ನವದೆಹಲಿ : ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವ್ರು ಸೆಪ್ಟೆಂಬರ್ 13 ರಂದು ಎಲ್ಲಾ ವಿಶೇಷ ಆರ್ಥಿಕ ವಲಯಗಳಲ್ಲಿ (SEZ) ವರ್ಕ್ ಫ್ರಮ್ ಹೋಮ್ (WFH)ಗೆ ಅನುಮತಿ ನೀಡಲು ಸರ್ಕಾರ ನಿರ್ಧರಿಸಿದೆ ಎಂದು ಹೇಳಿದರು.
ಈ ವರ್ಕ್ ಫ್ರಮ್ ಹೋಮ್ ಸಂಸ್ಕೃತಿಯು ಸಣ್ಣ ನಗರಗಳಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಮತ್ತು ಸೇವೆಗಳ ರಫ್ತನ್ನ ಹೆಚ್ಚಿಸುತ್ತದೆ ಎಂದು ಗೋಯಲ್ ಅಭಿಪ್ರಾಯಪಟ್ಟರು.
ವಾಣಿಜ್ಯ ಮಂಡಳಿ ಸಭೆಯಲ್ಲಿ ಭಾಗವಹಿಸಿದ ನಂತ್ರ ಮಾಧ್ಯಮಗಳೊಂದಿಗೆ ಮಾತನಾಡಿದ ಗೋಯಲ್, “ನಾವು ಎಲ್ಲಾ SEZ ವಲಯಗಳಲ್ಲಿ ಮನೆಯಿಂದ ಕೆಲಸ ಮಾಡಲು ಅನುಮತಿ ನೀಡಲು ನಿರ್ಧರಿಸಿದ್ದೇವೆ, ಏಕೆಂದರೆ ಅದಕ್ಕಾಗಿ ಅನೇಕ ವಲಯಗಳಿಂದ ವಿನಂತಿ ಬಂದಿದೆ. ಇದು ಸಣ್ಣ ನಗರಗಳಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಮತ್ತು ಸೇವೆಗಳ ರಫ್ತನ್ನ ಹೆಚ್ಚಿಸುತ್ತದೆ” ಎಂದು ಹೇಳಿದರು.
Delhi | We've decided to allow work from home in all SEZ sectors as a request for it has come from many quarters. It'll create employment opportunities in small cities & increase the export of services: Union Minister Piyush Goyal after attending Board of Trade meeting pic.twitter.com/3bbECcjTLt
— ANI (@ANI) September 13, 2022