ಕರ್ನಾಟಕ ರಾಜ್ಯದಲ್ಲಿ ದೇವಾಲಯಗಳ ಜಮೀನುಗಳನ್ನು ಒತ್ತುವರಿ ಮಾಡಿಕೊಂಡಿರುವವರ ವಿರುದ್ದ ನಿರ್ಧಾಕ್ಷಿಣ್ಯ ಕರಮ ಜರುಗಿಸಲಾಗುವುದು ಎಂದು ಮುಜರಾಯಿ, ಹಜ್ ಹಾಗೂ ವಕ್ಫ್ ಸಚಿವೆ ಶಶಿಕಲಾ ಅ. ಜೊಲ್ಲೆ ಅವರು ತಿಳಿಸಿದರು.
ಇಂದು ವಿಧಾನ ಪರಿಷತ್ತಿನ ಕಲಾಪದ ವೇಳೆ ಪರಿಷತ್ ಸದಸ್ಯರಾದ ಪಿ.ಆರ್. ರಮೇಶ್ ಅವರ ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸದ ವಿಷಯಕ್ಕೆ ಉತ್ತರಿಸಿದ ಸಚಿವರು, ಬೆಂಗಳೂರು ನಗರ, ತಿಗಳರಪೇಟೆಯಲ್ಲಿರುವ ಶ್ರೀ ಧರ್ಮರಾಯ ಸ್ವಾಮಿ ದೇವಾಲಯದ ಜಮೀನಿಗೆ ಸಂಬಂಧಿಸಿದಂತೆ ಬೆಂಗಳೂರು ನಗರ ನೀಲಸಂದ್ರ ಗ್ರಾಮದ ಸರ್ವೆ ನಂಬರ್ 79 ರಲ್ಲಿ 15 ಎಕರೆ 12 ಗುಂಟೆ ಹಾಗೂ ಬೆಂಗಳೂರು ದಕ್ಷಿಣ ತಾಲ್ಲೂಕು, ಬೇಗೂರು ಹೋಬಳಿ, ಹೊಂಗಸಂದ್ರ ಗ್ರಾಮದ ಸರ್ವೆ ನಂ 33 ರಲ್ಲಿ 16 ಎಕರೆ 25 ಗುಂಟೆ ಜಮೀನಿನ ಹೊತ್ತುವರಿ ಬಗ್ಗೆ ಹಾಗೂ ಸ್ವಾಧೀನಕ್ಕೆ ಪಡೆದಿರುವ ಬಗ್ಗೆ ನೀಲಸಂದ್ರ ಗ್ರಾಮದ ಸರ್ವೆ ಸಂಖ್ಯೆ 79 ರಲ್ಲಿ 15 ಎಕರೆ 12 ಗುಂಟೆ ಜಮೀನು ಗ್ರಾಮ ನಕಾಶೆಯಂತೆ ಸರ್ಕಾರಿ ಕೆರೆ ಅಂಗಳವಾಗಿದ್ದು, ಸ್ಕೆಲ್ನಂಬರ್ ಆಗಿದ್ದು, ಅಕಾರ್ ಬಂದಿನಂತೆ ಪೂರಾ ವಿಸ್ತೀರ್ಣವನ್ನು ಬಿ ಖರಾಬಿನಲ್ಲಿ ದಾಖಲಾಗಿರುತ್ತದೆ. ಸರ್ವ ಅಳತೆಯಂತ ರಸ್ತೆ 1-10 ಎಕರೆ ಗುಂಟೆ, ಕಟ್ಟಡಗಳು 3-37 ಎಕರೆ ಗುಂಟೆ, ಕಾಲುವ 