ನೊಯ್ಡಾ : ತಾನು ಮಾಡಿದ ಕೆಲಸಕ್ಕೆ ಪೂರ್ಣ ಹಣ ಸಿಗದ ಕಾರಣ ಟೈಲ್ಸ್ ಮಾರಾಟಗಾರನೊಬ್ಬ ನೋಯ್ಡಾದಲ್ಲಿ 1 ಕೋಟಿ ರೂಪಾಯಿ ಮೌಲ್ಯದ ಮರ್ಸಿಡಿಸ್ ಕಾರಿಗೆ ಬೆಂಕಿ ಹಚ್ಚಿದ್ದಾನೆ.
ವರದಿಗಳ ಪ್ರಕಾರ ಕಾರು ಮಾಲೀಕರು ಇತ್ತೀಚೆಗೆ ತಮ್ಮ ಮನೆಯಲ್ಲಿ ಟೈಲ್ಸ್ ಅಳವಡಿಸಿದ್ದಾರೆ. ಆದ್ರೆ, ಅವರು ಟೈಲ್ಸ್ ಮಾರಾಟಗಾರರಿಗೆ ಪೂರ್ಣ ಮೊತ್ತವನ್ನ ಪಾವತಿಸಲಿಲ್ಲ. ಪೂರ್ಣ ಬಾಕಿಯನ್ನು ನೀಡದಿದ್ದಕ್ಕಾಗಿ ಕೋಪಗೊಂಡು ಸೇಡು ತೀರಿಸಿಕೊಳ್ಳಲು ಈ ವಿಧಾನವನ್ನ ಅನುಸರಿಸಿದ್ದಾನೆ.
ಸೋಮವಾರ ಮಧ್ಯಾಹ್ನ ಸದರ್ಪುರ್ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ಬೈಕ್ ಸವಾರ ಮರ್ಸಿಡಿಸ್ ಕಾರಿನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಓಡಿಸಿದ್ದಾನೆ.
ಭಾನುವಾರ ಮಧ್ಯಾಹ್ನ ತಮ್ಮ ಮರ್ಸಿಡಿಸ್ ಕಾರನ್ನ ತಮ್ಮ ಮನೆಯ ಹೊರಗೆ ನಿಲ್ಲಿಸಲಾಗಿತ್ತು ಎಂದು ಸದರ್ಪುರ್ ಗ್ರಾಮದ ನಿವಾಸಿ ಆಯುಷ್ ಚೌಹಾಣ್ ಹೇಳಿದ್ದಾರೆ. ಬೈಕ್ ಸವಾರನೊಬ್ಬ ತನ್ನ ಕಾರಿಗೆ ಬೆಂಕಿ ಹಚ್ಚಿದ್ದಾನೆ. ಆದಾಗ್ಯೂ, ಸ್ವಲ್ಪ ಸಮಯದ ನಂತರ ಬೆಂಕಿಯು ತನ್ನಷ್ಟಕ್ಕೆ ತಾನೇ ಆರಿಹೋಯಿತು. ಇಡೀ ಘಟನೆ ಹತ್ತಿರದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
Peeved over unpaid dues, contractor sets builder's Mercedes on fire in Noida #Mercedes #Fire #noida #News #loan #dues #Delhi #car #watchvideo pic.twitter.com/dGbpr0CixN
— Free Press Journal (@fpjindia) September 14, 2022
ಗ್ರೇಟರ್ ನೋಯ್ಡಾದ ರೋಜಾ ಜಲಾಲ್ಪುರ್ ಗ್ರಾಮದ ನಿವಾಸಿ ರಣವೀರ್ ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ರಣವೀರ್ ಹುಟ್ಟೂರು ಬಿಹಾರ ಎಂದು ಎಸಿಪಿ ರಜನೀಶ್ ವರ್ಮಾ ಹೇಳಿದ್ದು, ನೋಯ್ಡಾದಲ್ಲಿ ಕೆಲಸ ಮಾಡಲು ಬಿಹಾರದಿಂದ ಬಂದಿದ್ದಾನೆ. ಆತ ಮನೆಗಳಲ್ಲಿ ಟೈಲ್ಸ್ ಹಾಕುತ್ತಿದ್ದ ಎಂದಿದ್ದಾರೆ.
ಆಯುಷ್ ಚೌಹಾಣ್ ತನ್ನ ಮನೆಯಲ್ಲಿ ಟೈಲ್ಸ್ ಅಳವಡಿಸಿದ್ದಾರೆ ಎಂದು ಆರೋಪಿ ಹೇಳಿಕೊಂಡಿದ್ದು, ಆದ್ರೆ ಚೌಹಾಣ್ ಉಳಿದ 2.68 ಲಕ್ಷ ರೂ.ಗಳನ್ನ ಆತನಿಗೆ ಪಾವತಿಸಿಲ್ಲ. ಪದೇ ಪದೇ ಹಣ ಕೇಳಿದ ನಂತರವೂ ಚೌಹಾಣ್ ಹಣ ಪಾವತಿಸದಿದ್ದಾಗ, ರಣವೀರ್ ಕೋಪಗೊಂಡು ಸೇಡು ತೀರಿಸಿಕೊಳ್ಳಲು, ಚೌಹಾಣ್ ಕಾರಿಗೆ ಬೆಂಕಿ ಹಚ್ಚಿದ್ದಾನೆ.