ಬೆಂಗಳೂರು: 2030ರೊಳಗೆ ರಾಜ್ಯದ ಎಲ್ಲ ಬಸ್ಗಳನ್ನು ಎಲೆಕ್ಟ್ರಿಕ್ ಬಸ್ ಮಾಡುವ ಗುರಿಯನ್ನು ಹೊಂದಿದೆ ಎಂದು ಸಚಿವ ಶ್ರೀರಾಮುಲು ಘೋಷಣೆ ಮಾಡಿದ್ದಾರೆ.
BIGG BREAKING NEWS: ಮುರುಘಾಮಠದ ಶ್ರೀಗಳಿಗೆ ಸದ್ಯಕ್ಕಿಲ್ಲ ಬೇಲ್ ; ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ
ವಿಧಾನಸಭೆ ಕಲಾಪದಲ್ಲಿ ಎಲೆಕ್ಟ್ರಿಕ್ ಬಸ್ ಬಳಕೆ ಕಡಿಮೆಯಾಗ್ತಿದೆ ಅಂತಾ ಶಾಸಕ ತನ್ವೀರ್ ಸೇಠ್ ಅವರು ಪ್ರಶ್ನೆ ಮಾಡಿದ್ದರು. ಇದಕ್ಕೆ ಉತ್ತರಿಸಿದ ಅವರು, ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲಿ ಸ್ಮಾರ್ಟ್ ಸಿಟಿ ಅಡಿ 90ಎಲೆಕ್ಟ್ರಿಕ್ ಬಸ್ ಕಾಂಟ್ರಾಕ್ಟ್ ಗೆ ಪಡೆಯಲಾಗಿದೆ. ಇದು 12ವರ್ಷ ಕಾಂಟ್ರಾಕ್ಟ್ ಇರಲಿದೆ. ನಮ್ಮಿಂದ ಕೇವಲ ಕಂಡಕ್ಟರ್ ಮಾತ್ರ ಇರುತ್ತಾರೆ ಎಂದರು.
ಎಲೆಕ್ಟ್ರಿಕ್ ಬಸ್ ಸಂಚಾರವನ್ನು ರಾಜ್ಯಾದ್ಯಂತ ವಿಸ್ತರಣೆ ಮಾಡುವ ಕೆಲಸ ಆಗಲಿದೆ. ಡೀಸಲ್ ಬೆಲೆ ಹೆಚ್ಚಳವಾಗಿದ್ರಿಂದ ನಮಗೆ ನಷ್ಟವಾಗಿದೆ, ಎಲೆಕ್ಟ್ರಿಕ್ ಬಸ್ ಗಳಿಂದ ಮುಂದೆ ಲಾಭದಾಯಕ ಆಗಬಹುದು ಎಂದು ಶ್ರೀರಾಮುಲು ಅಭಿಪ್ರಾಯ ವ್ಯಕ್ತಪಡಿಸಿದರು.