0.10 ಎಕರೆ ಖಾಲಿ ವುದೇಶ 7-39 ಎಕರೆ ಗುಂಟೆ ಸೇರಿ ಒಟ್ಟು 13-16 ಎಕರೆ-ಗುಂಟೆ ಇರುವುದಾಗಿ ಸರ್ವೆ ಇಲಾಖೆ ಹಾಗೂ ಧಾರ್ಮಿಕ ದತ್ತಿ ಇಲಾಖೆ ದಿನಾಂಕ: 07,02.2015ರಂದು ಜಂಟಿಯಾಗಿ ಅಳತೆ ಕಾರ್ಯ ನಡೆಸಿ ನಕ್ಷೆ ಹಾಗೂ ವರದಿಯಂತೆ ತಿಳಿದುಬಂದಿದೆ. ಆದರೆ ಸದರಿ ಜಮೀನು, ಇನಾಂ ರದ್ದಿಯಾತಿ ಎಂಡರ್ಸ್ ಮೆಂಟ್ ಮುಖಾಂತರ ದಿನಾಂಕ:06.02.1965ರಲ್ಲಿ ಶ್ರೀ ಧರ್ಮರಾಯ ಸ್ವಾಮಿಗೆ ಮಂಜೂರಾಗಿರುತ್ತದೆ. ಆದ್ದರಿಂದ ಸ.ನಂ 79ರಲ್ಲಿ 15-12ಎಕರೆ ಗುಂಟೆ ಜಮೀನು ದೇವಾಲಯಕ್ಕೆ ಸೇರಿದ ಸ್ವತ್ತಾಗಿರುತ್ತದೆ.
ಪ್ರಸ್ತಾಪಿತ ಜಮೀನಿನಲ್ಲಿ 229 ಜನ ಅನಧಿಕೃತದಾರರು ದೇವಾಲಯದ ಜಮೀನನ್ನು ಅತಿಕ್ರಮಣ ಮಾಡಿ ಮನೆಗಳನ್ನು ನಿರ್ಮಿಸಿ ಕೊಂಡಿರುತ್ತಾರೆ. ಸದರಿ ಅತಿಕ್ರಮಣ ಮಾಡಿದ ಒತ್ತುವರಿದಾರರ ವಿರುದ್ಧ ಸರ್ಕಾರವು ಈಗಾಗಲೇ ಕ್ರಮ ಕೈಗೊಂಡಿದೆ.13 ಜನ ಒತ್ತುವರಿದಾರರ ವಿರುದ್ಧ ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ, ಮೊಕದ್ದಮೆಯನ್ನು, ದಾಖಲು ಮಾಡಲಾಗಿರುತ್ತದೆ. ಹಾಗೂ 5 ಜನ ಅನಧಿಕೃತ ಒತ್ತುವರಿದಾರರ ವಿರುದ್ಧ ಮಾನ, ಕರ್ನಾಟಕ ಭೂ ಕಬಳಿಕೆ ನಿಷೇದ ವಿಶೇಷ ನ್ಯಾಯಾಲಯದಲ್ಲಿ ಪ್ರಕರಣಗಳನ್ನು ದಾಖಲು ಮಾಡಲಾಗಿದ್ದು ಸದರಿ ಪ್ರಕರಣಗಳ ವಿಚಾರಣೆ ದಿನಾಂಕ: 19-09-2022ರಂದು ನಿಗದಿಯಾಗಿರುತ್ತದೆ.
