ಬೆಂಗಳೂರು : ವಿಧಾನಸಭೆಯಲ್ಲಿ ಮಡಿಕೇರಿಯಲ್ಲಿ ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಹೊಡೆದ ವಿಚಾರವನ್ನು ಪ್ರಸ್ತಾಪ ಮಾಡುವ ಮೂಲಕ ಸಿದ್ದರಾಮಯ್ಯ ಮಾತನಾಡಿ ʻಮೊಟ್ಟೆ ಹೊಡೆಸಿದ್ದೇ ಅಪ್ಪಚ್ಚು ರಂಜನ್ ʼ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾನು ಕೊಡಗು ಹಾಸನಕ್ಕೆ ಮಳೆ ಹಾನಿ ಪರಿಶೀಲನೆಗೆ ಹೋಗಿದ್ದೆ, ಮಡಿಕೇರಿಯಲ್ಲಿ ನನ್ನ ವಿರುದ್ಧ ಕಪ್ಪು ಬಾವುಟ ತೋರಿದ್ದರು. ಮೊಟ್ಟೆ ಹೊಡೆದರು ಎಂದು ಸಿದ್ದರಾಮಯ್ಯ ಮೊಟ್ಟೆ ಹೊಡೆಸಿದ್ದೇ ಅಪ್ಪಚ್ಚು ರಂಜನ್ ವಿಧಾನ ಸಭೆಯಲ್ಲಿ ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ.
ನಾವು ಅದನ್ನೇ ಮಾಡಿಕೊಂಡು ಬಂದಿರೋದು. ಅದಕ್ಕೆ ನಾವು ಹೆದರೋ ಮಕ್ಕಳಲ್ಲ. ಕೊಡಗಿನ ಜನರು ತುಂಬಾ ಒಳ್ಳೆಯವರು. ಆದ್ರೆ ಕೊಡಗಿನ ಜನರನ್ನು ಎತ್ತಿಕಟ್ಟಿದ್ದಾರೆ. ವಿಧಾನ ಸಭೆಯಲ್ಲಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.