ನವದೆಹಲಿ: ಸುಕೇಶ್ ಚಂದ್ರಶೇಖರ್ ಪ್ರಕರಣವು ಮತ್ತೊಂದು ಟ್ವಿಸ್ಟ್ ನತ್ತ ಸಾಗುತ್ತಿದೆ, ಕರ್ನಾಟಕದ ಬೆಂಗಳೂರು ಮೂಲದ ಸುಕೇಶ್ ಚಂದ್ರಶೇಖರ್ ಪ್ರಸ್ತುತ ದೆಹಲಿ ಜೈಲಿನಲ್ಲಿದ್ದು ಸದ್ಯ ಆತನ ವಿರುದ್ಧ 10 ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಲಾಗಿದೆ. ಸುಕೇಶ್ ಚಂದ್ರಶೇಖರ್ ಅದಿತಿ ಸಿಂಗ್ ರಿಂದ ರೋಹಿಣಿ ಜೈಲಿನಲ್ಲಿದ್ದಾಗ 200 ಕೋಟಿ ರೂ.ಗಳ ಸುಲಿಗೆ ದಂಧೆಯನ್ನು ನಡೆಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ತಿಹಾರ್ ಜೈಲಿನಲ್ಲಿ ಸುಕೇಶ್ ಭೇಟಿಯಾಗಿ ಹಣ, ದುಬಾರಿ ಉಡುಗೊರೆಯನ್ನು ನಾಲ್ವರು ನಟಿಯರು ಪಡೆದಿದ್ದಾರೆ ಎನ್ನಲಾಗಿದೆ.