ಬೆಂಗಳೂರು : ರಾಜ್ಯ ಸರ್ಕಾರದ ವತಿಯಿಂದ ಹಿಂದಿ ದಿವಸ್ ಆಚರಣೆಗೆ ಜೆಡಿಎಸ್ ವಿರೋಧ ವ್ಯಕ್ತಪಡಿಸಿದೆ. ಸೆಪ್ಟಂಬರ್ 14ರ ನಾಳೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ಕರೆ ನೀಡಿದೆ.
BIGG NEWS : ರೈತರೇ ಗಮನಿಸಿ : ಪ್ರಧಾನ ಮಂತ್ರಿ ಕಿಸಾನ್ ಇಕೆವೈಸಿ ಗಡುವು ನಾಳೆಗೆ ಅಂತ್ಯ
ರಾಜ್ಯ ಸರ್ಕಾರದ ಹಿಂದಿ ದಿವಸ್ ಆಚರಣೆಯನ್ನು ವಿರೋಧಿಸಿ ಜನತಾ ದಳ ಪಕ್ಷವು ದಿನಾಂಕ 14-09-2022 ರಂದು ಮಧ್ಯಾಹ್ನ 3:00 ಘಂಟೆಗೆ ಪಕ್ಷದ ಕಚೇರಿ ಜೆಪಿ ಭವನದ ಮುಂಭಾಗದ ವೃತ್ತದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುಧ್ಧ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದೆ.
BIGG NEWS : ಮೂಡಾ ನಿವೇಶನ ಹಗರಣ : ಮಂಡ್ಯದ ಇಬ್ಬರು ಹಾಲಿ, ಓರ್ವ ಮಾಜಿ ಶಾಸಕನಿಗೆ ಶುರುವಾಯ್ತು ಢವ ಢವ.!
ಈ ಪ್ರತಿಭಟನೆಯನ್ನು ಮಾಜಿ ಕೇಂದ್ರ ಸಚಿವರಾದ ಹಾಗೂ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷರಾದ ಸಿ.ಎಂ. ಇಬ್ರಾಹಿಂರವರ ನೇತೃತ್ವದಲ್ಲಿ ನಡೆಯಲಿದ್ದು, ಪಕ್ಷದ ಎಲ್ಲಾ ಮುಖಂಡರು, ಶಾಸಕರು, ವಿಧಾನಪರಿಷತ್ ಸದಸ್ಯರು, ಮಾಜಿ ಸಂಸದರು/ಮಾಜಿ ಶಾಸಕರು ಕ್ಷೇತ್ರ ಸಮಿತಿ ಅಧ್ಯಕ್ಷ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
#HindiDiwas ಆಚರಣೆಯನ್ನು ವಿರೋಧಿಸಿ ಜನತಾ ದಳ ಪಕ್ಷವು ದಿನಾಂಕ 14-09-2022 ರಂದು ಮಧ್ಯಾಹ್ನ 3:00 ಘಂಟೆಗೆ ಪಕ್ಷದ ಕಚೇರಿ ಜೆಪಿ ಭವನದ ಮುಂಭಾಗದ ವೃತ್ತದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುಧ್ಧ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ.
ಎಲ್ಲರೂ ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕೋರುತ್ತೇವೆ. pic.twitter.com/34pBvDbygl
— JDS Bengaluru | ಜನತಾ ದಳ-ಬೆಂಗಳೂರು (@JDS_Bengaluru) September 13, 2022