ಬೆಂಗಳೂರು: ಮಹಾನಗರದಲ್ಲಿ ರಾಜಕಾಲುವೆ ಮತ್ತು ಕೆರೆ ಒತ್ತುವರಿ ತೆರವು ಕಾರ್ಯಾಚರಣೆ ಚುರುಕಾಗಿ ನಡೆಯುತ್ತಿದೆ. ನಿನ್ನೆ ಯುವ ಕಾಂಗ್ರೆಸ್ ನಾಯಕ ಮೊಹಮ್ಮದ್ ನಲಪಾಡ್ (Mohammad Nalapad) ಮಾಲಿಕತ್ವದ, ನಲಪಾಡ್ ಅಕಾಡೆಮಿ ಆವರಣದಲ್ಲಿ ಜೆಸಿಬಿ ಮೂಲಕ ತೆರವು ಕಾರ್ಯಾಚರಣೆ ನಡೆಸಿತ್ತು.
ಇಂದೂ ಕೂಡ ಉಳಿದ ಜಾಗವನ್ನು ಬಿಬಿಎಂಪಿ ತೆರವು ಮಾಡಲಿದೆ. ಇನ್ನೂ ಶೇ. 35ರಷ್ಟು ಒತ್ತುವರಿ ಕಾರ್ಯಾಚರಣೆ ಮುಗಿದಿದ್ದು, ಉಳಿದ ಭಾಗವನ್ನು ಇಂದು ಬೆಳಗ್ಗೆ 10 ಗಂಟೆಗೆ ಮತ್ತೆ ತೆರವು ಕಾರ್ಯಾಚರಣೆ ಶುರುವಾಗಲಿದೆ.
ಮಹದೇವಪುರ ವಿಧಾನಸಭಾ ಕ್ಷೇತ್ರದ ಚಲ್ಲಗಟ್ಟಾದಲ್ಲಿ ನಲಪಾಡ್ ಅಕಾಡೆಮಿ ಸರ್ವೆ ನಂ.70ನ್ನು ಒತ್ತುವರಿ ಮಾಡಿಕೊಂಡಿದ್ದು, ಇದೀಗ ಅದರ ತೆರವು ಕಾರ್ಯವನ್ನು ಬಿಬಿಎಂಪಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಆರಂಭಿಸಿದ್ದಾರೆ.
ಎರಡು ವಾರಗಳ ಹಿಂದೆ ಜಲಾವೃತಗೊಂಡ ಬೆಂಗಳೂರಿನ ಕೆಲವು ಭಾಗಗಳಲ್ಲಿ ಮಳೆನೀರು ಚರಂಡಿಗಳ ಮೇಲಿನ ಅತಿಕ್ರಮಣಗಳನ್ನು ತೆಗೆದುಹಾಕಲು ನಡೆಯುತ್ತಿರುವ ಡೆಮಾಲಿಷನ್ ಡ್ರೈವ್ ಅನ್ನು ನಡೆಸಲಾಗುತ್ತಿದೆ.
BIG NEWS : ಚಾಮರಾಜನಗರದ ಕೆಲವೆಡೆ ಭೂಮಿ ಕಂಪಿಸಿದ ಅನುಭವ: ಮನೆ ಬಿಟ್ಟು ಹೊರಬಂದ ಜನರು
BIG NEWS: ಬೆಂಗಳೂರಿನಲ್ಲಿ ಮಳೆ ಹಾನಿ ತಡೆಗೆ ಮಾಸ್ಟರ್ ಪ್ಲಾನ್, 2 ವರ್ಷದಲ್ಲೇ ಕಾಮಗಾರಿ ಪೂರ್ಣ: ಸಿಎಂ ಬೊಮ್ಮಾಯಿ