ದೇವಾಲಯದ 0-04 ಗುಂಟೆ ವಿಸ್ತೀರ್ಣದ ಜಾಗದಲ್ಲಿ, ಸಂಪಂಗಿರಾಮ ಬಿನ್ ಸಂಪಂಗಿ ಹಾಗೂ ಇತರರು, ಸಿಟಿ ಸಿವಿಲ್ ನ್ಯಾಯಾಲಯ, ಬೆಂಗಳೂರು ಇಲ್ಲಿ ಮೂಲ ದಾವೆ ಸಂ 9311/2004ನ್ನು ದಾಖಲು ಮಾಡಿ ತೆರವುಗೊಳಿಸದಂತೆ ಮೊರೆಹೋಗಿರುತ್ತಾರೆ. ಸದರಿ ಪ್ರಕರಣವು ದಿನಾಂಕ:13-10 2022ಕ್ಕೆ ಸಾಕ್ಷಿಗಳ ವಿಚಾರಣೆಗೆ ನಿಗದಿಯಾಗಿರುತ್ತದೆ. ಎಕರೆ 20 ಗುಂಟೆ ಜಮೀನಿನ ಹಕ್ಕುದಾರಿಕೆಯನ್ನು ಕೋರಿ ಮುನಿಯಪ್ಪ ರವರ ವಾರಸುದಾರರಾದ ಎಂ ಮುನಿಸ್ವಾಮಿ ಹಾಗೂ ಇತರರು ಬೆಂಗಳೂರಿನ 8ನೇ ಅಡಿಷನಲ್ ಸಿಟಿ ಸಿವಿಲ್ ಜಡ್ಜ್, ನ್ಯಾಯಾಲಯದ ಮೂಲ ದಾನ ಸಂಖ್ಯೆ 6246/1997 ದಾಖಲಿಸಿದ್ದು, ಸಿವಿಲ್ ನ್ಯಾಯಾಲಯವು ದಿನಾಂಕ:02-03-2005 ರಂದು ಅರ್ಜಿದಾರರ ಅರ್ಜಿಯನ್ನು ವಜಾಗೊಳಿಸಿದೆ. ಸದರಿ ತೀರ್ಪಿನ ವಿರುದ್ಧ ವಾದಿಯು ಕರ್ನಾಟಕ ಉಚ್ಛನ್ಯಾಯಾಲಯದಲ್ಲಿ ಆರ್.ಎಫ್.ಎ. ಸಂಖ್ಯೆ. 1702/2006ನ್ನು ದಾಖಲಿಸಿ ತಾತ್ಕಾಲಿಕ ತಡೆಯಾಜ್ಞೆಯನ್ನು ಕೋರಿದ್ದು, ನ್ಯಾಯಾಲಯವು ದಿನಾಂಕ 26-08-2015 ರಂದು ಅರ್ಜಿದಾರರ ಅರ್ಜಿಯನ್ನು ವಜಾಗೊಳಿಸಿದೆ.
ಅರ್ಜಿದಾರರು ಮಾನ್ಯ ಉಚ್ಚ ನ್ಯಾಯಾಲಯದ ತೀರ್ಪಿನ ವಿರುದ್ಧ ಸರ್ವೋಚ್ಛ ನ್ಯಾಯಾಲಯದ ಎಸ್.ಎಲ್.ಪಿ ಸಂಖ್ಯೆ 34901/2015 ದಾಖಲಿಸಿದ್ದು, ಸರ್ವೋಚ್ಚ ನ್ಯಾಯಾಲಯವು ದಿನಾಂಕ: 06-07-2017 ರಂದು ಅರ್ಜಿದಾರರ ಅರ್ಜಿಯನ್ನು ವಜಾಗೊಳಿಸಿದೆ. ಅರ್ಜಿದಾರರು ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ಆರ್.ಎನ್.ಎ ಸಂಖ್ಯೆ 1702 / 2006ರ ಪ್ರಕರಣವು ಇತ್ಯರ್ಥಗೊಳಿಸಲು ಬಾಕಿ ಇದ್ದು, ಪ್ರಕರಣವು ದಿನಾಂಕ 13-09-2022 ರಂದು ವಿಚಾರಣೆಗೆ ನಿಗದಿಯಾಗಿರುತ್ತದೆ.
