಕ್ಷ ಜಗದೀಶ್ ಕುಮಾರ್ ಹೇಳಿದ್ದಾರೆ.
ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್ಟಿಎ) ಇಂದು, ಸೆಪ್ಟೆಂಬರ್ 15 ರಂದು ( ಇಂದು ರಾತ್ರಿ 10 ) ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆ (ಸಿಯುಇಟಿ) ಯುಜಿ 2022 ಫಲಿತಾಂಶಗಳನ್ನು ಘೋಷಿಸಲಿದೆ. ಘೋಷಿಸಿದಾಗ, ವಿದ್ಯಾರ್ಥಿಗಳು cuet.samarth.ac.in ತಮ್ಮ ಅಂಕಗಳನ್ನು ಪರಿಶೀಲಿಸಬಹುದು.
CUET UG ಎಕ್ಸಾಂ ಜುಲೈ-ಆಗಸ್ಟ್ ನಲ್ಲಿ 6 ಹಂತಗಳಲ್ಲಿ ನಡೆಸಲಾಯಿತು. ಭಾರತದ 259 ನಗರಗಳು ಮತ್ತು ಭಾರತದ ಹೊರಗಿನ 10 ನಗರಗಳ 489 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಿತು. ಒಟ್ಟು 14,90,000 ಅಭ್ಯರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ.
ನವದೆಹಲಿ: ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆ (ಸಿಯುಇಟಿ-ಯುಜಿ) ಫಲಿತಾಂಶಗಳನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ಟಿಎ) ಇಂದು ರಾತ್ರಿ 10:00 ಗಂಟೆಯ ವೇಳೆಗೆ ಪ್ರಕಟಿಸಲಿದೆ ಎಂದು ಯುಜಿಸಿ ಅಧ್ಯಕ್ಷ ಎಂ ಜಗದೀಶ್ ಕುಮಾರ್ ಅವರು ಹೇಳಿದ್ದಾರೆ.