ಪುದುಚೇರಿ : ಪೋಷಕರೇ ಎಚ್ಚರ.. ಎಚ್ಚರ ಮಕ್ಕಳ ಎದುರು ಯಾವುದೇ ಕಾರಣಕ್ಕೂ ವಿಷಯುಕ್ತ ವಸ್ತುಗಳನ್ನು ಇಡಬೇಡಿ..ಮುಗ್ದ ಮನಸ್ಸಿನ ಮಕ್ಕಳು ತಿಳಿಯದೇ ಸಿಕ್ಕಿದನ್ನು ಬಾಯಿ ಹಾಕಿ ಯಡವಟ್ಟು ಮಾಡಿಕೊಳ್ಳುವುದು ಸಹಜ. ಹಾಗಾಗಿ ಪೋಷಕರು ಮನೆಯಲ್ಲಿ ಎಚ್ಚರ ವಹಿಸೋದು ಅತ್ಯಗತ್ಯವಾಗಿದೆ.
ವಿಷಪೂರಿತ ಹಾವು ಕಚ್ಚಿದ ಕೆಲವೇ ನಿಮಿಷಗಳಲ್ಲಿ ಸಾವನ್ನಪ್ಪಿದ ರಾಜಸ್ಥಾನದ ‘ಸ್ನೇಕ್ ಮ್ಯಾನ್’… ವಿಡಿಯೋ
ಇಲ್ಲೊಂದೆಡೆ ಚಾಕೋಲೇಟ್ ಕೇಕ್ ಎಂದು ʻ ಇಲಿ ಪಾಶಾಣ ʼ ತಿಂದ ಬಾಲಕಿ ಸಾವನ್ನಪ್ಪಿದ ದುರಂತ ಘಟನೆ ದಕ್ಷಿಣ ಪುದುಚೇರಿಯಲ್ಲಿ ನಡೆದಿದ್ದು ಬೆಳಕಿಗೆ ಬಂದಿದೆ.
ಬಾಲಕಿ ಆರ್. ಸಲೋತ್ ನಿತಿಕ್ಷಿಣ ಭಾನುವಾರ ವಾಂತಿ ಮಾಡುತ್ತಿದ್ದಳು. ಈ ವೇಳೆ ತಾಯಿ ಬಾಲಕಿಯನ್ನು ಪ್ರಶ್ನಿಸಿದಾಗ ಮನೆಯ ಕಿಟಕಿಯಲ್ಲಿದ್ದ ಚಾಕೋಲೇಟ್ ಕೇಕ್ ತಿಂದಿರುವುದಾಗಿ ಹೇಳಿದ್ದಾಳೆ. ಮನೆಯಲ್ಲಿ ದಿನ ಕಾಟ ನೀಡುತ್ತಿದ್ದ ಇಲಿಗಳನ್ನು ಓಡಿಸೋದಕೆ ತಂದಿಟಿದ್ದ ವಿಷವನ್ನು ಮಗಳು ಸೇವಿಸಿರುವುದು ತಕ್ಷಣ ತಾಯಿ ತಿಳಿದು ಕೂಡಲೇ ಕೊಟ್ಟುಚೇರಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ವಿಷಪೂರಿತ ಹಾವು ಕಚ್ಚಿದ ಕೆಲವೇ ನಿಮಿಷಗಳಲ್ಲಿ ಸಾವನ್ನಪ್ಪಿದ ರಾಜಸ್ಥಾನದ ‘ಸ್ನೇಕ್ ಮ್ಯಾನ್’… ವಿಡಿಯೋ
ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕೆ ಹೆಚ್ಚಿನ ಚಿಕಿತ್ಸೆಗಾಗಿ ಕಾರೈಕಲ್ನ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಮೃತಪಟ್ಟಿದ್ದಾಳೆ. ಈ ಬಗ್ಗೆ ಸೆಕ್ಷನ್ 174ರ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಈ ಬಗ್ಗೆ ತಿಳಿದುಕೊಂಡು ಇನ್ನಾದ್ರೂ ಪೋಷಕರು ಮಕ್ಕಳ ಬಗ್ಗೆ ಎಚ್ಚೆತ್ತುಕೊಳ್ಳುವುದು ಮುಖ್ಯವಾಗಿದೆ.