ಪ್ರಸ್ತಾಪಿತ ಸರ್ವೆನಂಬರ್ ನಲ್ಲಿರುವ ಅನಧಿಕೃತದಾರರನ್ನು ತೆರವುಗೊಳಿಸಲು ತೆರವು ಕಾರ್ಯಾಚರಣೆ ಮಾಡಿ ತೆರವುಗೊಳಿಸಲಾಗಿರುವ 9-00 ಎಕರೆ ಜಮೀನಿಗೆ, ಕಾಂಪೌಂಡ್ ನಿರ್ಮಿಸಲು 80.00 ಲಕ್ಷಗಳ ಅಂದಾಜುಪಟ್ಟಿ ಮತ್ತು ನಕ್ಷೆಗೆ ಆಡಳಿತಾತ್ಮಕ ಮಂಜೂರಾತಿಯನ್ನು ನೀಡಿ ಕಾಮಗಾರಿಯನ್ನು ಕೆ.ಆರ್.ಐ.ಡಿ.ಎಲ್ ರವರಿಗೆ ವಹಿಸಲಾಗಿರುತ್ತದೆ. ಸದರಿ ಕಾಮಗಾರಿಯ 1/3 ಭಾಗದ ಮೊದಲನೇ ಕಂತಿನ ಬಾಬು ರೂ 26.00 ಲಕ್ಷಗಳನ್ನು ಜಿಲ್ಲಾಧಿಕಾರಿಗಳು ಬೆಂಗಳೂರು ನಗರ ಜಿಲ್ಲೆ ರವರು ದಿನಾಂಕ 15.04.2017ರಂದು ಬಿಡುಗಡೆ ಮಾಡಿರುತ್ತಾರೆ.
ಸದರಿ ಕಾಮಗಾರಿಯ ಜಿಲ್ಲಾಧಿಕಾರಿ, ಬೆಂಗಳೂರು ನಗರ ಇವರ ಅಧಿಕೃತ ಜ್ಞಾಪನಾ ಸಂಖ್ಯೆ ಡಿ.ವಿ.ಎಸ್ (ಎ) ಸಿ.ಆರ್.10/1989-90 ದಿನಾಂಕ: 12-11-2020ನ್ನು ಪ್ರಶ್ನಿಸಿ ತಾಯಪ್ಪ ಎಂಬುವವರು ಮಾನ್ಯ ಉಚ್ಛ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಂಖ್ಯೆ 13506/2020 ದಾಖಲಿಸಿದ್ದು. ಮಾನ್ಯ ಉಚ್ಛ ನ್ಯಾಯಾಲಯವು ಯಥಾ ಸ್ಥಿತಿಯನ್ನು ಕಾಪಾಡುವಂತೆ ಮಧ್ಯಂತರ ತೀರ್ಪು ನೀಡಿದ್ದು, ಸದರಿ ಮಧ್ಯಂತರ ತೀರ್ಪನ್ನು ತೆರವುಗೊಳಿಸಲು ಸರ್ಕಾರದ ಪರವಾಗಿ ಲಿಖಿತ ಆಕ್ಷೇಪಣೆಗಳನ್ನು ಸಲ್ಲಿಸಲಾಗಿದ್ದು, ಮಾನ್ಯ ಉಚ್ಚನ್ಯಾಯಾಲಯವು ಪ್ರಕರಣವನ್ನು ಆದೇಶಕ್ಕೆ ಕಾಯ್ದಿರಿಸಿರುತ್ತದೆ.
ಸದರಿ ಪ್ರಶ್ನಿತ ಸೃತಿಗೆ ಸಂಬಂಧಿಸಿದಂತೆ ಯಾವುದೇ ಖಾತೆಯನ್ನು ಮಾಡದಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಬೆಂಗಳೂರು ಇವರಿಗೆ ಕೋರಿದ್ದು, ಪಾಲಿಕೆಯು ಪಶ್ಚಿತ ಸ್ವತ್ತಿಗೆ ಯಾವುದೇ ಖಾತೆ ಮಾಡುವುದಿಲ್ಲವೆಂದು ತಿಳಿಸಿರುತ್ತಾರೆ ಹಾಗೂ ಅನಧಿಕೃತವಾಗಿ ನಿರ್ಮಾಣ ಮಾಡಿರುವ ಮನೆ ಮತ್ತು ಮಳಿಗೆಗಳಿಗೆ ಹಾಗೂ ನೀರು ಸರಬರಾಜು ಮತ್ತು ಒಳಚರಂಡಿ ವ್ಯವಸ್ಥೆ ಸಂಪರ್ಕ ನೀಡುವ ಬಗ್ಗೆ ಸಂಬಂಧವು ಇಲಾಖೆಗೆ ಅನುಮತಿ ಪಡೆಯದ ಕ್ರಮ ವಹಿಸಬಾರದೆಂದು ತಿಳಿಸಲಾಗಿರುತ್ತದೆ.
