ಬೆಂಗಳೂರು : ಸದ್ಯಕ್ಕೆ BJP ಸರ್ಕಾರದ ಹಗರಣಗಳ ಸರಮಾಲೆ ನಿಲ್ಲುವಂತೆ ಕಾಣುತ್ತಿಲ್ಲ, ಆ ಪಟ್ಟಿಗೆ ಹೊಸ ಸೇರ್ಪಡೆ PHD ಪ್ರವೇಶ ಪರೀಕ್ಷೆ ಹಗರಣ ಎಂದು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಸದ್ಯಕ್ಕೆ BJP ಸರ್ಕಾರದ ಹಗರಣಗಳ ಸರಮಾಲೆ ನಿಲ್ಲುವಂತೆ ಕಾಣುತ್ತಿಲ್ಲ, ಆ ಪಟ್ಟಿಗೆ ಹೊಸ ಸೇರ್ಪಡೆ PHD ಪ್ರವೇಶ ಪರೀಕ್ಷೆ ಹಗರಣ, PSI ಹಗರಣದಲ್ಲೂ ಅಶ್ವಥ್ ನಾರಾಯಣ ಹೆಸರು ಕೇಳಿ ಬಂದಿತ್ತು. ಈಗ ಅವರದೇ ಇಲಾಖೆಯಲ್ಲಿ ಅಕ್ರಮ ನಡೆದಿದೆ. ಸಿಎಂ ಬಸವರಾಜ ಬೊಮ್ಮಾಯಿ ಅವರೇ ಈಗಲಾದರೂ ನಿಷ್ಪಕ್ಷಪಾತ ತನಿಖೆ ನಡೆಸುತ್ತೀರೋ? ಅಥವಾ PSI ಹಗರಣದಂತೆ ಹಳ್ಳ ಹಿಡಿಸುತ್ತೀರೋ?ಎಂದು ಪ್ರಶ್ನಿಸಿದ್ದಾರೆ.
ಸದ್ಯಕ್ಕೆ BJP ಸರ್ಕಾರದ ಹಗರಣಗಳ ಸರಮಾಲೆ ನಿಲ್ಲುವಂತೆ ಕಾಣುತ್ತಿಲ್ಲ
ಆ ಪಟ್ಟಿಗೆ ಹೊಸ ಸೇರ್ಪಡೆ PHD ಪ್ರವೇಶ ಪರೀಕ್ಷೆ ಹಗರಣ
PSI ಹಗರಣದಲ್ಲೂ @drashwathcn ಅವರ ಹೆಸರು ಕೇಳಿ ಬಂದಿತ್ತು. ಈಗ ಅವರದೇ ಇಲಾಖೆಯಲ್ಲಿ ಅಕ್ರಮ ನಡೆದಿದೆ@BSBommai ಈಗಲಾದರೂ ನಿಷ್ಪಕ್ಷಪಾತ ತನಿಖೆ ನಡೆಸುತ್ತೀರೋ? ಅಥವಾ PSI ಹಗರಣದಂತೆ ಹಳ್ಳ ಹಿಡಿಸುತ್ತೀರೋ? pic.twitter.com/3ijZHQJYhd
— Randeep Singh Surjewala (@rssurjewala) September 14, 2022