ಭುವನೇಶ್ವರ: ಒಡಿಶಾದ ಕಲಹಂಡಿಯಲ್ಲಿ ವಿಶಿಷ್ಟ ವಿವಾಹ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಲ್ಲಿ ವಿವಾಹಿತ ಪುರುಷನು ತನ್ನ ಹೆಂಡತಿಯ ಅನುಮತಿಯ ನಂತರ ಮಂಗಳಮುಖಿಯನ್ನು ಮದುವೆಯಾಗಿದ್ದಾನೆ.
ಪತ್ನಿ ತನ್ನ ಮಂಗಳ ಮುಖಿ ಜೊತೆಗೆ ರಹಸ್ಯ ಪ್ರೀತಿಯನ್ನು ಒಪ್ಪಿಕೊಂಡ ನಂತರ ತನ್ನ ಗಂಡನಿಗೆ ಮಂಗಳ ಮುಖಿ ಜೊತೆಗೆ ಮದುವೆ ಮಾಡಿ ಮೂವರು ಒಂದೇ ಸೂರಿನಡಿ ವಾಸಿಸಲು ಅನುಮತಿಸಿದಳು. 32 ವರ್ಷದ ವ್ಯಕ್ತಿಗೆ ಎರಡು ವರ್ಷದ ಮಗನೂ ಇದ್ದಾನೆ. ಆ ವ್ಯಕ್ತಿಯು ಕಳೆದ ಒಂದು ವರ್ಷದಿಂದ ತೃತೀಯ ಲಿಂಗಿಯೊಂದಿಗೆ ಸಂಬಂಧ ಹೊಂದಿದ್ದನು ಎನ್ನಲಾಗಿದೆ. ಭಾನುವಾರ ನಾರ್ಲಾದಲ್ಲಿರುವ ದೇವಾಲಯದಲ್ಲಿ ನಡೆದ ಸರಳ ಸಮಾರಂಭದಲ್ಲಿ ಈ ಮದುವೆ ನಡೆಯಿತು. ಈ ಸಮಯದಲ್ಲಿ ತೃತೀಯ ಲಿಂಗಿ ಸಮುದಾಯದ ಕೆಲವು ಸದಸ್ಯರು ಸಹ ವಿವಾಹದ ಭಾಗವಾದರು. ಸೆಬ್ಕಾರಿ ಕಿನ್ನರ್ ಮಹಾಸಂಘದ ಅಧ್ಯಕ್ಷೆ ಕಾಮಿನಿ ಅವರು ಇಬ್ಬರಿಗೂ ಕನ್ಯಾದಾನ ನೆರವೇರಿಸಿದರು. “ಅವರಿಬ್ಬರಿಗೂ ನಾವು ತುಂಬಾ ಸಂತೋಷವಾಗಿದ್ದೇವೆ ಮತ್ತು ಅವರಿಗೆ ಸಮೃದ್ಧ ಜೀವನವನ್ನು ಹಾರೈಸುತ್ತೇವೆ ಅಂತ ಹೇಳಿದ್ದಾರೆ.