ಹೊಂಗಸಂದ್ರ ಗ್ರಾಮದ ಸರ್ವೆ ನಂಬರ್ 33 ರ ಜಮೀನು – ವಿಶೇಷ ಜಿಲ್ಲಾಧಿಕಾರಿ ಬೆಂಗಳೂರು ಜಿಲ್ಲೆ ಇವರು ಆದೇಶ ಸಂಖ್ಯೆ: ಐಎನ್ಎ 182/1997-98 ದಿನಾಂಕ: 21-04-2021 ರಲ್ಲಿ ಹೊಂಗಸಂದ್ರ ಗ್ರಾಮದ ಸರ್ವೆ ನಂಬರ್ 33 ರಲ್ಲಿ 16-29 ಎಕರೆ / ಗುಂಟೆ ಜಮೀನಿನ ಅಧಿಭೋಗದಾರಿಕೆಯ ಹಕ್ಕನ್ನು ಕೆ.ಪಿ. ಗೋವಿಂದರೆಡ್ಡಿ, ಹಾಗೂ ಇತರರಿಗೆ ಮಂಜೂರು ಮಾಡಿರುತ್ತಾರೆ, ಸದರಿ ಆದೇಶವನ್ನು ಇಲಾಖೆಯು ಪ್ರಶ್ನಿಸಿ ಕರ್ನಾಟಕ ಮೇಲ್ಮನವಿ ಪ್ರಾಧಿಕಾರದಲ್ಲಿ ಅಪೀಲು ಸಂಖ್ಯೆ 572/2004ನ್ನು ದಾಖಲಿಸಿದ್ದರು. ಸದರಿ ಪ್ರಕರಣವನ್ನು ಮೇಲ್ಮನವಿ ಪ್ರಾಧಿಕಾರವು ದಿನಾಂಕ :28 01-2014 ರಂದು ವಜಾಗೊಳಿಸಿರುತ್ತಾರೆ.
ಕರ್ನಾಟಕ ಮೇಲ್ಮನವಿ ಪ್ರಾಧಿಕಾರದ ದಿನಾಂಕ: 28-04-2014ರ ಆದೇಶವನ್ನು ಪ್ರಶ್ನಿಸಿ ಶ್ರೀ ಧರ್ಮರಾಯ ಸ್ವಾಮಿ ದೇವಾಲಯನ್ನು ಪ್ರತಿನಿಧಿಸಿ ಸಹಾಯಕ ಆಯುಕ್ತರು, ನಗರಸಭಾ ವಲಯ, ಬೆಂಗಳೂರು ಇವರು ಮಾನ್ಯ ಉಚ್ಛನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಂಖ್ಯೆ 28866/2014ನ್ನು ದಾಖಲಿಸಿದ್ದು, ಸದರಿ ಪ್ರಕರಣವು ಮಾನ್ಯ ಉಚ್ಚ ನ್ಯಾಯಾಲಯದಲ್ಲಿ, ಇತ್ಯರ್ಥಕ್ಕೆ, ಬಾಕಿ ಇದ್ದು ಸರ್ಕಾರವು ಕಟ್ಟುನಿಟ್ಟಿನ ಕ್ರಮವನ್ನು ಕೈಗೊಳ್ಳಲಾಗಿದೆ. ಪ್ರಕರಣವು ನ್ಯಾಯಾಲಯದಲ್ಲಿ ಅರ್ಜಿದಾರರು ಪ್ರಶ್ನಿಸಿದ್ದರಿಂದ, ನ್ಯಾಯಾಲಯದ ತೀರ್ಪಿನನ್ವಯ ಕ್ರಮವಹಿಸಲಾಗಿದೆ.
