ಬೆಂಗಳೂರು: ವಿಧಾನ ಪರಿಷತ್ನಲ್ಲಿಂದು ಮತಾಂತರ ನಿಷೇಧ ವಿಧೇಯಕ ಮಂಡನೆಯಾಗಲಿದ್ದು, ಪ್ರಶ್ನೋತ್ತರ ಕಲಾಪದ ಬಳಿಕ ಸದನದಲ್ಲಿ ಮತಾಂತರ ನಿಷೇಧ ವಿಧೇಯಕ ಮಂಡನೆಯಾಗಲಿದೆ ಎನ್ನಲಾಗಿದೆ. ಇನ್ನೂ ಇಂದು ಮಂಡನೆಯಾಗಲಿರುವ ಮಸೂದೆಗೆ ಬಿಜೆಪಿ ನಾಯಕರುಗಳು ಸದನದಲ್ಲಿ ಯಾವೆಲ್ಲ ರೀತಿಯಲ್ಲಿ ನಮ್ಮ ವಿಧೆಯಕವನ್ನು ಸಮರ್ಥನೆ ಮಡಿಕೊಳ್ಳಬೇಕು ಎನ್ನುವುದಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಎಲ್ಲಾ ಪಾಠವನ್ನು ಹಿರಿಯ ನಾಯಕರು ಮಾಡಿದ್ದಾರೆ ಎನ್ನಲಾಗಿದೆ.
ಇನ್ನೂ ಇಂದು ಸದನದಲ್ಲಿ ಮತಾಂತರ ಮಸೂದೆ ಮಂಡನೆಯಾಗಲಿದೆ ಎನ್ನುವ ಬೆನ್ನಲೇ ರಾತ್ರಿ ಚಾಮರಾಜಪೇಟೆಯ ಕೇಶವಾಕೃಪಾದಲ್ಲಿ ಸಭೆ ನಡೆಸಿ ಮಹತ್ವ ಚರ್ಚೆ ನಡೆಸಲಾಗಿದೆ ಎನ್ನಲಾಗಿದೆ. ಪ್ರಸ್ತುತ ವಿಧಾನ ಪರಿಷತ್ನಲ್ಲಿ ಬಿಜೆಪಿಯ 41 ಸದಸ್ಯರಿದ್ದಾರೆ. ಕಾಂಗ್ರೆಸ್ನ 26 ಮತ್ತು ಜೆಡಿಎಸ್ನ 8 ಸದಸ್ಯರಿದ್ದಾರೆ ಹೀಗಾಗಿ ಈ ಬಾರಿ ಪರಿಶತ್ನಲ್ಲಿ ಮಸೂದೆ ಪಾಸಾಗಲಿದೆ ಎನ್ನಲಾಗಿದೆ. ಮತಾಂತರ ನಿಷೇಧ ವಿಧೇಯಕಕ್ಕೆ ಈಗಾಗಲೇ ವಿಧಾನಸಭೆಯಲ್ಲಿ ಅನುಮೋದನೆ ದೊರೆತಿದೆ.