ಬೆಂಗಳೂರು: ಸೆ. 8ರಂದು ನಿಗದಿಯಾಗಿ ಮುಂದೂಡಲ್ಪಟ್ಟಿದ್ದ ರಾಜ್ಯ ಸಚಿವ ಸಂಪುಟ ಸಭೆ ಇಂದು ಸಂಜೆ 5 ಗಂಟೆಗೆ ನಡೆಯಲಿದೆ.
ಸಿಎಂ ಬಸವರಾಜ ಬೊಮ್ಮಾಯಿಯವರ ( Chief Minister Basavaraj Bommai ) ನೇತೃತ್ವದಲ್ಲಿ ಮಹತ್ವದ ರಾಜ್ಯ ಸಚಿವ ಸಂಪುಟ ಸಭೆ ಸೆ. 8ರಂದು ನಿಗಧಿಯಾಗಿತ್ತು. ಆದ್ರೆ, ಸಚಿವ ಸಂಪುಟದ ( Karnataka Cabinet Meeting ) ಸಹೋದ್ಯೋಗಿ ಉಮೇಶ್ ಕತ್ತಿ ನಿಧನರಾದ ಹಿನ್ನಲೆಯಲ್ಲಿ, ರಾಜ್ಯಾಧ್ಯಂತ ಮೂರು ದಿನಗಳ ಕಾಲ ಶೋಕಾಚರಣೆ ಘೋಷಣೆ ಮಾಡಲಾಗಿತ್ತು. ಈ ಹಿನ್ನಲೆಯಲ್ಲಿ ಸಚಿವ ಸಂಪುಟ ಸಭೆಯನ್ನು ಮುಂದೂಡಲಾಗಿತ್ತು.
ಸಚಿವ ಉಮೇಶ್ ಕತ್ತಿ ( Minister Umesh Katti ) ಹೃದಯಾಘಾತದಿಂದ ಸೆ. 6ರಂದು ನಿಧನರಾಗಿದರು. ಈ ಹಿನ್ನಲೆಯಲ್ಲಿ ರಾಜ್ಯ ಸರ್ಕಾರದಿಂದ ರಾಜ್ಯಾಧ್ಯಂತ ಮೂರು ದಿನಗಳ ಕಾಲ ಶೋಕಾಚರಣೆ ಘೋಷಣೆ ಮಾಡಲಾಗಿತ್ತು. ಈ ಕಾರಣದಿಂದಾಗಿ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸೆ. 8ರಂದು ನಡೆಯಬೇಕಿದ್ದಂತ ಸಚಿವ ಸಂಪುಟ ಸಭೆಯನ್ನು ಇಂದು ಸಂಜೆ 5 ಗಂಟೆಗೆ ನಿಗದಿ ಮಾಡಲಾಗಿದೆ.
BIG NEWS: ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ: ಮೊದಲ ಬಾರಿಗೆ ʻತೃತೀಯ ಲಿಂಗಿ’ಗಳಿಗೆ ಮೀಸಲಾತಿ!
BIG NEWS: ಇಂದು ಮತ್ತೆ ನಲಪಾಡ್ ಅಕಾಡೆಮಿ ಆವರಣದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರಿಕೆ
BIG NEWS: ಬೆಂಗಳೂರಿನಲ್ಲಿ ಮಳೆ ಹಾನಿ ತಡೆಗೆ ಮಾಸ್ಟರ್ ಪ್ಲಾನ್, 2 ವರ್ಷದಲ್ಲೇ ಕಾಮಗಾರಿ ಪೂರ್ಣ: ಸಿಎಂ ಬೊಮ್ಮಾಯಿ