ಪುಸ್ತಾಪಿತ ದೇವಾಲಯಕ್ಕೆ ಸೇರಿದ ನೀಲಸಂದ್ರ ಗ್ರಾಮದ ಸರ್ವೆ ನಂ 79 ರಲ್ಲಿನ 15-12 ಎಕರೆ/ಗುಂಟೆ ಜಮೀನಿಗೆ ಸಂಬಂಧಿಸಿದಂತೆ ಪಾಲಿಕೆ ವತಿಯಿಂದ ಪ್ರಶ್ನಿತ ಸ್ವತ್ತಿಗೆ ಮುಂದೆ ಯಾವುದೇ ಖಾತೆಯನ್ನು ಮಾಡದಂತೆ ಬೃಹತ್ ಬೆಂಗಳೂರು ಮಹಾಗರ ಪಾಲಿಕೆಯ ಸಹಾಯಕ ಕಂದಾಯ ಅಧಿಕಾರಿ, (ಶಾಂತಿನಗರ) ಉಪವಿಭಾಗ, ಬೆಂಗಳೂರು ಇವರಿಗೆ ತಿಳಿಸಲಾಗಿದ್ದು, ಪಾಲಿಕೆ ವತಿಯಿಂದ ಪ್ರಶ್ನಿತ ಸತ್ತಿಗೆ ಸಂಬಂದಿಸಿದದಂತೆ ಇನ್ನು ಮುಂದೆ ಯಾವುದೇ ಖಾತೆ ಮಾಡುವುದಿಲ್ಲವೆಂದು ಸಹಾಯಕ ಕಂದಾಯ ಅಧಿಕಾರಿಯವರು ತಿಳಿಸಿರುತ್ತಾರೆ.
ಸಹಾಯಕ, ನಿರ್ವಾಹಕ ಅಭಿಯಂತರರು, ಬೆಸ್ಕಾಂ, ಆಸ್ಟಿನ್ ಟೌನ್ ರವರಿಗೆ ಪತ್ರ ಬರೆದು ಪ್ರಸ್ತಾಪಿತ ಸರ್ವೆ ನಂಬರ್ ನಲ್ಲಿ ಅನಧಿಕೃತವಾಗಿ ನಿರ್ಮಾಣ ಮಾಡಿರುವ ಮನೆ ಮತ್ತು ಮಳಿಗೆಗಳಿಗೆ ತಮ್ಮ ಸಂಸ್ಥೆಯಿಂದ ನೀರು ಸರಬರಾಜು ಮತ್ತು ಒಳಚರಂಡಿ ವ್ಯವಸ್ಥೆ ಸಂವರ್ಕ ನೀಡಿರುವ ಮಾಹಿತಿಗಳನ್ನು ನೀಡಲು ಹಾಗೂ ಇನ್ನು ಮುಂದೆ ಇಲಾಖಾ ಅನುಮತಿ ಪಡೆಯದೇ ಯಾವುದೇ ಮನೆ ಮತ್ತು ಮಳಿಗೆಗಳಿಗೆ ನೀರು ಸರಬರಾಜು ಮತ್ತು ಒಳಚರಂಡಿಯ ವ್ಯವಸ್ಥೆಯ ಸಂಪರ್ಕ ನೀಡದಂತೆ ತಿಳಿಸಲಾಗಿರುತ್ತದೆ.
