ಭೋಪಾಲ್: ಮಧ್ಯಪ್ರದೇಶದ ಭೋಪಾಲ್ನಲ್ಲಿ ಮೂರೂವರೆ ವರ್ಷದ ನರ್ಸರಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಬಂಧಿತ ಶಾಲಾ ಬಸ್ ಚಾಲಕನ ಮನೆಯನ್ನು ಅಧಿಕಾರಿಗಳು ಮಂಗಳವಾರ ನೆಲಸಮಗೊಳಿಸಿದ್ದಾರೆ.
ಭೋಪಾಲ್ನ ಶಾಹಪುರ ಪ್ರದೇಶದಲ್ಲಿರುವ ಆರೋಪಿಯ ಮನೆ ಧ್ವಂಸವು ಪೊಲೀಸರ ಮೇಲ್ವಿಚಾರಣೆಯಲ್ಲಿ ನಡೆದಿದೆ. ಅನಧಿಕೃತವಾಗಿ ನಿರ್ಮಾಣ ಕಾಮಗಾರಿ ಕೆಡವಲು ಅಧಿಕಾರಿಗಳು ಅಧಿಕೃತ ಕಾರಣ ನೀಡಿದ್ದಾರೆ.
ಕಳೆದ ಗುರುವಾರ ಭೋಪಾಲ್ನಲ್ಲಿ ಈ ಘಟನೆ ನಡೆದಿದೆ. ಬಸ್ ಚಾಲಕನ ಜೊತೆಗೆ ವಾಹನದೊಳಗೆ ಇದ್ದ ಮಹಿಳಾ ಅಟೆಂಡರ್ನನ್ನು ಸಹ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376-ಎಬಿ (12 ವರ್ಷದೊಳಗಿನ ಬಾಲಕಿಯ ಅತ್ಯಾಚಾರ) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.
ಭೋಪಾಲ್ನ ಪ್ರಮುಖ ಖಾಸಗಿ ಶಾಲೆಯಲ್ಲಿ ಓದುತ್ತಿರುವ ಮಗು ಬಸ್ನಲ್ಲಿ ಮನೆಗೆ ಹಿಂದಿರುಗುತ್ತಿದ್ದಾಗ ಈ ಕೃತ್ಯ ನಡೆದಿದೆ. ಬಾಲಕಿ ಮನೆಗೆ ಮರಳಿದ ಬಳಿಕ ತನ್ನ ಬ್ಯಾಗ್ನಲ್ಲಿ ಇಟ್ಟಿದ್ದ ಸ್ಪೇರ್ ಸೆಟ್ನಿಂದ ಮಗುವಿನ ಬಟ್ಟೆಯನ್ನು ಯಾರೋ ಬದಲಾಯಿಸಿದ್ದನ್ನು ಆಕೆಯ ತಾಯಿ ಗಮನಿಸಿದ್ದಾರೆ. ನಂತರ ತಾಯಿ ತನ್ನ ಮಗಳ ಕ್ಲಾಸ್ ಟೀಚರ್ ಮತ್ತು ಶಾಲೆಯ ಪ್ರಾಂಶುಪಾಲರನ್ನು ವಿಚಾರಿಸಿದರು. ಆದರೆ, ಇಬ್ಬರೂ ಮಗುವಿನ ಬಟ್ಟೆಯನ್ನು ಬದಲಾಯಿಸಿಲ್ಲ ಎಂದಿದ್ದಾರೆ.
ಡ್ರೆಸ್ ಬದಲಾಯಿಸಿದ ಬಗ್ಗೆ ಮಗುವನ್ನು ಕೇಳಿದಾಗ, ಬಾಲಕಿ “ಬಸ್ ಅಂಕಲ್” ಡ್ರೆಸ್ ಬದಲಾಯಿಸಿದ್ದಾರೆ ಎಂದು ಹೇಳಿದಳಿ. ಅಷ್ಟೇ ಅಲ್ಲದೇ, ಚಾಲಕ ತನ್ನ ಖಾಸಗಿ ಭಾಗಗಳು, ಮುಖ, ತುಟಿಗಳನ್ನು ಸ್ಪರ್ಶಿಸಿದ್ದಾನೆ ಎಂದು ಬಾಲಕಿ ತಾಯಿಗೆ ತಿಳಿಸಿದ್ದಾಳೆ.
BIG NEWS: ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ: ಮೊದಲ ಬಾರಿಗೆ ʻತೃತೀಯ ಲಿಂಗಿ’ಗಳಿಗೆ ಮೀಸಲಾತಿ!
BIG NEWS: ಅಗತ್ಯ ಔಷಧಗಳ ಪಟ್ಟಿ ಸೇರಿದ ’34 ಹೊಸ ಔಷಧ’ಗಳು: ‘ಕ್ಯಾನ್ಸರ್ ಮೆಡಿಸನ್ಸ್’ ಈಗ ಕೊಂಚ ಅಗ್ಗ
BIG NEWS: ಪ್ರತೀ ಲೀ. ಹಾಲಿನ ದರ 3 ರೂ. ಹೆಚ್ಚಳಕ್ಕೆ ತೀರ್ಮಾನ: ಸಹಕಾರ ಸಚಿವ ಎಸ್.ಟಿ. ಸೋಮಶೇಖರ್