ಸಾಂಗ್ಲಿ : ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಲ್ಲಿ ನಾಲ್ವರು ಮಥುರಾದ ಸಾಧುಗಳನ್ನ ಜನರನ್ನ ಹೆಗ್ಗಮೊಗ್ಗ ಥಳಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಬೊಲೆರೊ ಕಾರಿನಲ್ಲಿದ್ದ ಸಾಧುಗಳು ಸ್ಥಳೀಯ ಜನರಿಗೆ ದಾರಿ ಕೇಳಿದ್ದು, ಆಗ ಆ ಜನರು ಅವರನ್ನ ಮಕ್ಕಳನ್ನ ಕದ್ದೊಯ್ಯುವ ಕಳ್ಳರೆಂದು ಭಾವಿಸಿ ಅವ್ರನ್ನ ಥಳಿಸಿದ್ದಾರೆ. ಸಧ್ಯ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಈ ಕುರಿತು ಸಾಧುಗಳಿಂದ ಯಾವುದೇ ದೂರು ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋಗಳನ್ನ ಪರಿಶೀಲಿಸಿ ಕ್ರಮ ಕೈಗೊಳ್ಳಬಹುದು. ಉತ್ತರ ಪ್ರದೇಶದ ನಾಲ್ವರು ಸಾಧುಗಳು ಸಾಂಗ್ಲಿ ಜಿಲ್ಲೆಯ ಲವಂಗ ಗ್ರಾಮವನ್ನ ತಲುಪಿದ್ದರು ಮತ್ತು ಪಂಢರಪುರಕ್ಕೆ ಹೋಗಬೇಕಾಗಿತ್ತು.
ಸೋಮವಾರ ರಾತ್ರಿ ದೇವಸ್ಥಾನದಲ್ಲಿ ತಂಗಿದ್ದರು. ಮಂಗಳವಾರ, ಅವ್ರು ಮುಂದಿನ ಪ್ರಯಾಣಕ್ಕೆ ಹೋರಟಾಗ, ಅವ್ರ ಒಬ್ಬ ಹುಡುಗನಿಗೆ ದಾರಿ ಕೇಳಿದ್ದು, ಈ ವೇಳೆ ಸ್ಥಳೀಯ ಕೆಲವರು ಮಕ್ಕಳ ಕಳ್ಳರ ತಂಡಕ್ಕೆ ಸೇರಿದವರು ಎಂದು ಶಂಕಿಸಿದ್ದಾರೆ. ಈ ವೇಳೆ ಗುಂಪು ಜಮಾಯಿಸಿ ಕೆಲವರು ಸಾಧುಗಳನ್ನ ಥಳಿಸಿದರು. ಪೊಲೀಸರು ಸ್ಥಳಕ್ಕಾಗಮಿಸಿ ತನಿಖೆ ನಡೆಸಿದಾಗ ಅವ್ರು ಮಕ್ಕಳ ಕಳ್ಳರಲ್ಲ, ಮಥುರಾದ ಪಂಚದಶನಂ ಜುನ ಅಖಾರದ ಸನ್ಯಾಸಿಗಳು ಎಂಬುದು ಗೊತ್ತಾಯಿತು.
ವೈರಲ್ ವಿಡಿಯೋ ನೋಡಿ.!
– बच्चा चोर गैंग समझ 4 साधुओं की बुरी तरह पिटाई
– सांगली जिले के लवंगा में चौंकाने वाली घटना
– उत्तर प्रदेश के मथुरा से चार साधु कर्नाटक में भगवान के दर्शन के लिए आए थे।
रात के समय गांव के एक मंदिर में रुके थे #Maharashtra #Sangli #sadhu #palghar #mumbai pic.twitter.com/DsLJ3g5dff— rahul shukla (@rshukla676) September 14, 2022
ಈ ಬಗ್ಗೆ ನಮಗೆ ಇದುವರೆಗೆ ಯಾವುದೇ ದೂರು ಬಂದಿಲ್ಲ. ಆದ್ರೆ, ವೈರಲ್ ವೀಡಿಯೊಗಳು ಮತ್ತು ಸತ್ಯಗಳನ್ನ ನಮ್ಮ ಕಡೆಯಿಂದ ತನಿಖೆ ಮಾಡಲಾಗುತ್ತಿದೆ. ಈ ವಿಚಾರದಲ್ಲಿ ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ಸಾಂಗ್ಲಿ ಎಸ್ಪಿ ದೀಕ್ಷಿತ್ ಗೆಡಂ ಹೇಳಿದ್ದಾರೆ.
ಬಿಜೆಪಿ ಬೆಂಬಲಿತ ಏಕನಾಥ್ ಶಿಂಧೆ ಸರ್ಕಾರದಲ್ಲಿ ಪ್ರತಿಪಕ್ಷಗಳು ಇಂತಹ ಘಟನೆಯ ಮೇಲೆ ದಾಳಿ ಮಾಡಬಹುದು ಎಂದು ಮಾತನಾಡಿಕೊಳ್ಳಲಾಗ್ತಿದೆ. ಯಾಕಂದ್ರೆ, ಉದ್ಧವ್ ಠಾಕ್ರೆ ಸರ್ಕಾರದ ಅವಧಿಯಲ್ಲಿ, ಸಾಧುವಿನ ಹತ್ಯೆಯ ಬಗ್ಗೆ ಸಾಕಷ್ಟು ಗದ್ದಲ ನಡೆದಿತ್ತು ಮತ್ತು ಬಿಜೆಪಿಯು ಶಿವಸೇನೆ ವಿರುದ್ಧ ವಾಗ್ದಾಳಿ ನಡೆಸಿತ್ತು. ಸಾಧುವಿನ ಮೇಲೆ ದಾಳಿ ಮಾಡುವುದು ಹಿಂದುತ್ವದ ಮೇಲಿನ ದಾಳಿಯಂತೆ ಎಂದು ಬಿಜೆಪಿ ಹೇಳಿದ್ದು, ಶಿವಸೇನೆ ಹಿಂದುತ್ವದೊಂದಿಗೆ ರಾಜಿ ಮಾಡಿಕೊಂಡಿದೆ.