ಅನಧಿಕೃತದಾರರ ಹೆಸರಿಗೆ ಖಾತಾಗಳನ್ನು ಮಾಡದಂತೆ ಬಿ.ಬಿ.ಎಂ.ಪಿ, ಆಯುಕ್ತರಿಗೆ ಹಾಗೂ ವಿದ್ಯುತ್ ಸರಬರಾಜು ಮತ್ತು ಕುಡಿಯುವ ನೀರು ಮತ್ತು ಒಳಚರಂಡಿ ಸೌಲಭ್ಯ ಕಲ್ಪಿಸದಂತೆ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಲಾಗಿರುತ್ತದೆ.
ಪ್ರಸ್ತಾವಿತ ಜಾಗದಲ್ಲಿ ಅನಧಿಕೃತದಾರರು ಮನೆಗಳನ್ನು ನಿರ್ಮಾಣ ಮಾಡಿದ್ದು, ಮನೆಗಳನ್ನು ನಿರ್ಮಾಣ ಮಾಡುವ ಮುನ್ನ ನಿರ್ಮಾಣ ಕಾಮಗಾರಿ ಕೈಗೊಳ್ಳಲು ಅನುಮತಿ ಕೋರಿ ತಮಗೆ ಸಲ್ಲಿಸಲಾದ ಎಲ್ಲಾ ಅಗತ್ಯ ದಾಖಲೆಗಳನ್ನು ಸಲ್ಲಿಸುವಂತೆ ಅಧಿಕಾರಿ, ಬೆಂಗಳೂರು ರವರಿಗೆ ಪತ್ರ ಬರೆಯಲಾಗಿದೆ
ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ಹಾಗೂ ನೀರು ಸರಬರಾಜು ಮತ್ತು ಒಳಚರಂಡಿ ಸಂಪರ್ಕವನ್ನು ಪಡೆಯುವ ಮುನ್ನ ತಮ್ಮ ಅಧೀನ ಕಛೇರಿಗಳಿಗೆ ಸಲ್ಲಿಸಿರುವ ಅರ್ಜಿ ಹಾಗೂ ಅರ್ಜಿಯೊಂದಿಗೆ ಒದಗಿಸಿರುವ (ಕರಾರು ಪತ್ರ ಕ್ರಯ ಪತ್ರ ಹಕ್ಕು ವರ್ಗಾವಣೆ ಪತ್ರ ಜಮೀನಿನ ಹಕ್ಕಿಗೆ ಸಂಬಂಧಿಸಿರುವ ದಾಖಲೆಗಳು) ಇತರ ದಾಖಲೆಗಳು) ದಾಖಲೆಗಳನ್ನು ಸಲ್ಲಿಸುವಂತೆ ಕೋರಿ ಮುಖ್ಯ ಅಭಿಯಂತರರು, ಬೆಂಗಳೂರು ವಿದ್ಯುತ್ ಸರಬರಾಜು ನಿಗಮ ನಿಯಮಿತ (ಬೆಸ್ಕಾಂ) ಬೆಂಗಳೂರು ರವರಿಗೆ ಹಾಗೂ ನೀರು ಸರಬರಾಜು ಮತ್ತು ಒಳಚರಂಡಿ ಪತ್ರ ಬರೆಯಲಾಗಿದೆ.
ಇನ್ನು, ಮುಂದೆ ಇಲಾಖಾ ಅನುಮತಿ ಪಡೆಯದೇ ಯಾವುದೇ ಮನೆ ಮತ್ತು ಮಳಿಗೆಗಳಿಗೆ ನೀರು ಸರಬರಾಜು ಮತ್ತು ಒಳಚರಂಡಿ ವ್ಯವಸ್ಥೆಯ ಸಂಪರ್ಕ ನೀಡದಂತೆ ತಿಳಿಸಲಾಗಿದೆ ಎಂದು ಮುಜರಾಯಿ ಸಚಿವರು ತಿಳಿಸಿದರು.