ನವದೆಹಲಿ: ಇಂದು ಸುಪ್ರೀಂ ಕೋರ್ಟ್ ( Supreme Court ) ನ್ಯಾಯಪೀಠವು ಬಿಸಿಸಿಐ ಅಧ್ಯಕ್ಷ, ಕಾರ್ಯದರ್ಶಿ ಮತ್ತು ಇತರೆ ಪದಾಧಿಕಾರಿಗಳ ಕೂಲಿಂಗ್ ಆಫ್ ಅವಧಿಗೆ ಸಂಬಂಧಿಸಿದಂತೆ ನಿಯಮಗಳ ತಿದ್ದುಪಡಿಗೆ ಅನುಮತಿ ನೀಡಲಾಗಿದೆ. ಈ ಮೂಲಕ ಬಿಸಿಸಿಐ ( BCCI ) ಅಧ್ಯಕ್ಷರು ಸೇರಿದಂತೆ ಆಫೀಸ್ ಬೇರರ್ ನಿಯಮಗಳ ತಿದ್ದುಪಡಿಗೆ ಗ್ರೀನ್ ಸಿಗ್ನಲ್ ನೀಡಿದಂತೆ ಆಗಿದೆ.
ಈ ಸಂಬಂಧ ಸಲ್ಲಿಕೆಯಾಗಿದ್ದಂತ ಅರ್ಜಿಯ ವಿಚಾರಣೆ ನಡೆಸಿದಂತ ಸುಪ್ರೀಂ ಕೋರ್ಟ್ ನ್ಯಾಯಪೀಠವು, ತನ್ನ ನಿಯಮಗಳನ್ನು ತಿದ್ದುಪಡಿ ಮಾಡಲು ಬಿಸಿಸಿಐಗೆ ಅನುಮತಿ ನೀಡಿದೆ.
“ತಿದ್ದುಪಡಿಯು ಮೂಲ ಉದ್ದೇಶವನ್ನು ದುರ್ಬಲಗೊಳಿಸುವುದಿಲ್ಲ ಎಂದು ನಾವು ಪರಿಗಣಿಸಿದ್ದೇವೆ. ಪ್ರಸ್ತಾವಿತ ತಿದ್ದುಪಡಿಯನ್ನು ನಾವು ಒಪ್ಪಿಕೊಳ್ಳುತ್ತೇವೆ” ಎಂದು ಹೇಳಿದರು.
“ಬಿಸಿಸಿಐ ಪ್ರಸ್ತಾಪಿಸಿದ ತಿದ್ದುಪಡಿಯು ನಮ್ಮ ಮೂಲ ತೀರ್ಪಿನ ಸ್ಫೂರ್ತಿಯಿಂದ ವಿಚಲಿತವಾಗುವುದಿಲ್ಲ ಮತ್ತು ಅದನ್ನು ಸ್ವೀಕರಿಸಲಾಗಿದೆ” ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ದೇವಸ್ಥಾನಗಳ ಭೂಮಿ ಒತ್ತುವರಿದಾರರ ವಿರುದ್ದ ಕಠಿಣ ಕ್ರಮ – ಸಚಿವೆ ಶಶಿಕಲಾ ಜೊಲ್ಲೆ ಖಡಕ್ ಎಚ್ಚರಿಕೆ
ಅಂದಹಾಗೇ ಇಂದು ಅಧ್ಯಕ್ಷ, ಕಾರ್ಯದರ್ಶಿ ಮತ್ತು ಇತರ ಪದಾಧಿಕಾರಿಗಳಿಗೆ “ಕೂಲಿಂಗ್ ಆಫ್” ಅವಧಿಗೆ ಸಂಬಂಧಿಸಿದ ಬಿಸಿಸಿಐ ನಿಯಮಗಳನ್ನು ಬದಲಾಯಿಸುವ ವಿಷಯವನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿತು.
SC allows BCCI to amend its constitution,says, "We are of the considered view that the amendment would not dilute the original objective. We accept the proposed amendment."
"Amendment proposed by BCCI doesn't detract from spirit of our original judgment& is accepted," SC says. pic.twitter.com/SQmuBBvKRP
— ANI (@ANI) September 14, 2022