ನವ ದೆಹಲಿ: ʻಎಂಜಿನಿಯರ್ ದಿನಾಚರಣೆ ʼ ಅಂಗವಾಗಿ ದೇಶದ ಜನತೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶುಭಾಶಯ ಕೋರಿದರು. ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡುತ್ತಿರುವ ನುರಿತ ಮತ್ತು ಪ್ರತಿಭಾವಂತ ಎಂಜಿನಿಯರ್ಗಳ ಬಗ್ಗೆ ದೇಶಕ್ಕೆ ಹೆಮ್ಮೆಯಿದೆ ಎಂದು ಅವರು ಹೇಳಿದರು.
Greetings to all engineers on #EngineersDay. Our nation is blessed to have a skilled and talented pool of engineers who are contributing to nation building. Our Government is working to enhance infrastructure for studying engineering including building more engineering colleges.
— Narendra Modi (@narendramodi) September 15, 2022
ಎಲ್ಲ ಎಂಜಿನಿಯರ್ಗಳಿಗೆ ಎಂಜಿನಿಯರ್ಗಳ ದಿನದ ಶುಭಾಶಯಗಳು. ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡುತ್ತಿರುವ ನುರಿತ ಮತ್ತು ಪ್ರತಿಭಾನ್ವಿತ ಎಂಜಿನಿಯರ್ಗಳ ಸಮೂಹವನ್ನು ಹೊಂದಿರುವುದಕ್ಕಾಗಿ ರಾಷ್ಟ್ರವು ಹೆಮ್ಮೆಪಡುತ್ತದೆ. ಹೆಚ್ಚಿನ ಎಂಜಿನಿಯರಿಂಗ್ ಕಾಲೇಜುಗಳನ್ನು ಸ್ಥಾಪಿಸುವುದು ಸೇರಿದಂತೆ ಎಂಜಿನಿಯರಿಂಗ್ ಅಧ್ಯಯನಕ್ಕಾಗಿ ಮೂಲಸೌಕರ್ಯಗಳನ್ನು ಹೆಚ್ಚಿಸಲು ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
On #EngineersDay, we remember the pathbreaking contribution of Sir M. Visvesvaraya. May he keep inspiring generations of future engineers to distinguish themselves. I am also sharing a snippet from one of the previous #MannKiBaat programmes where I talked about this subject. pic.twitter.com/2Vj3bHxVQS
— Narendra Modi (@narendramodi) September 15, 2022
ಎಂಜಿನಿಯರ್ಗಳ ದಿನದಂದು, ನಾವು ಸರ್ ಎಂ. ವಿಶ್ವೇಶ್ವರಯ್ಯನವರ ಅದ್ಭುತ ಕೊಡುಗೆಯನ್ನು ಸ್ಮರಿಸುತ್ತೇವೆ. ಅವರು ಭವಿಷ್ಯದ ಎಂಜಿನಿಯರ್ಗಳ ಪೀಳಿಗೆಗೆ ತಮ್ಮನ್ನು ತಾವು ಗುರುತಿಸಿಕೊಳ್ಳಲು ಸ್ಫೂರ್ತಿ ನೀಡಲಿ ಎಂದು ಪ್ರಧಾನಿ ತಿಳಿಸಿದ್ದಾರೆ.
ಎಂಜಿನಿಯರ್ ಹಾಗೂ ರಾಜನೀತಿಜ್ಞ ಸರ್ ಎಂ. ವಿಶ್ವೇಶ್ವರಯ್ಯನವರ ಜನ್ಮದಿನದ ಅಂಗವಾಗಿ ಎಂಜಿನಿಯರ್ ದಿನವನ್ನು ಆಚರಿಸಲಾಗುತ್ತದೆ. ಹಿಂದಿನ ಮೈಸೂರು ಸಾಮ್ರಾಜ್ಯದಲ್ಲಿ ದಿವಾನರಾಗಿದ್ದ ಇವರು ತಮ್ಮ ಅದ್ಭುತ ಎಂಜಿನಿಯರಿಂಗ್ ಕೆಲಸಗಳ ಮೂಲಕ ಜಗದ್ವಿಖ್ಯಾತರಾಗಿದ್ದಾರೆ.